Gold Price: ಕಳೆದ 10 ದಿನಗಳಿಂದ ಕುಸಿಯುತ್ತಿದೆ ಚಿನ್ನದ ಬೆಲೆ: ಈಗ ಎಷ್ಟಿದೆ ನೋಡಿ
ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮತ್ತು ಚಿನ್ನವನ್ನು ಕೊಳ್ಳುವವರಿಗೆ ಶುಭ ಸುದ್ದಿ ಸಿಕ್ಕಿದೆ. ಕಳೆದ 10 ದಿನಗಳಿಂದ ಭಾರತದಲ್ಲಿ ಚಿನ್ನದ ದರ ಇಳಿಕೆಯಾಗುತ್ತಿದೆ. ಗುರುವಾರ ಭಾರತದಲ್ಲಿ ಚಿನ್ನದ ಬೆಲೆ 190 ರೂಪಾಯಿ ಕುಸಿತವಾಗಿದೆ.
ಗುರುವಾರ ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 52,400 ರೂಪಾಯಿ ಆಗಿದೆ. ಗುರುವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂಪಾಯಿ ಕುಸಿತವಾಗಿದ್ದು 57,160 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

ಭಾರತದಲ್ಲಿ 22ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಇಂದು ರೂ.1900 ಇಳಿಕೆಯಾಗಿದ್ದು 5,24,000 ರೂಪಾಯಿಗೆ ಮಾರಾಟವಾಗುತ್ತಿದೆ. 24ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ರೂ.2100ರ ಕುಸಿತವಾಗಿದ್ದು 5,71,600 ರೂಪಾಯಿಗೆ ಮಾರಾಟವಾಗುತ್ತಿದೆ.
2023ರ ಸೆಪ್ಟೆಂಬರ್ 26ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54750 ರೂಪಾಯಿ ಅಕ್ಟೋಬರ್ 5ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನ 52,400 ರೂಪಾಯಿಗೆ ಮಾರಾಟವಾಗುತ್ತಿದೆ. ಸೆಪ್ಟೆಂಬರ್ 30ರಂದು ಹೊರತುಪಡಿಸಿ ಪ್ರತಿದಿನ ಚಿನ್ನದ ದರ ಕುಸಿತ ಕಂಡಿದೆ.
2023ರ ಸೆಪ್ಟೆಂಬರ್ 26ರಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,730 ರೂಪಾಯಿ ಅಕ್ಟೋಬರ್ 5ರಂದು 10 ಗ್ರಾಂ 24 ಕ್ಯಾರೆಟ್ ಚಿನ್ನ 57,160 ರೂಪಾಯಿಗೆ ಮಾರಾಟವಾಗುತ್ತಿದೆ. 10 ದಿನಗಳಲ್ಲಿ 2100 ರೂಪಾಯಿ ಕುಸಿತ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 5,240 ರೂಪಾಯಿ (10 ಗ್ರಾಮ್‌ಗೆ 52,400 ರೂಪಾಯಿ) 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 5,716 ರೂಪಾಯಿ (10 ಗ್ರಾಮ್‌ಗೆ 57,160 ರೂಪಾಯಿ) ಆಗಿದೆ.
ಚೆನ್ನೈನಲ್ಲಿ ಚಿನ್ನದ ಬೆಲೆ: 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 52,950 ರೂ ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಗುರುವಾರ 57,760 ರೂಪಾಯಿಗೆ ಮಾರಾಟವಾಗುತ್ತಿದೆ.
ದೆಹಲಿಯಲ್ಲಿ ಚಿನ್ನದ ಬೆಲೆ: 10 ಗ್ರಾಂ 22 ಕ್ಯಾರೆಟ್ ಚಿನ್ನ 52,550 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನ 57,310 ರೂಪಾಯಿಗೆ ಮಾರಾಟವಾಗುತ್ತಿದೆ.
ಮುಂಬೈನಲ್ಲಿ ಚಿನ್ನದ ಬೆಲೆ: ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 52,400 ರೂಪಾಯಿ ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 57,160 ರೂಪಾಯಿಗೆ ಮಾರಾಟವಾಗುತ್ತಿದೆ.
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ: ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 52,400 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 57,160 ರೂಪಾಯಿ ಆಗಿದೆ.












Click it and Unblock the Notifications