ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ: ಐಪಿಎಸ್ ದಂಪತಿ

ಪಣಜಿ, ಸೆ.30: 'ವೇಶ್ಯಾವಾಟಿಕೆಗೆ ಕಾನೂನು ಚೌಕಟ್ಟು ತೊಡಿಸಿ' ಎಂಬ ಹೇಳಿಕೆ ನೀಡುವ ಮೂಲಕ ಭಾರತೀಯ ಪೊಲೀಸ್ ಸೇವೆಯ (IPS) ಇಬ್ಬರು ಯುವ ಅಧಿಕಾರಿಗಳು ಗೋವಾದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದಾರೆ.

ಪ್ರಿಯಾಂಕಾ ಮತ್ತು ಕಾರ್ತಿಕ್ ಕಶ್ಯಪ್ ಎಂಬ ಈ ಇಬ್ಬರೂ ಸತಿ-ಪತಿಗಳು ಕಳೆದ ವಾರಾಂತ್ಯ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆದರೆ ಇದು ತಮ್ಮ ''ವೈಯಕ್ತಿಕ ಅಭಿಪ್ರಾಯ'' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Goa IPS couple Priyanka Kartik Kashyap calls for legalising prostitution- rakes up controversy,

ಆದರೆ ಇದು ಗೋವಾ ಜನರ ಹುಬ್ಬೇರಿಸಿದ್ದು, 'ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ' ಉಚಿತ ಸಲಹೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಸೆಕ್ಸ್ ಟೂರಿಸಂ'ಗೆ ಗೋವಾ ಪ್ರಶಸ್ತವಾದ ರಾಜ್ಯ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಯತ್ನಿಸುತ್ತಿರುವಾಗ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳೇ ಈ ಮನಸ್ಥಿತಿಯಲ್ಲಿರುವುದು ಆಶ್ಚರ್ಯಕರ ಮತ್ತು ಆತಂಕಕಾರಿಯಾಗಿದೆ.

ಇನ್ನು ಆಡಳಿತಾರೂಢ ಬಿಜೆಪಿ ಮಸಾಜ್ ಪಾರ್ಲರ್ ಮತ್ತು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ, ಅವುಗಳನ್ನು ನಿಯಂತ್ರಿಸಲು ಯತ್ನಿಸುತ್ತಿರುವಾಗ ಪೊಲೀಸ್ ದಂಪತಿ 'ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ' ಬಗ್ಗೆ ವಿಚಾರ ಮಾಡುತ್ತಿರುವುದು ಕುತೂಹಲಕಾರಿಯಾಗಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಡ್ಯಾನ್ಸ್ ಬಾರ್ ಗಳನ್ನು ಪ್ರೋತ್ಸಾಹಿಸಿ ಮಾತನಾಡಿದ್ದರು. ತಕ್ಷಣ ನಾಲಿಗೆ ಕಚ್ಚಿಕೊಂಡು ಅದು ತಮ್ಮ ''ವೈಯಕ್ತಿಕ ಅಭಿಪ್ರಾಯ'' ಎಂದು ಸ್ಪಷ್ಟೀಕರಣ ನೀಡಿದ್ದರು. ಈಗ IPS ದಂಪತಿ 'ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ' ವಿಚಾರವನ್ನು ತೇಲಿಬಿಟ್ಟಿದ್ದಾರೆ.

ಪ್ರಿಯಾಂಕಾ ಕಶ್ಯಪ್ ಮತ್ತು ಕಾರ್ತಿಕ್ ಕಶ್ಯಪ್ 2009ನೇ ಸಾಲಿನ IPS ಅಧಿಕಾರಿಗಳು. ಪ್ರಿಯಾಂಕಾ ಉತ್ತರ ಜಿಲ್ಲೆಯ ಎಸ್ಪಿಯಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ಕಾರ್ತಿಕ್ Anti-Narcotics Cell (ANC) ವಿಭಾಗದ ಮುಖ್ಯಸ್ಥರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+