ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಲಾಭ ಘೋಷಿಸಿದ ಮೋದಿ ಸರ್ಕಾರ

ನವದೆಹಲಿ, ಫೆಬ್ರವರಿ 19: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಕೊಡುಗೆ ಘೋಷಿಸಿದೆ. ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯ ಲಾಭ ಘೋಷಣೆ ಮಾಡಲಾಗಿದೆ.

Recommended Video

      ಸೇಲ್ಸ್ ಗರ್ಲ್ ಆಗಿದ್ದವರು ಇಂದು ಪ್ರಪಂಚದ ಪವರ್ ಫುಲ್ ಮಹಿಳೆ | Nirmala Sitharama | Oneindia Kannadan

      ಜನವರಿ 1, 2004 ಹಾಗೂ ಅದಕ್ಕಿಂತ ಮೊದಲು ಕೇಂದ್ರ ಸರ್ಕಾರಿ ನೌಕರಿಗೆ ನೇಮಕವಾಗಿರುವ ಅಥವಾ ಆ ದಿನಾಂಕದ ನಂತರ ಹುದ್ದೆಗೆ ಸೇರಿರುವ ನೌಕರರಿಗೆ ಹಳೆ ಪಿಂಚಣಿ ಯೋಜನೆ ಲಾಭ ಸಿಗಲಿದೆ. 01.01.2004 ನಂತರದ ಅಪಾಯಿಂಟ್ಮೆಂಟ್ ಲೆಟರ್ ಪಡೆದವರಿಗೂ ಲಾಭ ಸಿಗಲಿದೆ ಎಂದು ಸರ್ಕಾರ ಘೋಷಿಸಿದೆ.

      Good news for Pensioners from Modi government for Central government employees

      ಆದರೆ, ಈ ಲಾಭ ಪಡೆಯಲು ನೌಕರರಿಗೆ ಒಂದು ಬಾರಿ ಅವಕಾಶ ನೀಡಲಾಗುತ್ತಿದೆ. ಈ ಕುರಿತು ಅವರು ಪೆನ್ಷನ್ ವಿಭಾಗಕ್ಕೆ ಪತ್ರ ಬರೆದು ಹಳೆ ಪೆನ್ಷನ್ ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದ್ದು, ಇದಕ್ಕಾಗಿ ಮೇ. 1, 2020 ರವರೆಗೆ ಗಡುವು ನೀಡಲಾಗಿದೆ.

      ರಾಷ್ಟ್ರೀಯ ಪಿಂಚಣಿ ಯೋಜನೆ ಬದಲಿಗೆ ಕೇಂದ್ರ ನಾಗರಿಕ ಸೇವೆ(ಪಿಂಚಣಿ) ನಿಯಮ, 1972 ಅಡಿಯಲ್ಲಿ ಈ ಸೌಲಭ್ಯ ಸಿಗಲಿದೆ.

      ಈ ಸೌಲಭ್ಯ ಹೊಂದಲು ಮೇ 31, 2020 ಅಂತಿಮ ದಿನವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಈ ದಿನಾಂಕದಲ್ಲಿ ಸೌಲಭ್ಯ ಹೊಂದಲು ಸಾಧ್ಯವಾಗದವರು ಎನ್ ಪಿಎಸ್ ಅಡಿಯಲ್ಲಿ ಸೇವೆ ಪಡೆಯಬಹುದಾಗಿದೆ ಎಂದರು.

      1972ರ ಸಿಸಿಎಸ್ (ಪಿಂಚಣಿ) ನಿಯಮದಡಿಯಲ್ಲಿ ಸೌಲಭ್ಯ ಪಡೆಯಲಾಗದೆ ಕೋರ್ಟ್ ಮೆಟ್ಟಿಲೇರಿರುವ ನೌಕರರಿಗೆ ಈ ಹೊಸ ಆದೇಶ ನೆಮ್ಮದಿಯ ಸುದ್ದಿ ನೀಡಿದ್ದಂತಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+