Gold Price: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಬಜೆಟ್ ಬಳಿಕ ಮೂರೇ ದಿನದಲ್ಲಿ ಚಿನ್ನದ ಬೆಲೆ ₹5,000 ಕುಸಿತ, ಮಾಹಿತಿ
ಬೆಂಗಳೂರು, ಜುಲೈ 25: ಕೇಂದ್ರ ಸರ್ಕಾರ ಬಜೆಟ್ 2024 ನಲ್ಲಿ ಆಮದು ಸುಂಕ ಕಡಿತ ಮಾಡುವ ಮೂಲಕ ಭರ್ಜರಿ ಸಿಹಿ ಸುದ್ದಿ ನೀಡಿತ್ತು. ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಬಜೆಟ್ ಬಳಿಕ ಮೂರೇ ದಿನದಲ್ಲಿ ಜುಲೈ 25ರಂದು ಮಧ್ಯಾಹ್ನ 5000 ರೂಪಾಯಿ ಕಡಿಮೆ ಆಗಿದೆ.
ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 950 ರೂಪಾಯಿ ಇಳಿಕೆಯಾಗಿ 65,150 ರೂಪಾಯಿಗಳಿಗೆ ಮತ್ತು 100 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 9,500 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಚಿನ್ನದ ಬೆಲೆ 6,41,500 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

ಈದೇ ವೇಳೆ ಸಮಯದಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1.48% ನಷ್ಟು ಭಾರಿ ಕುಸಿತ ಕಂಡುಬಂದಿದೆ. ಇದೇ ಜುಲೈ 22 ರಿಂದ ಜುಲೈ 25ರವರೆಗೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 3800 ರೂಪಾಯಿಗಳ ಭಾರಿ ಕುಸಿತ ಕಂಡುಬಂದಿದೆ.
ಶೇ.4ರಿಂದ 15ರಷ್ಟು ಸುಂಕ ಇಳಿಕೆಗೆ ಮನವಿ
ದೇಶದ ಆಭರಣ ವ್ಯಾಪಾರಿಗಳು ಚಿನ್ನದ ಆಮದು ಮೇಲಿನ ಸುಂಕವನ್ನು ಶೇಕಡಾ 4ರಿಂದ 15ರಷ್ಟು ಇಳಿಕೆ ಮಾಡುವಂತೆ ಒತ್ತಾಯಿಸಿದ್ದರು. ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.
ಅದರಂತೆ ಚಿನ್ನದ ಆಮದು ಸುಂಕ ಇಳಿಕೆ ಮಾಡುತ್ತಿದ್ದಂತೆ ಇವತ್ತಲ್ಲಾ ನಾಳೆ ಚಿನ್ನದ ಬೆಲೆ ಇಳಿಕೆ ಆಗಬಹುದು ಎಂದು ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಿರಲಿಲ್ಲ. ಸದ್ಯಕ್ಕೆ ಬಂಗಾರದದ ದರ ಕಡಿಮೆ ಆಗಿದ್ದರಿಂದ ಖರೀದಿ ಹೆಚ್ಚಾಗಬಹುದು ಎಂ ನಿರೀಕ್ಷೆಯು ಇದೆ. ಇನ್ನೊಂದು ವಾರದಲ್ಲಿ ಸುಂಕ ಕಡಿತ ಬಳಿಕ ಒಟ್ಟಾರೆ ಎಷ್ಟು ಗರಿಷ್ಠ ದರ ಇಳಿಕೆ ಆಗಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

ಭಾರತದಲ್ಲಿ ಇನ್ನೇನ್ನು ಕೆಲವೇ ದಿನಗಳಲ್ಲಿ ಹಬ್ಬದ ಋತು ಆರಂಭವಾಗಲಿದೆ. ಈ ಮಧ್ಯೆ ಸರ್ಕಾರ ಚಿನ್ನದ ಆಮದು ಸುಂಕ ಕಡಿಮೆ ಮಾಡಿದ್ದು ಸಂತಷದ ವಿಚಾರ, ಅಲ್ಲದೇ ಇದೇ 11 ವರ್ಷಗಳ ನಂತರ ಕೇಂದ್ರ ಸರ್ಕಾರ ಬಂಗಾರದ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದೆ.
ಇದುವರೆಗೆ ನಿಯಮಾನುಸಾರ ಆಮದು ಮಾಡಿಕೊಳ್ಳುತ್ತಿದ್ದ ಚಿನ್ನದ ಮೇಲಿನ ಸುಂಕ ಏರಿಕೆ ಆಗಿತ್ತು. ನಂತರ ವರ್ಷದಿಂದ ವರ್ಷಕ್ಕೆ, ಇತ್ತೀಚಿನ ದಿನಗಳಲ್ಲಿ ತಿಂಗಳುಗಳ ಅಂತದಲ್ಲಿ ಚಿನ್ನದ ದರ ಭಾರೀ ಏರಿಕೆ ಆಗುತ್ತಲೇ ಬಂದಿದ್ದು, ಇದೀಗ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ.
ಇಂದು ಜುಲೈ 25ರ ಗುರುವಾರದ ಚಿನ್ನದ ದರ ಏರಿಕೆ ಮಾಹಿತಿಗೂ ಮೊದಲು ಜುಲೈ 23ರಂದು ಬಜೆಟ್ ಮಂಡನೆ ದಿನ ಎಷ್ಟಿತ್ತು ಎಂಬ ಮಾಹಿತಿ ಇಲ್ಲಿದೆ.
ಜುಲೈ 23ರಂದು 22ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 67,690 ರೂ. ಇದೆ. 100 ಗ್ರಾಂ 6,76,900 ರೂಪಾಯಿಯಷ್ಟಿತ್ತು. ಇನ್ನೂ 24k 10 ಗ್ರಾಂ ಚಿನ್ನದ ಬೆಲೆ ರೂ 73,840 ಮತ್ತು 24 ಕ್ಯಾರೆಟ್ ನ 100 ಗ್ರಾಂ ಚಿನ್ನಕ್ಕೆ ರೂ 7,38,400 ಇತ್ತು.
ಇಂದಿನ (ಜುಲೈ 25) ನಗರವಾರು 10ಗ್ರಾಂ ಚಿನ್ನದ ಬೆಲೆ
ದೆಹಲಿ- 64,150 ರೂ.(22ಕ್ಯಾರೆಟ್) ಮತ್ತು 69,950 (24 ಕ್ಯಾರೆಟ್)
ಮುಂಬೈ - 64,000, 69,820 ರೂ.
ಕೋಲ್ಕತ್ತಾ - 64000 ಮತ್ತು 69820 ರೂ.
ಚೆನ್ನೈ- 64300 ಮತ್ತು 70150 ರೂ.
ಬೆಂಗಳೂರು- 64000 ಮತ್ತು 69820ರೂ.
ಹೈದರಾಬಾದ್ - 64000 ಮತ್ತು 69820ರೂ.
ಕೇರಳ - 64000 ಮತ್ತು 69820ರೂ.
ಪುಣೆ - 64000 ಮತ್ತು 69820ರೂ.
ವಡೋದರಾ - 64000 ಮತ್ತು 69850ರೂ.
ಅಹಮದಾಬಾದ್ - 64150 ಮತ್ತು 69950ರೂ.
ಜೈಪುರ - 64150 ಮತ್ತು 69950ರೂ.
ಬಜೆಟ್ ಮಂಡನೆ ಆದ ಬಳಿಕ ಚಿನ್ನದ ಬೆಲೆ ಕುಸಿತವಾಗಿದೆ. ಇತ್ತ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಮೇಲೆ ತಿಳಿಸಲಾಗಿರುವ ಚಿನ್ನದ ಬೆಲೆಗಳು ಆಯಾ ನಗರ, ರಾಜ್ಯಗಳ ವ್ಯಾಪ್ತಿಯಲ್ಲಿ ವೇಸ್ಟೇಜ್, ಇತರೆ ಶುಲ್ಕ ಒಳಗೊಂಡು ದರದಲ್ಲಿ ತುಸು ವ್ಯತ್ಯಾಸ ಕಾಣಬಹುದಾಗಿದೆ.
ಇದು ಮಾತ್ರವಲ್ಲದೇ ಭಾರತದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಬಂಗಾರದ ಬೆಲೆ ಇಳಿಕೆ ಆಗಿದೆ. ವಿಶ್ವದಲ್ಲೇ ಐದು ದೇಶಗಳಲ್ಲಿ ಅಗ್ಗದ ಬೆಲೆಗೆ ನಿಮಗೆ ಬಂಗಾರ ಸಿಗುತ್ತದೆ. ಈ ಪೈಕಿ ಆಸ್ಟ್ರೇಲಿಯಾ ಮತ್ತು ಅರಬ್ ದೇಶ ದುಬೈ ಮೊದಲಿನ ಸ್ಥಾನದಲ್ಲಿದೆ. ಈ ಐದು ರಾಷ್ಟ್ರಗಳಲ್ಲಿ ಕಡಿಮೆ ಬೆಲೆಗೆ ಚಿನ್ನ ದೊರೆಯುತ್ತದೆ ಎಂದು ವರದಿ ಆಗಿದೆ.












Click it and Unblock the Notifications