ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಇಂಡಿಗೋ: ಫೆ.4 ರಿಂದ ಹುಬ್ಬಳ್ಳಿ-ಪುಣೆ ವಿಮಾನ ಹಾರಾಟ ಆರಂಭ

ವಿಮಾನ ಪ್ರಯಾಣಿಕರಿಗೆ ಇಂಡಿಗೋ ಒಂದು ಸಿಹಿ ಸುದ್ದಿಯನ್ನು ಕೊಟ್ಟಿದೆ. ಫೆಬ್ರವರಿ 4 ರಿಂದ ಹುಬ್ಬಳ್ಳಿ ಪುಣೆ ನೇರ ವಿಮಾನವನ್ನು ಪ್ರಾರಂಭಿಸಲು ಇಂಡಿಗೋ ನಿರ್ಧರಿಸಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಪ್ರಾಯಾಣಿಕರಿಂದ ನೇರ ವಿಮಾನದ ಬೇಡಿಕೆಯಿಂದಾಗಿ ಇಂಡಿಗೋ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ನೇರ ವಿಮಾನ ಹಾರಾಟ ಆರಂಭಿಸಲು ತೀರ್ಮಾನಿಸಿದೆ.

ವೇಳಾಪಟ್ಟಿಯ ಪ್ರಕಾರ, ಹುಬ್ಬಳ್ಳಿಯಿಂದ ಪುಣೆ ವಿಮಾನ (6E-7727) ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (HBX) ಫೆಬ್ರವರಿ 4 ರಂದು ಸಂಜೆ 6:30ಕ್ಕೆ ಹೊರಟು ಪುಣೆ ವಿಮಾನ ನಿಲ್ದಾಣವನ್ನು (PNQ) ಸಂಜೆ 7:40ಕ್ಕೆ ತಲುಪುತ್ತದೆ. ಪುಣೆಯಿಂದ ಹುಬ್ಬಳ್ಳಿ ವಿಮಾನ (6E-7716) ರಾತ್ರಿ 8:00 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ (PNQ) ಹೊರಟು ರಾತ್ರಿ 9:10 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಇಂಡಿಗೋ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗಳು ತೆರೆದಿರುತ್ತವೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಇದಕ್ಕಾಗಿ 78 ಆಸನಗಳ ATR-72 ವಿಮಾನವನ್ನು ನಿಯೋಜಿಸಲು ಇಂಡಿಗೋ ನಿರ್ಧರಿಸಿದೆ. ವಿಮಾನವು ವಾರಕ್ಕೆ 2 ದಿನಗಳಲ್ಲಿ ಮಾತ್ರ (ಶನಿವಾರ ಮತ್ತು ಭಾನುವಾರ) ಕಾರ್ಯನಿರ್ವಹಿಸುತ್ತದೆ. ಬೇಡಿಕೆಯ ಆಧಾರದ ಮೇಲೆ ವಿಮಾನ ಹಾರಾಟವನ್ನು ಹೆಚ್ಚಿಸಲಾಗುತ್ತದೆ ಎಂದು ಇಂಡಿಯೋ ಹೇಳಿದೆ. ಉತ್ತರ ಕರ್ನಾಟಕದಿಂದ ಪುಣೆ ಕಡೆಗೆ ಸಂಪರ್ಕ ಕಲ್ಪಿಸುವ ಏಕೈಕ ವಿಮಾನ ಆಗಿರುವುದರಿಂದ ವಿಮಾನಕ್ಕೆ ಉತ್ತಮ ಬೆಂಬಲ ಸಿಗುವ ಸಾಧ್ಯತೆ ಇದೆ.

Good news for passengers: Hubli-Pune flight will start from February 4

ಇದಕ್ಕೂ ಮೊದಲು, ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಉಡಾನ್-2 (ಉದೇ ದೇಶ್ ಕಾ ಆಮ್ ನಾಗ್ರಿಕ್) ಯೋಜನೆಯಡಿಯಲ್ಲಿ HBX ನಿಂದ PNQ ನೇರ ಹಾರಾಟವನ್ನು ನಡೆಸಲು ಬಿಡ್‌ಗಳನ್ನು ಗೆದ್ದಿತ್ತು. ಆದರೆ ವಿಮಾನಯಾನ ಸಂಸ್ಥೆಯು ಹಾರಾಟ ಆರಂಭಿಸಲಿಲ್ಲ.

ಇತ್ತೀಚೆಗಷ್ಟೇ ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯಿಂದ ಅಹಮದಾಬಾದ್ ಮತ್ತು ಪುಣೆಗೆ ನೇರ ವಿಮಾನಯಾನವನ್ನು ಪ್ರಾರಂಭಿಸಲು ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದರು. ಪ್ರಯಾಣಿಕರ ಸಂಖ್ಯೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಇತ್ತೀಚೆಗೆ 3ನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡಿತು.

Good news for passengers: Hubli-Pune flight will start from February 4

ಹುಬ್ಬಳ್ಳಿ ವಿಮಾನ ನಿಲ್ದಾಣವು ನವೆಂಬರ್ 2022 ರ ಕಳೆದ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ 25.79% ನಷ್ಟು ಹೆಚ್ಚಳವನ್ನು ದಾಖಲಿಸಿದೆ. ಅಕ್ಟೋಬರ್ 2022 ರಲ್ಲಿ 24,359 ಪ್ರಯಾಣಿಕರು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಬಳಸಿದ್ದಾರೆ. ಹುಬ್ಬಳ್ಳಿಯ ಪ್ರಯಾಣಿಕರು ಅಹಮದಾಬಾದ್, ಕೊಚ್ಚಿ ಮತ್ತು ಗೋವಾ ವಿಮಾನಗಳನ್ನು ಪುನರಾರಂಭಿಸಲು ಮತ್ತು ಜೈಪುರ, ಜೋಧ್‌ಪುರ ಮತ್ತು ಕೋಲ್ಕತ್ತಾ ಇತ್ಯಾದಿಗಳಿಗೆ ಹೊಸ ವಿಮಾನಗಳನ್ನು ಪ್ರಾರಂಭಿಸಲು ವಿನಂತಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+