ರೇಪ್‌ ಮಾಡಿದ್ದಕ್ಕೆ ಯುವತಿ ಏನು ಮಾಡಿದಳು ಗೊತ್ತಾ?

ಮಾದೇಪುರ(ಬಿಹಾರ),ಆ.1: ಸಮಸ್ಯೆ ನಿವಾರಣೆಗಾಗಿ ಜ್ಯೋತಿಷಿ ಮನೆಗೆ ಹೋಗಿ ಅತ್ಯಾಚಾರಕ್ಕೆ ಒಳಗಾದ ಯುವತಿ ಸಿಟ್ಟಾಗಿ ಜ್ಯೋತಿಷಿಯ ಶಿ‌ಶ್ನವನ್ನೇ ಕತ್ತರಿಸಿ ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಮಾದೇಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಆರೋಪದ ಹಿನ್ನಲೆಯಲ್ಲಿ ಜ್ಯೋತಿಷಿ ಮಹೇಂದ್ರ(35) ಎಂಬಾತನನ್ನು ಮಾದೇಪುರ ಪೊಲೀಸರು ಬಂಧಿಸಿದ್ದಾರೆ.

rape

ಘಟನೆ ಹಿನ್ನಲೆ: ಜುಲೈ 1 ರಂದು ಯುವತಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಯುವತಿಯ ತಾಯಿ ಈ ಅನಾರೋಗ್ಯಕ್ಕೆ ಯಾರೋ ಮಾಟ ಮಾಡಿದ್ದಾರೆ ಎಂದು ಭಾವಿಸಿ ಆಕೆಯನ್ನು ಜ್ಯೋತಿಷಿ ಬಳಿ ತೆರಳಲು ಹೇಳಿದ್ದಾರೆ. ಈ ಜ್ಯೋತಿಷಿ ಯುವತಿಯ ತಾಯಿಯ ಸಹೋದರಿಯ ಗಂಡನಾಗಿದ್ದು ಮಾಟ, ಪವಾಡಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.

ಇದರಂತೆ ಯುವತಿ ಜ್ಯೋತಿಷಿಯ ಮನೆಗೆ ಜು.1ರಂದು ಬಂದಿದ್ದಾಳೆ. ಈ ಸಂದರ್ಭದಲ್ಲಿ ಜ್ಯೋತಿಷಿ ಲೈಂಗಿಕ ದೌರ್ಜ‌ನ್ಯ ಎಸಗಿದ್ದಾನೆ. ಆಕೆ ವಿರೋಧಿಸಿದಾಗ ಆಕೆಯ ಮೇಲೆ ರೇಪ್‌ ಮಾಡಿದ್ದಾನೆ.

ರೇಪ್‌ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವತಿ ಮರುದಿನ ರಾತ್ರಿ ಜ್ಯೋತಿಷಿಯ ಮನೆಗೆ ಮೊಬೈಲ್‌ ಮತ್ತು ಹರಿತವಾದ ಚಾಕುವಿನೊಂದಿಗೆ ತೆರಳಿದ್ದು, ಜ್ಯೋತಿಷಿಯ ಶಿಶ್ನವನ್ನೇ ಚಾಕುವಿನಿಂದ ಕತ್ತರಿಸಿ ಹಾಕಿದ್ದಾಳೆ. ಈ ಸಂದರ್ಭದ ಮಾತುಕತೆಯನ್ನು ಮೊಬೈಲ್‌ಲ್ಲಿ ರೆಕಾರ್ಡ್ ಮಾಡಿದ್ದಾಳೆ.

ನಡೆದ ಘಟನೆಯನ್ನು ಆಕೆ ಪೋಷಕರಲ್ಲಿ ಹೇಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ಸ್ವೀಕರಿಸದ ಪೊಲೀಸರು ಸಂಧಾನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರು ನೀಡಿದರೆ ಕೊಲೆ ಮಾಡುವುದಾಗಿ ಜ್ಯೋತಿಷಿ ಕಡೆಯವರು ಯುವತಿಗೆ ಬೆದರಿಕೆ ಹಾಕಿದ್ದಾರೆ. ಕೊನೆಗೆ ರಾಜಕೀಯ ನಾಯಕರು ಪ್ರವೇಶವಾಗಿ ಪೊಲೀಸ್‌ ಠಾಣೆಯಲ್ಲಿ ಜು.30ರಂದು ಪ್ರಕರಣ ದಾಖಲಾಗಿದೆ.

ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+