ಗೋವಾ ಪೊಲೀಸರಿಂದ ತೆಹೆಲ್ಕಾ ಸಂಪಾದಕರ ಬಂಧನ

ತರುಣ್ ತೇಜಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶನಿವಾರ ಬೆಳಗ್ಗೆ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಗೋವಾ ಸೆಷನ್ಸ್ ಕೋರ್ಟ್, ಸುದೀರ್ಘ ವಿಚಾರಣೆ ನಡೆಸಿ ತರುಣ್ ತೇಜಪಾಲ್ ಅವರಿಗೆ ಜಾಮೀನು ನಿರಾಕಸಿದ ಹಿನ್ನಲೆಯಲ್ಲಿ ಗೋವಾ ಪೊಲೀಸರು ತೇಜ್ಪಾಲ್ ಅವರನ್ನು ತಮ್ಮ ವಶಕ್ಕೆ ತೆಗೆದು ಕೊಂಡಿದ್ದಾರೆ.
ಈ ಕೇಸಿನ ತನಿಖಾಧಿಕಾರಿ ಸುನೀತಾ ಸಾವಂತ್, ಕೋರ್ಟ್ ತೇಜ್ಪಾಲಿಗೆ ಬೇಲ್ ನಿರಾಕರಿಸಿದೆ. ಗೋವಾ ಪೊಲೀಸರು ಅವರನ್ನು ಬಂಧಿಸಿದ್ದಾರೆ. ತಪಾಸಣೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದು ನಂತರ ಜೈಲಿಗೆ ಹಸ್ತಾಂತರಿಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಇದರೊಂದಿಗೆ ಕೆಲವು ದಿನಗಳಿಂದ ಬಂಧನಕ್ಕೊಳಾಗುವುದನ್ನು ತಪ್ಪಿಸಿಕೊಳ್ಳಲು ಪೊಲೀಸರ ಜೊತೆ ಕಣ್ಣುಮುಚ್ಚಾಲೆ ಆಡುತ್ತಿದ್ದ ತೇಜಪಾಲ್ ಕಾನೂನು ತೆಕ್ಕೆಗೆ ಸಿಕ್ಕಿ ಬಿದ್ದಂತಾಗಿದೆ.












Click it and Unblock the Notifications