ನಟ ಚಿರಂಜೀವಿ ಸರ್ಜಾ, ಸುಶಾಂತ್ಗೆ ಗೂಗಲ್ ಇಂಡಿಯಾ ನಮನ

ನವ ದೆಹಲಿ, ಜೂನ್ 15: ಕನ್ನಡ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿ ವಾರಗಳು ಕಳೆದಿವೆ. ನಿನ್ನೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರು ನಟರಿಗೆ ಗೂಗಲ್ ಸಂಸ್ಥೆ ನಮನ ಸಲ್ಲಿಸಿದೆ.

Recommended Video

      ಸುಶಾಂತ್‌ಹೆಲಿಕಾಪ್ಟರ್ ಶಾಟ್ ನೋಡಿ ಕ್ರಿಕೆಟ್ ದೇವರೇ ಫಿದಾ‌ ಆಗಿದ್ದರು | Oneindia Kannada

      ವಿಶ್ವದ ನಂಬರ್ ಒನ್‌ ಸರ್ಚ್‌ ಇಂಜಿನ್ ಗೂಗಲ್ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ಕನ್ನಡ ನಟ ಚಿರಂಜೀವಿ ಸರ್ಜಾ ಸಾವಿಗೆ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದೆ.

      ''ಕಳೆದ ಕೆಲವು ದಿನಗಳು ತುಂಬ ಕಷ್ಟಕರವಾಗಿವೆ. ಇಬ್ಬರು ಕಲಾವಿದರ ನಷ್ಟಕ್ಕೆ ನಾವು ಸಾಕ್ಷಿಯಾಗಿಬೇಕಾಬಂದಿದೆ. ಅವರು ನಮ್ಮೊಂದಿಗೆ ಹಂಚಿಕೊಂಡ ಕಥೆಗಳಿಗೆ ಇದು ಗೌರವವಾಗಿದೆ.'' ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ. ಚಿಕ್ಕ ವಯಸ್ಸಿನಲ್ಲಿಯೇ ಬದುಕು ಮುಗಿಸಿದ ಕಲಾವಿದರಿಗೆ ನಮನ ಸಲ್ಲಿಸಿದೆ.

      ನಟ ಚಿರಂಜೀವಿ ಹೃದಯಘಾತದಿಂದ ಜೂನ್ 7 ರಂದು ನಿಧನ ಹೊಂದಿದರು. 39 ವರ್ಷಕ್ಕೆ ವಿಧಿವಶರಾದರು. ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ದಾರಿಯಲ್ಲಿ ಅವರು ಕೊನೆಯುಸಿರೆಳೆದರು.

      Google India Condolence For Chiranjeevi Sarja And Sushant Singh Death

      ನಟ ಸುಶಾಂತ್ ಸಿಂಗ್ ರಜಪೂತ್ ನಿನ್ನೆ (ಜೂನ್ 14) ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. 34 ವರ್ಷಕ್ಕೆ ಸುಶಾಂತ್ ನಿಧನರಾದರು. ಅವರ ನಿಧನಕ್ಕೆ ಇಡೀ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+