Gold Price: ₹180 ಇದ್ದ ಚಿನ್ನದ ಬೆಲೆ ಇಂದು ₹1 ಲಕ್ಷ: ಹಿಂದಿನ ವರ್ಷವಾರು ಚಿನ್ನದ ದರ ವಿವರ

ಬೆಂಗಳೂರು, ಏಪ್ರಿಲ್ 22: ಚಿನ್ನಪ್ರಿಯರಿಗೆ ಬಂಗಾರದ ದರವು ಶಾಕ್ ನೀಡಿದೆ. ಮದುವೆ ಆಗಿರುವ ಕಾರಣ ಸದ್ಯ ಚಿನ್ನ ಖರೀದಿದಾರರು ಚಿನ್ನದ ಬೆಲೆ 1 ಲಕ್ಷ ರೂಪಾಯಿ ಏರಿಕೆ ಆಗಿದ್ದು ನೋಡಿ ಕಂಗಾಲಾಗಿದ್ದಾರೆ. ತೆರಿಗೆ, ಇತರ ವೇಸ್ಟೇಜ್ ಚಾರ್ಜ್ ಸೇರಿ ಏಪ್ರಿಲ್ 21ರಂದು ವೇ ಬಂಗಾರದ ದರ ಭಾರತದಲ್ಲಿ 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಇದೇ ಏಪ್ರಿಲ್ 30ರಂದು ಅಕ್ಷಯ ತೃತೀಯ ಹೊತ್ತಿಗೆ ಚಿನ್ನವು ಲಕ್ಷ ರೂಪಾಯಿ ಮುಟ್ಟಬಹುದೆಂದು ಹೇಳಲಾಗುತ್ತಿದೆ. ಆದರೆ ಅದಕ್ಕೂ ಒಂದು ವಾರ ಮೊದಲೇ ದರದಲ್ಲಿ ದಾಖಲೆ ಬರೆದಿದೆ. ಈ ಮೂಲಕ ಒಂದೂವರೆ ದಶಕದಲ್ಲಿ ಚಿನ್ನವು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಭಾರತದಲ್ಲಿ ಚಿನ್ನದ ದರವು ಕಳೆದ 18 ವರ್ಷಗಳಲ್ಲಿ ಹೋಲಿಕೆ ಮಾಡಿದರೆ ಚಿನ್ನದ ಶೇಕಡಾ 10 ಪಟ್ಟು ಏರಿಕೆ ಆಗಿದೆ. ಅಂದರೆ 2007ರಲ್ಲಿ ಚಿನ್ನದ ದರವು ಪ್ರತಿ ಗ್ರಾಂ ಗೆ 1000 ರೂಪಾಯಿ ಇತ್ತು. 24 ಕ್ಯಾರಟ್ ಹತ್ತು ಗ್ರಾಂ ಬಂಗಾರಕ್ಕೆ 10,000 ರೂಪಾಯಿ ಇತ್ತು. ಇದೀಗ ಅದರ ಬೆಲೆ 1,00,000 ರೂಪಾಯಿಗೆ ಹೆಚ್ಚಳವಾಗಿದೆ.

Gold Rate Has Reached Rs 1 Lakh Check Gold Price History From 1970 Year Wise details

2007ಕ್ಕು ಮೊದಲು ಶುದ್ಧ ಚಿನ್ನದ ದರವು ಮೂರಂಕಿಯ (ರೂ.180) ರೂಪಾಯಿ ಇತ್ತು. ಅಲ್ಲಿಂದ ಹತ್ತು ವರ್ಷಗಳ ನಂತರ ಅಂದರೆ 1980ರ ಹೊತ್ತಿಗೆ ನಾಲ್ಕಂಕಿ ದರಕ್ಕೆ (ರೂ.1330) ತಲುಪಿತು. ನಂತರ 1990 ರಲ್ಲಿ 3200 ರೂಪಾಯಿ ಕಂಡಿತು. ಅಲ್ಲಿಂದ ಚಿನ್ನದ ದರ ಇಳಿಯಲೇ ಇಲ್ಲ. ಅಲ್ಲಿಂದ ಈವರೆಗೆ ಚಿನ್ನ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ. ವರ್ಷವಾರು ಮಾಹಿತಿಯ ಪಟ್ಟಿ ಇಲ್ಲಿದೆ.

2000 : 4,400 ರೂಪಾಯಿ

2007 : 10,000 ರೂಪಾಯಿ

2010 : 18,500 ರೂಪಾಯಿ

2015 : 25,360 ರೂಪಾಯಿ

2020 : 48,650 ರೂಪಾಯಿ

2022 : 52,670 ರೂಪಾಯಿ

2023 : 65,330 ರೂಪಾಯಿ

2024 : 78,100 ರೂಪಾಯಿ

2025 : 1,00,000 ರೂಪಾಯಿ

ಚಿನ್ನದ ದರ ಇನ್ನಷ್ಟು ಹೆಚ್ಚಾಗುತ್ತಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಹೊಸ ಸುಂಕ ನೀತಿಯಿಂದ ದರ ಏರಿಕೆ ಉಂಟಾಗಿದೆ. ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದಲೇ ಚಿನ್ನದ ದರ ಅತೀ ಕಡಿಮೆ ಸಮಯದಲ್ಲಿ ಒಂದು ಲಕ್ಷ ರೂಪಾಯಿಗೆ ಹೆಚ್ಚಾಗಿದೆ. ಇದರೊಂದಿಗೆ ಆರ್ಥಿಕ ತಜ್ಞರ ಪ್ರಕಾರ, ಬಂಗಾರದ ದರ ಸದ್ಯಕ್ಕೆ ಇಳಿಕೆಯ ಹಾದಿ ಹಿಡಿಯುವುದ ಅನುಮಾನ. ಇನ್ನಷ್ಟು ಏರಿಕೆ ಆದರೆ ಅಚ್ಚರಿ ಇಲ್ಲ. ಮತ್ತೆ ಕೆಲವರು ಇದು ಏರಿಕೆಯ ಅಂತಿಮ ದರ ಮುಂದಿನ ದಿನಗಳಲ್ಲಿ ಮತ್ತೆ ಸಾಮಾನ್ಯಕ್ಕೆ ಚಿನ್ನದ ದರ ಕುಸಿಯಲಿದೆ ಅಂತಲೂ ಅಂದಾಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+