ಭಾರತದ 'ಮೆಟ್ರೋ ಮ್ಯಾನ್'ಗೆ 'ಜಾರ್ಜ್ ಫರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ'
ಮುಂಬೈ, ಆಗಸ್ಟ್ 31: ಮಾಜಿ ಕೇಂದ್ರ ಸಚಿವ, ದಕ್ಷಿಣ ಕನ್ನಡ ಮೂಲದ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ- 2024 ಪ್ರದಾನ ಸಮಾರಂಭ ಸೆಪ್ಟೆಂಬರ್ 5, 2024 ರಂದು ನಡೆಯಲಿದೆ. ಮುಂಬೈನ ಬಂಟರ ಭವನ, ಅನೆಕ್ಸ್ ಹಾಲ್, ಕುರ್ಲಾ ಪೂರ್ವದಲ್ಲಿ ಈ ಸಮಾರಂಭ ನಡೆಯಲಿದ್ದು, ಈ ಬಾರಿ "ಮೆಟ್ರೋ ಮ್ಯಾನ್" ಆಫ್ ಇಂಡಿಯಾ, ಪದ್ಮವಿಭೂಷಣ ಡಾ.ಇ.ಶ್ರೀಧರನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೇಂದ್ರದ ರಾಜ್ಯ ಸಚಿವರು - ರೈಲ್ವೆ ಮತ್ತು ಜಲ ಶಕ್ತಿ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಹತ್ತು ಕ್ಯಾಬಿನೆಟ್ ಖಾತೆಗಳನ್ನು ನಿರ್ವಹಿಸಿದ್ದ ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ಮುಖ್ಯ ಅತಿಥಿಯಾಗಿ ಆಗಮಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಸಮಿತಿಯ ಅಧ್ಯಕ್ಷ ಎಲ್. ವಿ. ಅಮೀನ್ ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಂಬೈಯ ಮಾಜಿ ಸಂಸದ ಗೋಪಾಲ್ ಶೆಟ್ಟಿ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರಿನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕದ ಮಾಜಿ ಸಚಿವ ನಾರಾಯಣ ಗೌಡ ಮತ್ತು ಆರ್ಗ್ಯಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿ. ಎಂ. ಡಿ. ತೋನ್ಸೆ ಆನಂದ ಎಂ. ಶೆಟ್ಟಿ ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು - ಬಂಟ್ಸ್ ಸಂಘ ಮುಂಬಯಿ, ಡಾ. ಸುರೇಶ್ ಎಸ್. ರಾವ್ ಅಧ್ಯಕ್ಷರು - ಬಿಎಸ್‌ಕೆಬಿ ಅಸೋಸಿಯೇಶನ್, ಮುಂಬಯಿ, ಹರೀಶ್ ಜಿ. ಅಮೀನ್, ಅಧ್ಯಕ್ಷರು - ಬಿಲ್ಲವರ ಅಸೋಸಿಯೇಷನ್, ಮುಂಬಯಿ, ಲೆ. ಜನರಲ್ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಸಮಿತಿಯ ಎನ್ ಆರ್ ಐ ಉಪಾಧ್ಯಕ್ಷರು ಹಾಗೂ ಧರ್ಮಪಾಲ್ ದೇವಾಡಿಗ, ಅಧ್ಯಕ್ಷರು - ವಿಶ್ವ ದೇವಾಡಿಗ ಮಹಾ ಮಂಡಲ ಭಾಗಿಯಾಗಲಿದ್ದಾರೆ.

ಸಮಿತಿಯ ಗೌರವ ಅಧ್ಯಕ್ಶರಾದ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಜಿಲ್ಲಾಧ್ಯಕ್ಷ ಡಿ.ಆರ್. ರಾಜು, ಉಪಾಧ್ಯಕ್ಷರಾದ ಪಿ.ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸಿಎ. ಐ.ಆರ್.ಶೆಟ್ಟಿ, ಜಿ.ಟಿ. ಆಚಾರ್ಯ, ಚಂದ್ರಶೇಖರ ಆರ್. ಬೆಲ್ಚಡ, ಹಿರಿಯಡ್ಕ ಮೋಹನದಾಸ್, ಕೆ. ಎಲ್. ಬಂಗೇರ, ಡಾ.ಆರ್.ಕೆ.ಶೆಟ್ಟಿ, ನ್ಯಾ. ಆರ್. ಎಂ. ಭಂಡಾರಿ, ಗಿರೀಶ್ ಬಿ.ಸಾಲಿಯಾನ್, ಜಿತೇಂದ್ರ ಗೌಡ ಮತ್ತು ಡಾ. ಫ್ರಾಂಕ್ ಫೆರ್ನಾಂಡಿಸ್, ಗೌ. ಕಾರ್ಯದರ್ಶಿಗಳಾದ ರವಿ ಎಸ್.ದೇವಾಡಿಗ, ಹ್ಯಾರಿ ಸಿಕ್ವಿರಾ ಮತ್ತು ದೇವದಾಸ್ ಕುಲಾಲ್,
ಗೌ. ಕೋಶಾಧಿಕಾರಿ ತುಳಸೀದಾಸ್ ಎಲ್.ಅಮಿನ್, ಜೊತೆ ಕೋಶಾಧಿಕಾರಿಗಳಾದ ಸದಾನಂದ ಆಚಾರ್ಯ ಮತ್ತು ತೋನ್ಸೆ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್.ಶೆಟ್ಟಿ, ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜಾ, ನ್ಯಾ. ಮೊಹಿದ್ದೀನ್ ಮುಂಡ್ಕೂರು, ಗೌ. ಕಾರ್ಯದರ್ಶಿ ಪ್ರೊ.ಶಂಕರ್, ಜೊತೆ ಕಾರ್ಯದರ್ಶಿ, ಸುರೇಂದ್ರ ಮೆಂಡನ್, ಶೇಖರ್ ಗುಜ್ಜರಬೆಟ್ಟು, ಸದಸ್ಯರಾದ ಡಾ.ಪ್ರಭಾಕರ ಶೆಟ್ಟಿ ಬೋಳ, ಎಂ. ಎನ್. ಕರ್ಕೇರ, ದಯಾಸಾಗರ ಚೌಟ, ಶ್ಯಾಮ್ ಎನ್.ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಕರುಣಾಕರ ಹೆಜಮಾಡಿ, ಬಾಲಕೃಷ್ಣ ಭಂಡಾರಿ, ವಾಸು ಎಸ್. ದೇವಾಡಿಗ, ಡಾ.ಸುರೇಂದ್ರ ಕುಮಾರ್ ಹೆಗ್ಡೆ,
ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಉತ್ತಮ್ ಶೆಟ್ಟಿಗಾರ್, ಶ್ರೀನಿವಾಸ ಸಾಫಲ್ಯ, ಚಿತ್ರಾಪು ಕೆ.ಎಂ.ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಕಾಮತ್, ನ್ಯಾ. ಶಶಿಧರ್ ಕಾಪು, ಸಿ.ಎಸ್. ಗಣೇಶ್ ಎಸ್.ಶೆಟ್ಟಿ ಮತ್ತು ಸಮಿತಿಯ ವಿಶೇಷ ಆಹ್ವಾನಿತರಾದ ಎಚ್.ಅರುಣ್ ಕುಮಾರ್ - ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ, ಐಕಳ ಹರೀಶ್ ಶೆಟ್ಟಿ - ಅಧ್ಯಕ್ಷರು, ವಿಶ್ವ ಬಂಟ್ಸ್ ಫೆಡರೇಶನ್, ರವೀಶ್ ಜಿ. ಆಚಾರ್ಯ - ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ರಾಜೇಗೌಡ - ಅಧ್ಯಕ್ಷರು, ಒಕ್ಕಲಿಗರ ಸಂಘ ಮಹಾರಾಷ್ಟ್ರ,
ಕೆ.ಸಿ. ಶೆಟ್ಟಿ - ಅಧ್ಯಕ್ಷರು, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್, ಎನ್.ಟಿ.ಪೂಜಾರಿ - ಅಧ್ಯಕ್ಷರು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್, ಪ್ರವೀಣ್ ಎನ್. ದೇವಾಡಿಗ - ಅಧ್ಯಕ್ಷರು, ದೇವಾಡಿಗ ಸಂಘ, ರಂಜಿತ್ ಎಸ್ ಭಂಡಾರಿ - ಅಧ್ಯಕ್ಷರು, ಭಂಡಾರಿ ಸೇವಾ ಸಮಿತಿ, ಉದಯ ಅಧಿಕಾರಿ - ಉಪಾಧ್ಯಕ್ಷರು, ಅಖಿಲ ಕರ್ನಾಟಕ ಜೈನ ಸಂಘ, ನ್ಯಾ. ಪ್ರಭಾಕರ ಶೆಟ್ಟಿ - ಅಧ್ಯಕ್ಷರು, ಬಂಟ್ಸ್ ಲಾ ಫೋರಂ, ವಿರಾರ್ ಶಂಕರ್ ಶೆಟ್ಟಿ - ಅಧ್ಯಕ್ಷರು, ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೊರೆಂಟ್ಸ್ ಅಸೋಸಿಯೇಷನ್ಸ್ ಮಹಾರಾಷ್ಟ್ರ,
ಸಿಎ ಸುರೇಂದ್ರ ಕೆ. ಶೆಟ್ಟಿ - ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಷನ್, ರಾಜೇಶ್ ಶೆಟ್ಟಿ - ಅಧ್ಯಕ್ಷರು, ಜವಾಬ್, ರಘು ಮೂಲ್ಯ - ಅಧ್ಯಕ್ಷರು - ಕುಲಾಲ ಸಂಘ, ಬಿ.ವಿ.ರಾವ್ - ಅಧ್ಯಕ್ಷರು, ಗಾಣಿಗ ಸಮಾಜ, ಉತ್ತಮ್ ಶೆಟ್ಟಿಗಾರ್ - ಅಧ್ಯಕ್ಷರು, ಪದ್ಮಶಾಲಿ ಸಮಾಜ ಸೇವಾ ಸಂಘ, ಮನೋಜ್ ಹೆಗ್ಡೆ -ಅಧ್ಯಕ್ಷರು, ಹೆಗ್ಗಡೆ ಸೇವಾ ಸಂಘ, ಕೃಷ್ಣ ಎನ್. ಉಚ್ಚಿಲ್ - ಅಧ್ಯಕ್ಷರು, ತೀಯಾ ಸಮಾಜ, ಸಿಎ ವಿಜಯ್ ಕುಂದರ್ - ಅಧ್ಯಕ್ಷರು, ರಜಕ ಸಂಘ, ಜಾನ್ ಮ್ಯಾಥ್ಯೂ - ಅಧ್ಯಕ್ಷರು, ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್, ಸೂರ್ಯ ಪೂಜಾರಿ- ಅಧ್ಯಕ್ಷರು, ಕುಂದಾಪುರ ಬಿಲ್ಲವ ಸಂಘ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪರಿಚಯ
ಕಳೆದ 24 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಉಭಯ ಜಿಲ್ಲೆಗಳ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದರೊಂದಿಗೆ, ಜಿಲ್ಲೆಗಳ ಅಭಿವೃದ್ದಿಗಾಗಿ ಕ್ರೀಯಾಶೀಲವಾರಿಗುವ ಮುಂಬಯಿಯಲ್ಲಿರುವ ಜಿಲ್ಲೆಗಳ ಎಲ್ಲಾ ಸಮುದಾಯಗಳ ಮುಖಂಡರನ್ನೊಳಗೊಂಡ ಏಕೈಕ ಸರಕಾರೇತರಸಂಘಟನೆ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಾಗಿದೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications