ಗೌರಿ ಹತ್ಯೆಯಲ್ಲಿ ಮೋದಿಯನ್ನು ಎಳೆತಂದ ರಾಹುಲ್ಗೆ ಗಡ್ಕರಿ ತಿರುಗೇಟು
ನವದೆಹಲಿ, ಸೆ 6: ಹಿರಿಯ ಪತ್ರಕರ್ತೆ, ಎಡಪಂಥೀಯ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಹುಲ್, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS ) ಸಿದ್ದಾಂತವನ್ನು ವಿರೋಧಿಸುವವರನ್ನು ಕೊಲ್ಲಲಾಗುತ್ತಿದೆ ಎನ್ನುವ ಮೂಲಕ ಗೌರಿ ಹತ್ಯೆಗೆ ನೇರವಾಗಿ ಸಂಘಪರಿವಾರದ ಮೇಲೆ ಗೂಬೆ ಕೂರಿಸಿದ್ದಾರೆ.
ಸತ್ಯ ಇಂದಲ್ಲಾ ನಾಳೆ ಹೊರಗೆ ಬಂದೇ ಬರುತ್ತದೆ, ಗೌರಿ ನಮ್ಮ ಹೃದಯದಲ್ಲಿದ್ದಾರೆ. ಗೌರಿ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ಯಾವುದೇ ಪಕ್ಷಕ್ಕೆ ಅಥವಾ ಸಂಘಟನೆಗೆ ಮೀಸಲಾಗದೇ ಅವರು ಈ ದೇಶದ ಪ್ರಧಾನಿ ಅನ್ನೋದನ್ನು ಮರೆತು ರಾಹುಲ್ ಗಾಂಧಿ ಹುಡುಗಾಟದ ಹೇಳಿಕೆಯನ್ನು ನೀಡಿದ್ದಾರೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಹುಲ್ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.
ಅಪ್ರತಿಮ ವಾಗ್ಮಿಯಾಗಿರುವ ಪ್ರಧಾನಿ ಮೋದಿಯನ್ನು 'ಮೌನಿ' ಎಂದು ಜರಿದಿರುವ ರಾಹುಲ್, ಮೋದಿಯವರ ಒಟ್ಟಾರೆ ಚಿಂತನೆ ಸಾರ್ವಜನಿಕರ ಧ್ವನಿಯನ್ನು ಅಡಗಿಸುವುದು, ಹಾಗಾಗಿಯೇ ಈ ರೀತಿಯ ಹತ್ಯೆಗಳು ನಡೆಯುತ್ತಿರುವುದು ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಗಡ್ಕರಿ ಮತ್ತು ಟ್ವಿಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಮುಂದೆ ಓದಿ..
|
ಕರ್ನಾಟಕದ ಸಿಎಂ ಸಿದ್ದರಾಮಯ್ಯನವರಲ್ಲಿ ಮಾತನಾಡಿದ್ದೇನೆ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮಾತನಾಡಿದ್ದೇನೆ. ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ಶೀಘ್ರವಾಗಿ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎನ್ನುವ ರಾಹುಲ್ ಗಾಂಧಿ ಟ್ವೀಟ್.

ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಮೋದಿ ಯಾಕೆ?
ಗೌರಿ ಲಂಕೇಶ್ ಹತ್ಯೆ ಖಂಡನೀಯ. ಈ ವಿಚಾರದಲ್ಲಿ ಪ್ರಧಾನಿಯನ್ನು ರಾಹುಲ್ ಗಾಂಧಿ ಎಳೆದು ತಂದಿರುವುದು ಮೂರ್ಖತನದ ಪರಮಾವಧಿ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರ, ಕಾನೂನು ಮತ್ತು ಸುವ್ಯವಸ್ಥೆ ಸಿದ್ದರಾಮಯ್ಯ ಸರಕಾರದ ಹೊಣೆ - ನಿತಿನ್ ಗಡ್ಕರಿ.

ಮೋದಿ ಹಿಂದೂ ರಾಜಕಾರಣಿ ಎಂದ ರಾಹುಲ್
ಮೋದಿ ಹಿಂದೂ ರಾಜಕಾರಣಿ ಎನ್ನುವ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡುತ್ತಾರೆ, ಇದೊಂದು ನಾಚಿಕೆಗೇಡಿನ ಹೇಳಿಕೆ. ಮೋದಿಯವರನ್ನು ಟೀಕಿಸುವುದೇ ಗುರಿಯಾಗಿರಿಸಿಕೊಂಡಿರುವ ರಾಹುಲ್, ದೇಶದ ಪ್ರಧಾನಿಯೊಬ್ಬರನ್ನು ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ಎಳೆದು ತಂದಿರುವುದು ತಪ್ಪು - ನಿತಿನ್ ಗಡ್ಕರಿ.
|
1984ರಲ್ಲಿ ದೆಹಲಿಯಲ್ಲಿ ನಡೆದ ಮಾರಣಹೋಮ
ಸಿಖ್ ಸಮುದಾಯದವರು ಬಿಜೆಪಿಯವರ ವಿರುದ್ದ ಮಾತನಾಡಿದರು, 1984ರಲ್ಲಿ ಅವರ ವಿರುದ್ದ ಮಾರಣಹೋಮ ನಡೆಯಿತು. RSSನವರು ಬಿಜೆಪಿಯವರ ವಿರುದ್ದ ಮಾತನಾಡಿದರು ಕೇರಳ, ಪಶ್ಚಿಮಬಂಗಾಳ, ಕರ್ನಾಟಕದಲ್ಲಿ ಅವರಿಗೂ ಅದೇ ಗತಿಯಾಯಿತು.
|
ಬಿಜೆಪಿ ಮತ್ತು ಸಂಘಪರಿವಾರವನ್ನು ಯಾಕೆ ಎಳೆದು ತರುತ್ತೀರಾ
ಅದು ಕರ್ನಾಟಕ, ನಿಮ್ಮ ಪಕ್ಷವೇ ಅಲ್ಲಿ ಅಧಿಕಾರದಲ್ಲಿರುವುದು. ಬಿಜೆಪಿ ಮತ್ತು ಸಂಘಪರಿವಾರವನ್ನು ಯಾಕೆ ಎಳೆದು ತರುತ್ತೀರಾ, ನಿಮ್ಮ ಮುಖ್ಯಮಂತ್ರಿಗೆ ಪರಿಸ್ಥಿತಿ ನಿಯಂತ್ರಿಸುವ ಜವಾಬ್ದಾರಿ ಇಲ್ಲವಾ?
|
ಸಿದ್ದರಾಮಯ್ಯನವರನ್ನೂ ತರಾಟೆಗೆ ತೆಗೆದುಕೊಳ್ಳಿ
ಶಿವರಾಜ್ ಸಿಂಗ್ ಚೌಹಾಣ್, ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸುವ ನೀವು, ಕರ್ನಾಟಕದ ಸಿಎಂ ಸಿದ್ದರಾಮಯ್ಯನವರನ್ನೂ ಟೀಕಿಸಿ. ಕರ್ನಾಟಕ ಸರಕಾರದ ಭ್ರಷ್ಟಾಚಾರದ ವಿರುದ್ದ ಗೌರಿ ಲಂಕೇಶ್ ಕೆಲಸ ಆರಂಭಿಸಿದ್ದರು.












Click it and Unblock the Notifications