Golden Chariot: ಪ್ರವಾಸಿ ಬೆಲೆ....ಲಕ್ಷ ಯಾಕೆ, ಡಿಕೆಶಿ ಚಾಲನೆ ನೀಡಿದ ರೈಲಲ್ಲಿ ಅಂಥದ್ದೇನಿದೆ ?

ಬೆಂಗಳೂರು: ಕರ್ನಾಟಕ ಮತ್ತು ದಕ್ಷಿಣ ಭಾರತದ ಹೆಮ್ಮೆಯ ದೇಶದ ಏಕೈಕ ಐಶಾರಾಮಿ ಪ್ರಯಾಣಿಕರ ಅತ್ಯಾಧುನಿಕ ರಾಜ ವೈಭೋಗ ಸೇವೆ ನೀಡುವ, ಕರುನಾಡಿನ ಇತಿಹಾಸ, ಸಂಸ್ಕೃತಿಕ ಅನಾವರಗೊಳಿಸುವ 'ಗೋಲ್ಡನ್ ಚಾರಿಯೇಟ್' ರೈಲಿನ 2026-2027 ಪ್ರವಾಸ ಋತು ಆರಂಭವಾಗಿದೆ. ಇಂದು ಶನಿವಾರ (ಅ.24) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದಾರೆ. ಈ ರೈಲಿನಲ್ಲಿ ಪ್ರಯಾಣಿಸಲು ಲಕ್ಷ ಲಕ್ಷ ದರ ಪಾವತಿಸಬೇಕಾ? ಈ ರೈಲಿನಲ್ಲಿ ಅಂಥದ್ದೇನಿದೆ? ಯಾಕಿಷ್ಟು ಫೇಮಸ್ಸು! ಇಲ್ಲಿದೆ ವಿವರ.

'ಸುವರ್ಣ ಪಯಣ, ಕರ್ನಾಟಕದ ವೈಭವದ ಅನಾವರಣ' ಶಿರ್ಷಿಕೆಯಡಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರವಾಸೋದ್ಯಮ ಸಚಿವರಾದ ಕೆ. ಜೆ. ಜಾರ್ಜ್ ಉಪಸ್ಥಿತಿಯಲ್ಲಿ ಪ್ರಸಕ್ತ ಸಾಲಿನ ಕರ್ನಾಟಕದ ಹೆಮ್ಮೆಯ ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್‌ ಚಾರಿಯಟ್‌' (ಸುವರ್ಣ ರಥ) ಪ್ರವಾಸ ಆರಂಭಿಸಲಾಗಿದೆ.

Golden Chariot Luxury Train

ಬೇರಾವ ರೈಲುಗಳಲ್ಲಿ ಇರದ ಅತ್ಯಾಧುನಿಕ ಸೌಲಭ್ಯಗಳು, ಒಳಾಂಗಣ, ಪ್ರವಾಸಿಗರಿಗೆ ಐಶಾರಾಮಿ ಮತ್ತು ವಿಶೇಷ ಅನುಭವ ನೀಡುವ ರೈಲನ್ನು IRCTC ಮತ್ತು KSTDC ಜಂಟಿಯಾಗಿ ನಿರ್ವಹಿಸುತ್ತದೆ. ಇಂದಿನಿಂದ ಈ ರೈಲಿನ ಮೊದಲ ಚಾಲನೆ ಆರಂಭವಾಗಿದ್ದು, ಪ್ರವಾಸಿಗರಿಗೆ ಈ ರೈಲಿನ ಮೂಲಕ ಪ್ರಸಿದ್ಧ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇಷ್ಟೊಂದು ಬೆಲೆ ಯಾಕೆ?

ಪ್ರಸಕ್ತ ಋತುವಿನಲ್ಲಿ ಒಟ್ಟು ಆರು ದಿನಗಳ ಪ್ರವಾಸ ಇದರಲ್ಲಿ ಮಾಡಬಹುದು. ಐದ ರಾತ್ರಿ, ಆರು ಹಗಲುಗಳನ್ನು ನೀವು ಇದರಲ್ಲಿ ಕಳೆಯಬಹುದು. ಇಂತಹ ಒಟ್ಟು 13ಪ್ರವಾಸಗಳನ್ನು ಆಯೋಜಿಸಲಾಗಿದೆ. ಭರ್ಜರಿ ಬೇಡಿಕೆ ಇದ್ದ ಕಾರಣಕ್ಕೆ ರೈಲಿಗೆ ಚಾಲನೆ ನೀಡುವ ಹೊತ್ತಿಗಾಗಲೇ ಎಲ್ಲ ಟಿಕೆಟ್ ಸಹ ಬುಕ್ಕಿಂಗ್ ಆಗಿವೆ. ಒಬ್ಬರಿಗೆ ಒಂದು ಯಾತ್ರೆಗೆ 'ಗೋಲ್ಡನ್ ಚಾರಿಯಟ್' ರೈಲು ಪ್ರವಾಸದ ದರವು 3,31,500 ದಿಂದ 4,87,500 ರೂಪಾಯಿ ಇದೆ.

ರೈಲಿನ ಹೊರಗೆ ಹೇಗೆ ಬಣ್ಣಗಳಿಂದ ಅತ್ಯಾಕರ್ಷವಾಗಿದೆಯೋ ಅದೇ ರೀತಿ, ಒಳಾಂಗಣವು ರಾಜವೈಭೋಗದಿಂದ ಕೂಡಿದೆ. ಒಟ್ಟು 26 ಜನರಿಗೆ ಅನುಕೂಲವಾಗುವಂತೆ 13 ಜೋಡಿ ಬೆಡ್‌ಗಳಿವೆ. ಒಂದೊಮ್ಮೆ 80 ಪ್ರವಾಸಿಗರಿಗೆ ಅತಿಥಿ ಸತ್ಕಾರ ನೀಡಲಾಗುತ್ತದೆ. ಪ್ರೀಮಿಯಂ ಪಾನೀಯ, ಪ್ರಸಿದ್ಧ ಬಾಣಸಿಗರು ಮಾಡುವ ನಳಪಾಕ ಉಣಬಡಿಸಲಾಗುತ್ತದೆ. ವಿಶೇಷ ಖಾದ್ಯಗಳನ್ನು ತಯಾರಿಸುವ ರೆಸ್ಟೋರೆಂಟ್‌ಗಳಿವೆ. ಇದರೊಳಗೆ ಜರ್ನಿ ಮಾಡುವುದು ಹೇಗೆ ಮನೋಲ್ಲಾಸ ನೀಡುತ್ತೋ, ಅದೇ ರೀತಿ ಶುಚಿ-ರುಚಿತ ಖಾದ್ಯಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಪ್ರಯಾಣಿಕರಿಗಾಗಿ ದೈಹಿಕ, ಮಾನಸಿಕ ಒತ್ತಡ ನಿವಾರಣೆಗೆ ಸ್ಪಾ, ಜಿಮ್, ಥೆರಪಿ, ಸಾಂಪ್ರದಾಯಿಕ ಆರೋಗ್ಯ ಚಿಕಿತ್ಸೆಗಳು ಇವೆ. ಮಾತ್ರವಲ್ಲದೇ ರೈಲಿನ ಮೂಲಸೌಕರ್ಯಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಸೆನ್ಸಾರ್, ಸಿಸಿ ಕ್ಯಾಮೆರಾ, ಬೆಂಕಿ ನಿರೋಧಕ ವ್ಯವಸ್ಥೆ ಇದೆ. ಸಾಮಾನ್ಯ ರೈಲಿ ಒಂದೇ ಒಂದೇ ದೃಶ್ಯಗಳು ಇದರಲ್ಲಿ ಕಾಣಲು ಸಿಗುವುದಿಲ್ಲ. ಲೈಟಿಂಗ್, ಆಸನ, ವಾಲ್, ಕರ್ಟನ್, ಬಾಗಿಲು ವಿಶೇಷ ವಿನ್ಯಾದಿಂದ ಕೂಡಿವೆ. ಇದೆಲ್ಲವನ್ನು ನೀವು ಆರು ದಿನಗಳ ಪ್ರಯಾಣದಲ್ಲಿ ಅನುಭವಿಸಬಹದು. ಜೊತೆಗೆ ರಾಜ್ಯದ ಸಂಸ್ಕೃತಿ, ಕಲೆ, ಸಾಂಪ್ರದಾಯ ತಿಳಿಯಬಹುದು. ಈ ಕಾರಣಕ್ಕೆ ಇದರ ಬೆಲೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

'ಪ್ರೈಡ್ ಆಫ್ ಕರ್ನಾಟಕ': ಡಿಕೆ ಶಿವಕುಮಾರ್ ಹೇಳಿದ್ದೇನು?

ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ, "ಕರ್ನಾಟಕದಲ್ಲಿ ನೈಸರ್ಗಿಕ ಸಂಪತ್ತು ಬಹಳ ಶ್ರೀಮಂತವಾಗಿದೆ. ಪಾರಂಪರಿಕ ತಾಣಗಳನ್ನು ಹೊಂದಿದೆ. ಹಂಪಿ, ಬೇಲೂರು, ಮಲೆನಾಡು, ಮೈಸೂರು, ಕರಾವಳಿ, ಕೂರ್ಗ್ ಹೀಗೆ ಎಲ್ಲ ಪ್ರವಾಸಿ ಕೇಂದ್ರಗಳನ್ನು ಆಕರ್ಷಣೆ ಮಾಡುವುದಕ್ಕಾಗಿ, ಹೊಸ ತಾಣಗಳನ್ನು ಪರಿಚಯಿಸಲು ನಮ್ಮ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮೆಜೆಸ್ಟಿಕ್ ಹಾಗೂ ಕೆಂಗೇರಿ ರೈಲು ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ಅಲ್ಲದೇ ಇದೇ ರೈಲಿನಲ್ಲಿ ಸಚಿವರೊಂದಿಗೆ ಅವರು ಸಂಚರಿಸಿದರು.

ಮುಂದುವರಿದು, "ಗೋಲ್ಡನ್ ಚಾರಿಯೇಟ್ ಮೂಲಕ ಜನರಿಗೆ ಕರ್ನಾಟಕದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಹಾಗೂ ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿದ್ದೇವೆ. ಇದರಿಂದ ನಮಗೆ ಲಾಭದ ಅಗತ್ಯವಿಲ್ಲ. ಆದರೆ, ನಷ್ಟವಾಗಬಾರದು. ನಷ್ಟವಾಗದಂತೆ ನಾವೆಲ್ಲ ನೋಡಿಕೊಳ್ಳಬೇಕು. ಇದಕ್ಕೆ ಎಲ್ಲರ ನೆರವು ಬೇಕು" ಎಂದರು.

'ಪ್ರೈಡ್ ಆಫ್ ಕರ್ನಾಟಕ' ಹೆಸರಿನ ಈ ಋತುವಿನ ಮೊದಲ ಯಾನವು ಸಂಪೂರ್ಣವಾಗಿ ಭರ್ತಿಯಾಗಿದೆ. 75 ಮಂದಿ ಅತಿಥಿಗಳು ನಾಡಿನ ಭವ್ಯ ಪರಂಪರೆ, ವನ್ಯಜೀವಿ ಸಂಪತ್ತು, ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ಸಿರಿವಂತಿಕೆಯನ್ನು ಈ ಅದ್ಭುತ ಪಯಣದ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆ.

2026-27ನೇ ಸಾಲಿನಲ್ಲಿ ಒಟ್ಟು 13 ಯಾನಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಶ್ವದರ್ಜೆಯ ಐಷಾರಾಮಿ ಪ್ರವಾಸೋದ್ಯಮದ ಮೂಲಕ ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಜಗತ್ತಿಗೆ ಪಸರಿಸುವ ರಾಜ್ಯದ ಮಹತ್ವಾಕಾಂಕ್ಷೆಗೆ ಇದು ಕನ್ನಡಿಯಾಗಿದೆ.

ರಾಜ್ಯ ಪ್ರವಾಸೋದ್ಯಮಕ್ಕೆ ನವ ಚೈತನ್ಯದ ಮೆರಗು

ರಾಜ್ಯ ಪ್ರವಾಸೋದ್ಯಮ ಇಲಾಖೆ, ಭಾರತೀಯ ರೈಲ್ವೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್‌ ರೈಲಿನ ಸೇವೆ ನೀಡಲಾಗುತ್ತಿದೆ. ಈ ವ್ಯವಸ್ಥೆಯಿಂದ ಪ್ರವಾಸಿಗರಿಗೆ ಅನುಕೂಲವಾಗುವುದರ ಜತೆಗೆ ಪ್ರವಾಸಿ ತಾಣಗಳಲ್ಲಿನ ಹೋಟೆಲ್‌ ಉದ್ಯಮ ಸೇರಿದಂತೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ವಿವರಿಸಿದರು.

ನಮ್ಮ ನಾಡಿನ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಪ್ರಕೃತಿಯ ಸೊಬಗನ್ನು ಜಗತ್ತಿಗೆ ಪರಿಚಯಿಸಿ, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿಸುವುದು ನಮ್ಮ ಸಂಕಲ್ಪ. ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ರಾಜ್ಯದ ಆರ್ಥಿಕ ಪ್ರಗತಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+