ಗ್ಲಾಸ್‌ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ: 5 ಜನರ ಸಾವು

ತೆಲಂಗಾಣದ ಶಾದ್‌ನಗರದಲ್ಲಿ ಶುಕ್ರವಾರ ಗಾಜಿನ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿದೆ. ಈ ಕಾರ್ಖಾನೆಯಲ್ಲಿ ಒಳಗಡೆ ಕೆಲಸ ಮಾಡುತ್ತಿದ್ದ ಐವರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ.

ಸೌತ್ ಗ್ಲಾಸ್ ಫ್ಯಾಕ್ಟರಿಯ ಟ್ಯಾಂಕ್‌ನಲ್ಲಿ ಸಂಜೆ 4.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಗ್ಲಾಸ್‌ ಕಾರ್ಖಾನೆ ಹೈದರಾಬಾದ್‌ದಿಂದ 55 ಕಿಲೋ ಮೀಟರ್‌ ದೂರದ ಶಾದ್‌ನಗರದಲ್ಲಿಈ ದುರ್ಘಟನೆ ಮಾಡಿದೆ. ಸ್ಫೋಟ ನಡೆದ ಹೊಡೆತಕ್ಕೆ ಕಾರ್ಖಾನೆಯಾದ್ಯಂತ ಬೆಂಕಿ ಹತ್ತಿಕೊಂಡಿದೆ. ಅಲ್ಲದೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.

Glass Factory Explosion in Telangana Five Dead 15 Injured

ಬೆಂಕಿ ಆರಿಸಲು ಹರಸಾಹಸ

ಈ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೆದರಿ ಓಡಲು ಆರಂಭಿಸಿದರು. ಘಟನೆಗೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೀಡಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗ್ಲಾಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಅಗ್ನಿಶಾಮಕ ದಳ ರಕ್ಷಿಸುವಲ್ಲಿ ಸಫಲವಾಗಿದೆ. ಕಾರ್ಖನೆಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಪ್ರಯತ್ನ ನಡೆಸಿದ ಫಲವಾಗಿ, ಬೆಂಕಿ ಹತೋಟಿಗೆ ಬಂದಿದೆ. ಇನ್ನು ಈ ಬೆಂಕಿ ಹತಲ್ಲು ನಿಖರವಾದ ಕಾರಣ ಏನು ಎಂಬುದು ಇನ್ನು ನಿಖರವಾಗಿ ತಿಳಿದು ಬಂದಿಲ್ಲ.

Glass Factory Explosion in Telangana Five Dead 15 Injured

ಉತ್ತಮ ಚಿಕಿತ್ಸೆಯ ಸೂಚನೆ

ಹೊರ ರಾಜ್ಯದ ಕಾರ್ಮಿಕರು ಗ್ಲಾಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ ಯುಪಿ, ಬಿಹಾರ ಹಾಗೂ ಓಡಿಶಾದ ಕಾರ್ಮಿಕರು ಹೆಚ್ಚಿದ್ದರು ಎನ್ನಲಾಗಿದೆ. ದುರ್ಘಟನೆಯಲ್ಲಿ ಮೃತ ಪಟ್ಟವರ ಗುರುತು ಇನ್ನು ಪತ್ತೆಯಾಗಿಲ್ಲ. ಈ ಸ್ಫೋಟದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳುವಂತೆ ಅಪಘಾತ ಸ್ಥಳದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+