Gold Rate: "ಚಿನ್ನ" ಇನ್ಮುಂದೆ ಇನ್ನಷ್ಟು ದುಬಾರಿ, ಚಿನ್ನ ಖರೀದಿಗೆ ಯಾವುದು ಬೆಸ್ಟ್ ಟೈಮ್
Gold Price: ಚಿನ್ನದ ಬೆಲೆ ಇದೀಗ ಗಗನ ಮುಖಿಯಾಗಿದೆ. ಈಗಾಗಲೇ ಚಿನ್ನದ ಬೆಲೆ ಬರೋಬ್ಬರಿ 80,000 ಸಾವಿರದತ್ತ ತಲುಪುತ್ತಿದೆ. ಈಗಾಗಲೇ ಚಿನ್ನ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ. ಆದರೆ, ಮತ್ತೊಂದು ಆಘಾತಕಾರಿ ವಿಚಾರವೆಂದರೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳಾಗುವ ಆತಂಕ ಎದುರಾಗಿದೆ.
ಚಿನ್ನದ ಬಗ್ಗೆ ಭಾರತೀಯರಲ್ಲಿ ವಿಶೇಷ ಸ್ಥಾನವಿದೆ. ಚಿನ್ನ ಕೇವಲ ಆಭರಣ ಹಾಗೂ ಆರ್ಥಿಕವಾಗಿ ಸ್ಥಿತಿವಂತರಿಗೆ ಮಾತ್ರ ಎನ್ನುವಂತೆ ಇಲ್ಲ. ಚಿನ್ನ ಒಂದು ಹೂಡಿಕೆ ಸಹ ಹೌದು. ಮನೆಯಲಿ ಇದ್ದರೆ ಚಿನ್ನ ಚಿಂತೆ ಯಾಕೆ ಇನ್ನಾ ಎನ್ನುವ ಮಾತಿದೆ. ಚಿನ್ನವು ಸಂಕಷ್ಟದ ಸಮಯದಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ. ಅಂದರೆ ಮನೆಯಲ್ಲಿ ಚಿನ್ನ ಇದ್ದರೆ, ಆರ್ಥಿಕ ಸಂಕಷ್ಟ ಎದುರಾಗುವ ಸಂದರ್ಭದಲ್ಲಿ ಅದನ್ನು ಅಡಮಾನ ಇರಿಸಿಯೋ ಅಥವಾ ಮಾರಾಟ ಮಾಡಿ ನಾವು ಸಂಕಷ್ಟದಿಂದ ಪಾರಾಗಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏಕಾಏಕಿ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ಬರೋಬ್ಬರಿ 80,000 ಸಾವಿರದ ಸಮೀಪಕ್ಕೆ ಬಂದು ನಿಂತಿದೆ. ತುಂಬಾ ದೂರದ ಮಾತೇನು ಅಲ್ಲ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಚಿನ್ನದ ಬೆಲೆಯು 50,000 ಸಾವಿರದಿಂದ 55,000 ಸಾವಿರದ ಸಮೀಪದಲ್ಲಿ ಇತ್ತು. ಆದರೆ, ಎರಡು ವರ್ಷದ ಒಳಗೆ 80 ಸಾವಿರದ ಗಡಿ ತಲುಪಿದೆ. ಇನ್ನು ಮುಂದಿನ ಎರಡು ಮೂರು ವರ್ಷದಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆಯು 1 ಲಕ್ಷದ ಸಮೀಪ ಬಂದರೂ ಅಚ್ಚರಿ ಇಲ್ಲ. ಆದರೆ, ಈಗ ಏಕಾಏಕಿ ಚಿನ್ನದ ಬೆಲೆ ಏರಿಕೆಯಾಗುವುದಕ್ಕೆ ಕಾರಣವಾಗಿರುವುದು ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧ.
ಈಚೆಗೆ ಇಸ್ರೇಲ್ - ಇರಾನ್‌ನ ನಡುವೆ ಮತ್ತೆ ಯುದ್ಧೋನ್ಮಾದ ಶುರುವಾಗಿದೆ. ರಷ್ಯಾ - ಉಕ್ರೇನ್‌ನ ನಡುವಿನ ಯುದ್ಧದ ತೀವ್ರತೆ ಕುಸಿದಿದೆ ನಿಜ. ಆದರೆ, ಮುಸುಕಿನ ಗುದ್ದಾಡ ಇದ್ದೇ ಇದೆ. ಇತ್ತೀಚಿನ ದಿನಗಳಲ್ಲಿ ವಿಶ್ವದ ವಿವಿಧ ಭಾಗದಲ್ಲಿ ಯುದ್ಧ ನಡೆಯುತ್ತಿದೆ. ಇದು ಬಂಗಾರ ಹಾಗೂ ಕಚ್ಚಾ ತೈಲೆ ಸೇರಿದಂತೆ ಹಲವು ವಸ್ತುಗಳ ಮೇಲೆ ಪರಿಣಾಮ ಬೀರಿದೆ. ಇದೇ ರೀತಿ ಯುದ್ಧಗಳು ಮುಂದುವರಿದರೆ. ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವ ಎಲ್ಲಾ ರಾಷ್ಟ್ರಗಳು ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.
2025ರಲ್ಲಿ ಭಾರೀ ಹೆಚ್ಚಳ: ಇದು ಅತಿಶಯೋಕ್ತಿ ಎನಿಸಬಹುದಾದರೂ ನಿಜ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. 2024ನೇ ಸಾಲಿನ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಅಕ್ಟೋಬರ್‌ನಲ್ಲಿ (ಅಕ್ಟೋಬರ್ 17ಕ್ಕೆ) 78,000 ಸಾವಿರ ತಲುಪಿದೆ. ಆದರೆ ಇನ್ನೂ ಎರಡು ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಮುಂದಿನ ವರ್ಷ ಅಂದರೆ 2025ನೇ ಸಾಲಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳು: ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಮುಖ್ಯ ಕಾರಣ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವುದು. ಇದರಿಂದ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಆಮದು, ರಫ್ತು ಹಾಗೂ ಪುನರ್ ರಫ್ತು ಮೇಲೆ ಭಾರೀ ಪರಿಣಾಮ ಬೀರಿದೆ. ಎರಡನೆಯದಾಗಿ ಅಮೆರಿಕದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ.
ಇತ್ತೀಚಿಗಷ್ಟೇ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಬೆಲೆ (ಮೌಲ್ಯ)ವು ಸರ್ವಕಾಲಿಕ ಕುಸಿತ ಕಂಡಿದೆ. ಇದೀಗ ಭಾರತದ 84 ರೂಪಾಯಿ ಅಮೆರಿಕದ 1 ಡಾಲರ್‌ಗೆ ಸಮವಾಗಿದೆ. ಇನ್ನು ಮತ್ತೊಂದು ಕಾರಣವೆಂದರೆ ಚಿನ್ನದ ಬೇಡಿಕೆಯೂ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಷೇರು ಮಾರುಕಟ್ಟೆಯ ಏರುಪೇರು ಇದೆ. ಈ ಎಲ್ಲಾ ಕಾರಣಗಳಿಂದ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ, ಚಿನ್ನ ಖರೀದಿಗೆ ಇದು ಅತ್ಯಂತ ಉತ್ತಮ ಸಮಯ ಎಂದು ಹೇಳಲಾಗುತ್ತಿದೆ. ಇಲ್ಲವೇ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಬಹುದು.
ಚಿನ್ನದ ಬೆಲೆ ಎಷ್ಟಿದೆ: ಅಕ್ಟೋಬರ್ 17ಕ್ಕೆ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,811 ರೂಪಾಯಿ ಆಗಿದೆ. ಇನ್ನು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯು 78,110 ರೂಪಾಯಿ ಆಗಿದೆ.












Click it and Unblock the Notifications