ಭಾರತ ಸೇರಿ ವಿಶ್ವದಾದ್ಯಂತ ಗೂಗಲ್ ನ್ಯೂಸ್, ಡಿಸ್ಕವರ್ ಸೇವೆ ದಿಢೀರ್ ಡೌನ್.!, ಬಳಕೆದಾರರ ಪರದಾಟ-ಕಾರಣ ಏನು?
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಡಿಜಿಟಲ್ ಅನ್ನು ಫಾಲೋ ಮಾಡುತ್ತಿದ್ದಾರೆ. ಅಲ್ಲದೆ, ಅತೀ ಬೇಗನೇ ಅಪ್ಡೇಟ್ ಆಗುವ ಸುದ್ದಿಗಳಿಗಾಗಿ ಗೂಗಲ್ ಡಿಸ್ಕವರ್ ಅನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇಂದು (ಮೇ 31) ಇದ್ದಕ್ಕಿದ್ದಂತೆ ಗೂಗಲ್ ನ್ಯೂಸ್, ಡಿಸ್ಕವರ್ ಸೇರಿದಂತೆ ಇನ್ನಿತರೆ ನ್ಯೂಸ್ ನೋಟಿಫಿಕೇಶನ್‌ಗಳ ಸೇವೆ ಡೌನ್ ಆಗಿದ್ದು, ಇದರಿಂದ ಬಳಕೆದಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತ ಸೇರಿದಂತೆ ವಿಶ್ವಾದಾದ್ಯಂತ ಗೂಗಲ್ ನ್ಯೂಸ್, ಗೂಗಲ್ ಡಿಸ್ಕವರ್ ಸೇವೆ ಡೌನ್ ಆಗಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಬಳಕೆದಾರರು ಪರದಾಡುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಗೂಗಲ್ ನ್ಯೂಸ್ ಸೇವೆ ಸ್ಥಗಿತಗೊಂಡಿದೆ ಎಂದು ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಇದರಿಂದ ಭಾರತದಲ್ಲಿ ಬಹುತೇಕ ಬಳಕೆದಾರರು ಗೂಗಲ್ ಡಿಸ್ಕವರ್ ಮತ್ತು ಗೂಗಲ್ ನ್ಯೂಸ್ ಬಳಸಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಗೂಗಲ್ ನ್ಯೂಸ್ ಸೇವೆ ಚಾಲನೆಯಲ್ಲಿ ಇಲ್ಲದಿದ್ದಾಗ ಹಲವು ಬಳಕೆದಾರರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಬಗ್ಗೆ ತಮ್ಮ ದೂರುಗಳನ್ನು ಉಲ್ಲೇಖಿಸಿದ್ದಾರೆ. ಗೂಗಲ್ ನ್ಯೂಸ್ ಟ್ಯಾಬ್, ಗೂಗಲ್ ಡಿಸ್ಕವರ್ ಹೋಮ್ ಪೇಜ್ ಫೀಡ್ ಮತ್ತು ಗೂಗಲ್ ಟ್ರೆಂಡ್ಸ್‌ನಂತಹ ಸೇವೆಗಳು ಡೌನ್ ಆಗಿದ್ದು, ಇದರಿಂದ ಬಳಕೆದಾರರು ಸಮಸ್ಯೆಗಳನ್ನು ಎದುರಿಸುವಂತಾಹಿದೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.
ಒಟ್ಟಾರೆ ಗೂಗಲ್ ನ್ಯೂಸ್, ಜಿ ಮೇಲ್ ಮತ್ತು ಮ್ಯಾಪ್ ಸೇರಿ ಗೂಗಲ್ ಸೇವೆಗಳನ್ನು ಪ್ರವೇಶಿಸುವಾಗ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ಬಳಕೆದಾರರು ಶುಕ್ರವಾರ ಸಮಸ್ಯೆಗಳನ್ನು ಎದುರಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಟಿವಿ, ಪೇಪರ್‌ಗಳಿಗಿಂತ ಮುಂಚಿತವಾಗಿ ಸುದ್ದಿಗಳ ವೀಕ್ಷಣಗೆಗಾಗಿ ಹೆಚ್ಚು ಜನರು ಡಿಜಿಟಲ್‌ನತ್ತ ಮುಖ ಮಾಡುತ್ತಿದ್ದಾರೆ.
ಬಳಕೆದಾರರು ಡಿಜಿಟಲ್‌ಗೆ ಪ್ರವೇಶ ಮಾಡಬೇಕೆಂದರೆ ಗೂಗಲ್ ಮೂಲಕವೇ ಸರ್ಚ್ ಮಾಡಿ ಬರಬೇಕಾಗುತ್ತದೆ. ಆದರೆ ಅದೇ ಸರ್ಚ್ ಇಂಜಿನ್‌ನ ಹಲವು ಸೇವೆಗಳು ಇಂದು ಡೌನ್ ಆಗಿದ್ದು, ಬಹುತೇಕ ಬಳಕೆದಾರರು ಪರದಾಡಿದ ಘಟನೆಗಳು ನಡೆದಿವೆ.












Click it and Unblock the Notifications