ಅಪ್ಪಂದಿರ ದಿನಕ್ಕೆ ಆಕರ್ಷಕ ಡೂಡ್ಲ್ ರಚಿಸಿದ ಗೂಗಲ್!

ಬೆಂಗಳೂರು, ಜೂನ್ 17: ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಮುಖಪುಟದಲ್ಲಿ ಇಂದು (ಜೂನ್ 17) ಅಪ್ಪಂದಿರ ದಿನಾಚರಣೆಗಾಗಿ ಆಕರ್ಷಕ ಡೂಡ್ಲ್ ಪ್ರದರ್ಶಿಸಿದೆ. ವಿಶ್ವದೆಲ್ಲೆಡೆ ವಿವಿಧ ರೀತಿಯಲ್ಲಿ ಅಪ್ಪಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಮದರ್ಸ್ ಡೇ, ಸೋದರ/ರಿಯರ ದಿನ, ಅಜ್ಜ ಅಜ್ಜಿಯರ ದಿನಾಚರಣೆ ಹೀಗೆ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೊಂದು ದಿನ ಮೀಸಲಾಗಿದೆ. ಉತ್ತರ ಅಮೆರಿಕದಲ್ಲಿ ಆರಂಭವಾ ಈ ಪದ್ಧತಿಯಂತೆ, ಜೂನ್ ತಿಂಗಳ ಮೂರನೇ ಭಾನುವಾರದಂದು ಫಾದರ್ಸ್ ಡೇ ಆಚರಿಸಲಾಗುತ್ತದೆ.

109 ವರ್ಷಗಳ ಇತಿಹಾಸವುಳ್ಳ ಫಾದರ್ಸ್ ಡೇ ಆಚರಣೆ ಅಂಗವಾಗಿ ಗೂಗಲ್ ತನ್ನ ಮುಖಪುಟದಲ್ಲಿ ಡೂಡ್ಲ್ ಮಾಡಿ, ಹಾಕಿದೆ. ಈ ಡೂಡ್ಲ್ ನಲ್ಲಿ ಹಸ್ತದ ಚಿತ್ರಗಳಿದ್ದು, ಡೈನೋಸರಾಸ್ ನ ವಿನ್ಯಾಸ ಇದಾಗಿದ್ದು, ಬಣ್ಣಗಳು ಗೂಗಲ್ ಲೋಗೋವಿನ ಮೂಲ ಬಣ್ಣವನ್ನು ಪ್ರತಿನಿಧಿಸುತ್ತವೆ.

Google celebrates Fathers Day with colorful dinosaur like doodle

ಡೂಡ್ಲ್ ಚಿತ್ರ: ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ.

ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+