ಪ್ಯಾನ್-ಆಧಾರ್ ಲಿಂಕ್ ವಿಳಂಬಕ್ಕೆ ಸರ್ಕಾರ ಸಂಗ್ರಹಿಸಿದ್ದು 600 ಕೋಟಿ ದಂಡ! ಲಿಂಕ್ ಮಾಡುವುದು ಹೇಗೆ?
ನವದೆಹಲಿ, ಫೆಬ್ರವರಿ 06: ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸರ್ಕಾರ ಈಗಾಗಲೇ ಘೋಷಿಸಿದ್ದು, ಕೊನೆಯ ದಿನಾಂಕ ಬಿಟ್ಟು ಪ್ಯಾನ್- ಆಧಾರ್ ಲಿಂಕ್ ಮಾಡಿದರೆ ಅದಕ್ಕೆ ದಂಡ ಕೂಡ ನಿಗದಿಪಡಿಸಿತ್ತು. ಈ ವಿಳಂಬ ಮಾಡಿದವರಿಂದ ಸಂಗಗ್ರಹಿಸಿರುವ ದಂಡದ ಮೊತ್ತ ಕೇಳಿದರೇ ತಲೆ ತಿರುಗುವುದು ಗ್ಯಾರಂಟಿ!.
ಹೌದು... ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡದೆ ಇದ್ದವರಿಂದ ಸರ್ಕಾರವು ಬರೋಬ್ಬರಿ 600 ಕೋಟಿ ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಿದೆ. ಇನ್ನು, ಸುಮಾರು 11.48 ಕೋಟಿ ಖಾಯಂ ಖಾತೆ ಸಂಖ್ಯೆಗಳು ಇನ್ನೂ ಬಯೋಮೆಟ್ರಿಕ್ ಗುರುತಿನೊಂದಿಗೆ ಲಿಂಕ್ ಆಗಿಲ್ಲ ಎಂದು ಸಂಸತ್ತಿನಲ್ಲಿ ಸೋಮವಾರ ತಿಳಿಸಲಾಗಿದೆ.

2024 ರ ಜನವರಿ 29 ರಂತೆ ವಿನಾಯಿತಿ ಪಡೆದ ವರ್ಗಗಳನ್ನು ಹೊರತುಪಡಿಸಿ ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳ ಸಂಖ್ಯೆ 11.48 ಕೋಟಿಯಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಜೂನ್ 30, 2023 ಕೊನೆಯ ದಿನಾಂಕವಾಗಿತ್ತು. ಒಬ್ಬ ವ್ಯಕ್ತಿಯು ಜೂನ್ 30, 2023 ರೊಳಗೆ ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು ವಿಫಲರಾದರೆ , ದಂಡ ಕಟ್ಟಿ ಮತ್ತೆ ಆಧಾರ್ ಲಿಂಕ್ ಮಾಡಬೇಕಿತ್ತು.

ಜೂನ್ 30, 2023 ರ ಕೊನೆಯ ದಿನಾಂಕದ ನಂತರ ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದ ವ್ಯಕ್ತಿಗಳಿಂದ 1,000 ರೂಪಾಯಿಗಳ ದಂಡವಿತ್ತು. ಈ ದಂಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, "ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ವ್ಯಕ್ತಿಗಳಿಂದ ಜುಲೈ 1, 2023 ರಿಂದ ಜನವರಿ 31, 2024 ರವರೆಗೆ ಒಟ್ಟು ಶುಲ್ಕ 601.97 ಕೋಟಿ ರೂಪಾಯಿಗಳ ದಂಡ ಸಂಗ್ರಹಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗಗೆ ಲಿಂಕ್ ಮಾಡಲು ವಿಫಲರಾದ ತೆರಿಗೆದಾರರ ಪ್ಯಾನ್ ಕಾರ್ಡ್ ಜುಲೈ 1, 2023 ರಿಂದ ನಿಷ್ಕ್ರಿಯಗೊಳ್ಳುತ್ತದೆ. ಅಂತಹ ಪ್ಯಾನ್‌ಗಳಿಗೆ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ, ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಹೆಚ್ಚಿನ ದರದಲ್ಲಿ ಸಂಗ್ರಹಿಸಲಾಗುತ್ತದೆ. 1,000 ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸುವ ಮೂಲಕ ಪ್ಯಾನ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು.
ಪ್ಯಾನ್ ಕಾರ್ಡ್- ಆಧಾರ್ ಲಿಂಕ್ ಮಾಡುವುದು ಹೇಗೆ?
* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ: https://incometaxindiaefiling.gov.in/
* ಹೊಸ ಬಳಕೆದಾರರಾಗಿದ್ದರೆ, ಪೋರ್ಟಲ್‌ನಲ್ಲಿ ನೋಂದಾಯಿಸಿ.
* ದಂಡವನ್ನು ಪಾವತಿಸಲು, 'ಕ್ವಿಕ್ ಲಿಂಕ್ಸ್' ಅಡಿಯಲ್ಲಿ 'ಇ-ಪೇ ಟ್ಯಾಕ್ಸ್' ಆಯ್ಕೆಯನ್ನು ಕ್ಲಿಕ್ ಮಾಡಿ.
* ಆಧಾರ್-ಪ್ಯಾನ್ ಲಿಂಕ್ ಮಾಡುವ ವಿನಂತಿಯನ್ನು ಸಲ್ಲಿಸಲು ಚಲನ್ ಸಂಖ್ಯೆ./ITNS 280 ಅನ್ನು ಮುಂದುವರಿಸಿ.
* ಮೈನರ್ ಹೆಡ್ 500 (ಶುಲ್ಕ) ಮತ್ತು ಮೇಜರ್ ಹೆಡ್ 0021 (ಆದಾಯ ತೆರಿಗೆ ) ಅಡಿಯಲ್ಲಿ ದಂಡವನ್ನು ಒಂದೇ ಚಲನ್‌ನಲ್ಲಿ ಪಾವತಿಸಿ.
* ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆರಿಸಿ.
* ನಿಮ್ಮ ವಿಳಾಸದೊಂದಿಗೆ ನಿಮ್ಮ ಪ್ಯಾನ್ ವಿವರಗಳನ್ನು ನಮೂದಿಸಿ.
* ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ
* ಪಾವತಿ ಮಾಡಿದ ನಂತರ ನಿಮ್ಮ ಪ್ಯಾನ್ ವಿವರಗಳು, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕದೊಂದಿಗೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
* ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಪಾಪ್-ಅಪ್ ವಿಂಡೋ ತೋರಿಸುತ್ತದೆ. ಇಲ್ಲದಿದ್ದರೆ, ಮೆನು ಬಾರ್‌ನಲ್ಲಿ 'ಪ್ರೊಫೈಲ್ ಸೆಟ್ಟಿಂಗ್‌ಗಳು' ಗೆ ಹೋಗಿ ಮತ್ತು 'ಲಿಂಕ್ ಆಧಾರ್' ಕ್ಲಿಕ್ ಮಾಡಿ.
* PAN ಕಾರ್ಡ್‌ನಲ್ಲಿ ನಮೂದಿಸಿದಂತೆ ಜನ್ಮ ದಿನಾಂಕ, ಲಿಂಗ ಇತ್ಯಾದಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.
* ಆಧಾರ್‌ನಲ್ಲಿ ನಮೂದಿಸಿರುವ ವಿವರಗಳೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.
* ನಿಮ್ಮ ವಿವರಗಳು ಹೊಂದಾಣಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು "ಈಗ ಲಿಂಕ್" ಬಟನ್ ಕ್ಲಿಕ್ ಮಾಡಿ.
-
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications