Gold New Updates: ಒನ್ ನೇಷನ್ ಒನ್ ಗೋಲ್ಡ್ ರೇಟ್ ವಿಚಾರದಲ್ಲಿ ಚಿನ್ನ ಪ್ರಿಯರಿಗೆ ನಿರಾಸೆ!
One Nation One Gold Rate: ದೇಶದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದೆ. ಚಿನ್ನ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಒನ್ ನೇಷನ್ ಒನ್ ಗೋಲ್ಡ್ ರೇಟ್‌ಗೆ ಇದೀಗ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಹೌದು ದೇಶದ ಎಲ್ಲೆಡೆ ಒಂದೇ ಚಿನ್ನದ ಬೆಲೆ ಜಾರಿ ಮಾಡುವ ಒನ್ ನೇಷನ್ ಒನ್ ಗೋಲ್ಡ್ ಪರಿಕಲ್ಪನೆಯ ಬಗ್ಗೆ ಜೋರು ಚರ್ಚೆ ನಡೆದಿತ್ತು. ಚಿನ್ನ ಪ್ರಿಯರು ಈ ಸುದ್ದಿಯಿಂದ ಖುಷಿಯಾಗಿದ್ದರು. ದೇಶದ ವಿವಿಧ ಭಾಗದಲ್ಲಿ ಇರುವ ಚಿನ್ನದ ಬೆಲೆಯ ಗೊಂದಲಗಳಿಗೆ ಇದರಿಂದ ಬ್ರೇಕ್‌ಬಿದ್ದು, ಚಿನ್ನ ಪ್ರಿಯರು ಕಡಿಮೆ ಬೆಲೆಗೆ ಚಿನ್ನ ಖರೀದಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಏನಿದು ಒನ್ ನೇಷನ್ ಒನ್ ಗೋಲ್ಡ್ ರೇಟ್, ಇದರ ಜಾರಿಯಿಂದ ಏನಾಗಲಿದೆ. ಈಗ ಏನಾಗಿದೆ ಎನ್ನುವ ವಿವರ ಇಲ್ಲಿದೆ.
ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ ಮೂರೇ ವರ್ಷದಲ್ಲಿ ಚಿನ್ನದ ಬೆಲೆಯು ಹಲವು ಪಟ್ಟು ಹೆಚ್ಚಳವಾಗಿದೆ. ಕಳೆದ ಕೆಲವೇ ತಿಂಗಳುಗಳಲ್ಲಿ ಚಿನ್ನದ ಬೆಲೆಯು 15 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಚಿನ್ನದ ಬೆಲೆ ಈ ವರ್ಷಾಂತ್ಯಕ್ಕೆ 24 ಕ್ಯಾರೆಟ್‌ನ 10 ಗ್ರಾಂಗೆ 77,840 ರೂಪಾಯಿ ಆಗಿದೆ. ಈ ಮೊತ್ತವು 2024ನೇ ಸಾಲಿನ ಪ್ರಾರಂಭದಲ್ಲಿ ಇದ್ದ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಚಿನ್ನದ ಬೆಲೆಯಲ್ಲಿ ಇರುವ ಗೊಂದಲ ಹಾಗು ಏಕರೂಪ ಬೆಲೆ ಜಾರಿ ಮಾಡುವ ಪ್ಲಾನ್ ನಡೆದಿತ್ತು.

ಈಗ ಇರುವ ಒನ್ ನೇಷನ್ ಒನ್ ರೇಷನ್ ಕಾರ್ಡ್, ಒನ್ ನೇಷನ್ ಒನ್ ಎಲೆಕ್ಷನ್ ಮಾದರಿಯಲ್ಲೇ. ಒನ್ ನೇಷನ್ ಒನ್ ಗೋಲ್ಡ್ ರೇಟ್ ಬಗ್ಗೆಯೂ ಎರಡು ಸುತ್ತಿನ ಸಭೆ ನಡೆದಿತ್ತು. ದೇಶದಲ್ಲಿ ಒನ್ ನೇಷನ್ ಒನ್ ಗೋಲ್ಡ್ ರೇಟ್ ಜಾರಿ ಆಗುವುದರಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ಒಂದೇ ಗೋಲ್ಡ್ ರೇಟ್ ಇರಲಿದೆ. ಅಲ್ಲದೆ ಚಿನ್ನದ ಗೊಂದಲಗಳಿಗೆ ಬೇಕ್ರ್ ಬೀಳಲಿದೆ ಅಂತಲೇ ಹೇಳಲಾಗಿತ್ತು.
ಈಗ ಇರುವ ಚಿನ್ನದ ಬೆಲೆಯಲ್ಲಿ ಹಲವು ಗೊಂದಲಗಳಿವೆ. ತಮಿಳುನಾಡಿನಲ್ಲಿ ಒಂದು ಬೆಲೆ ಇದ್ದರೆ, ಕರ್ನಾಟಕದಲ್ಲಿ ಇನ್ನೊಂದು ಬೆಲೆ ಇದೆ. ಇನ್ನು ಕೇರಳದಲ್ಲಿ ಈ ಎರಡೂ ರಾಜ್ಯಗಳಿಗಿಂತ ಭಿನ್ನವಾದ ಬೆಲೆ ಇದೆ. ಇನ್ನು ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ 10 ಗ್ರಾಂ ಚಿನ್ನದ ಬೆಲೆ ನಿಗದಿ ಮಾಡಿದರೆ, ಕೇರಳದಲ್ಲಿ 8 ಗ್ರಾಂಗೆ ಚಿನ್ನದ ಬೆಲೆಯನ್ನು ನಿಗದಿ ಮಾಡುವುದು ಇದೆ. ಅಲ್ಲದೆ ಚಿನ್ನದ ಗುಣಮಟ್ಟದ ವಿಷಯದಲ್ಲೂ ಕೆಲವೊಂದು ಗೊಂದಲಗಳು ಇವೆ. ಹೀಗಾಗಿ, ಈ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಿ. ಒನ್ ನೇಷನ್ ಒನ್ ಗೋಲ್ಡ್ ರೇಟ್ ಜಾರಿ ಮಾಡಬೇಕು ಎಂದು ಚರ್ಚೆಗಳು ನಡೆದಿದ್ದವು. ಅಂದರೆ ದೇಶದ ಎಲ್ಲಾ ರಾಜ್ಯಗಳಲ್ಲೂ ಒಂದೇ ಚಿನ್ನದ ಬೆಲೆ ಇರುವಂತೆ ನೋಡಿಕೊಳ್ಳುವುದು.
ಚಿನ್ನದ ಬೆಲೆಯ ಜೊತೆ ಜೊತೆಗೆ ಮೇಕಿಂಗ್ ಚಾರ್ಜ್, ಚಿನ್ನದ ಆಭರಣದ ವರ್ಕ್ ಚಾರ್ಜ್ ಅಂತೆಲ್ಲ ಸೇರಿ ಹಲವು ಟ್ಯಾಕ್ಸ್ ಹಾಗೂ ಅಡಿಷನ್ ಚಾರ್ಜ್‌ಗಳು ಇವೆ. ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ಉಳಿದ ರಾಜ್ಯದಲ್ಲಿ ಚಿನ್ನದ ಗುಣಮಟ್ಟ ಚೆನ್ನಾಗಿದೆ ಎನ್ನುವ ಮಾತೂ ಇದೆ. ಇನ್ನು ಭಾರತದಲ್ಲಿ ಒಂದು ರಾಷ್ಟ್ರ ಹಾಗೂ ಒಂದು ಬೆಲೆ ನೀತಿ ಜಾರಿ (ONOR) ಮಾಡುವ ನಿಟ್ಟಿನಲ್ಲಿ ಜೋರು ಚರ್ಚೆ ನಡೆದಿತ್ತು.
ದೇಶದ ಪ್ರಮುಖ ಆಭರಣ ಉದ್ಯಮಗಳು ಒನ್ ನೇಷನ್ ಒನ್ ರೇಟ್ ಜಾರಿ ಮಾಡುವುದಕ್ಕೆ ಮುಂದೆ ಬಂದಿದ್ದವು. ಇದಕ್ಕಾಗಿ ಇಂಡಿಯನ್ ಜ್ಯುವೆಲರ್ಸ್ ಮತ್ತು ಬುಲಿಯನ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಜೆಮ್ ಹಾಗೂ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಉದ್ಯಮಗಳು ಚರ್ಚೆ ನಡೆಸಿದ್ದವು. ಅಕ್ಟೋಬರ್ ತಿಂಗಳಿನಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು. ಎರಡನೇ ಹಂತದ ಸಭೆಯೂ ಆಗಿದೆ ಎನ್ನಲಾಗಿದೆ. ಆದರೆ, ಇದಾದ ಮೇಲೆ ಈ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ. ಇದು ಚರ್ಚೆಯ ಹಂತದಲ್ಲೇ ಉಳಿದಿದ್ದು, ಚಿನ್ನ ಪ್ರಿಯರಿಗೆ ಇದರಿಂದ ನಿರಾಸೆಯಾಗಿದೆ.
ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇರುವ ಗೊಂದಲ ಹಾಗೂ ದೇಶದಲ್ಲಿ ಏಕರೂಪ ಚಿನ್ನದ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಅಖಿಲ ಭಾರತ ರತ್ನ ಹಾಗೂ ಆಭರಣ ಡೊಮೆಸ್ಟಿಕ್ ಕೌನ್ಸಿಲ್ ಏಕರೂಪ ಚಿನ್ನದ ಬೆಲೆ ನೀತಿಗೆ ಒತ್ತು ನೀಡುತ್ತಿದೆ ಎನ್ನಲಾಗಿತ್ತು. ದೇಶದ ಎಲ್ಲಾ ರಾಜ್ಯಗಳಲ್ಲೂ ಒಂದೇ ಚಿನ್ನದ ಬೆಲೆ ಜಾರಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ದೇಶದ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಗಳು ಒಂದೆಡೆ ಸೇರಿ ಚರ್ಚೆ ನಡೆಸಿದ್ದವು. ಆದರೆ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗದೆ ಇರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ.
Photo credit:This is an AI generated aticle image through WISE












Click it and Unblock the Notifications