Viral Video: ಗಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಶ್ವಾನವನ್ನು ರಕ್ಷಿಸಿದ ರ‍್ಯಾಫ್ಟಿಂಗ್ ಆಪರೇಟರ್, ನೆಟ್ಟಿಗರಿಂದ ಮೆಚ್ಚುಗೆ

ಮನುಷ್ಯನ ಕ್ರೂರತೆಯ ಬಗ್ಗೆ ಪ್ರತಿದಿನ ಹಲವಾರು ಸುದ್ದಿಗಳು ಕೇಳಿಬರುತ್ತಿರುವ ಈ ಕಾಲದಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಗಂಗಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾದಾಗ ಪ್ರವಾಹದ ನಡುವೆ ಸಿಲುಕಿದ್ದ ಬೀದಿ ನಾಯಿಯೊಂದನ್ನು ರ‍್ಯಾಫ್ಟಿಂಗ್ (Rafting) ಆಪರೇಟರ್‌ವೊಬ್ಬರು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.

'ಸೇವ್ ಎ ಸ್ಟ್ರೇ ನೋಯ್ಡಾ' (Save a Stray Noida) ಎಂಬ ಪ್ರಾಣಿ ದಯಾ ಸಂಸ್ಥೆಯು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ನದಿಯ ನೀರಿನ ಮಟ್ಟವು ಹಠಾತ್ತನೆ ಏರಿಕೆಯಾದ ಕಾರಣ, ಈ ಶ್ವಾನವು ಗಂಗಾ ನದಿಯ ಮಧ್ಯದಲ್ಲಿರುವ ಸಣ್ಣ ಬಂಡೆಯೊಂದರ ಮೇಲೆ ಸಿಲುಕಿಕೊಂಡಿತ್ತು. ನಾಯಿಯ ಸುತ್ತಲೂ ವೇಗವಾಗಿ ನೀರು ಹರಿಯುತ್ತಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿಲ್ಲದೆ ಆ ಮೂಕ ಪ್ರಾಣಿ ತೀವ್ರ ಭಯ ಹಾಗೂ ಆತಂಕದಿಂದ ನಿಂತಿರುವುದನ್ನು ವಿಡಿಯೋದ ಆರಂಭದಲ್ಲಿ ನೋಡಬಹುದಾಗಿದೆ.

Dog Rescue

ಸ್ವಲ್ಪ ಹೊತ್ತಿನಲ್ಲೇ ಆ ಮಾರ್ಗವಾಗಿ ರ‍್ಯಾಫ್ಟಿಂಗ್ ದೋಣಿಯಲ್ಲಿ ಬಂದ ಗುಂಪೊಂದು ನಾಯಿಯನ್ನು ಗಮನಿಸಿದೆ. ಈ ವೇಳೆ ದೋಣಿಯಲ್ಲಿದ್ದ ರ‍್ಯಾಫ್ಟಿಂಗ್ ಆಪರೇಟರ್‌ವೊಬ್ಬರು ಅತ್ಯಂತ ಜಾಗರೂಕತೆಯಿಂದ ನಾಯಿಯಿದ್ದ ಬಂಡೆಯ ಸಮೀಪದ ಕಲ್ಲಿನ ಮೇಲೆ ಹೆಜ್ಜೆ ಇಡುತ್ತಾರೆ. ನಾಯಿಯು ಗಾಬರಿಯಾಗದಂತೆ ಅದರ ಮೈದಡವಿ, ಪ್ರೀತಿಯಿಂದ ಸಮಾಧಾನಪಡಿಸುತ್ತಾರೆ. ನಂತರ ಹಗ್ಗದ ಸಹಾಯದಿಂದ ದೋಣಿಯನ್ನು ತಮ್ಮತ್ತ ಎಳೆದುಕೊಂಡು, ನಾಯಿಯನ್ನು ಎತ್ತಿ ಸುರಕ್ಷಿತವಾಗಿ ದೋಣಿಯೊಳಗೆ ಕೂರಿಸುತ್ತಾರೆ. ದೋಣಿಯಲ್ಲಿದ್ದ ಇತರರು ಕೂಡ ಆ ನಾಯಿಯನ್ನು ಪ್ರೀತಿಯಿಂದ ಉಪಚರಿಸಿ ಧೈರ್ಯ ತುಂಬುವ ದೃಶ್ಯ ವಿಡಿಯೋದಲ್ಲಿದೆ.

ಈ ವಿಡಿಯೋಗೆ ಅತ್ಯಂತ ಅರ್ಥಪೂರ್ಣವಾದ ಶೀರ್ಷಿಕೆಯನ್ನು ನೀಡಲಾಗಿದೆ. "ಇಂತಹ ಕ್ಷಣಗಳು ಮಾನವೀಯತೆಯು ತನ್ನ ಶುದ್ಧ ರೂಪದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ನಮಗೆ ನೆನಪಿಸುತ್ತವೆ. ಎಷ್ಟೋ ನಿರ್ಲಕ್ಷ್ಯಗಳ ನಡುವೆಯೂ, ತೋರುವ ಒಂದು ಸಣ್ಣ ಧೈರ್ಯ ಮತ್ತು ಕರುಣೆಯು ಜೀವವನ್ನು ಉಳಿಸಬಲ್ಲದು. ಜೊತೆಗೆ ಜನರ ಒಳ್ಳೆಯತನದ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ. ಯಾರದೋ ಒಬ್ಬರ ಉಳಿವಿಗೆ ನಾವೂ ಕಾರಣವಾಗೋಣ" ಎಂದು ಬರೆಯಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ರ‍್ಯಾಫ್ಟಿಂಗ್ ಆಪರೇಟರ್‌ನ ಸಮಯಪ್ರಜ್ಞೆ ಮತ್ತು ಕರುಣೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆಗಳು

ಈ ವೈರಲ್ ವಿಡಿಯೋಗೆ ಸಾವಿರಾರು ಜನರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು "ರಿಯಲ್ ಹೀರೋ.. ಈತನ ಕಾರ್ಯಕ್ಕೆ ನನ್ನದೊಂದು ಸೆಲ್ಯೂಟ್. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ, ಮಾನವೀಯತೆ ಇನ್ನೂ ಬದುಕಿದೆ ಎನ್ನಲು ಇದೇ ಸಾಕ್ಷಿ." ಎಂದು ಕಾಮೆಂಟ್‌ ಮಾಡಿದ್ದಾರೆ. "ಮೂಕ ಪ್ರಾಣಿಯನ್ನು ಎತ್ತುವ ಮುನ್ನ ಅದರ ಭಯವನ್ನು ಹೋಗಲಾಡಿಸಿ, ಅದನ್ನು ಪ್ರೀತಿಯಿಂದ ಸಮಾಧಾನಪಡಿಸಿದ ಆತನ ಗುಣ ನಿಜಕ್ಕೂ ಶ್ಲಾಘನೀಯ. ಹೃದಯ ತುಂಬಿಬಂತು." ಎಂದು ಇನ್ನೊರ್ವ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ.

ಒಟ್ಟಾರೆಯಾಗಿ, ಈ ವಿಡಿಯೋ ಮೂಕ ಪ್ರಾಣಿಗಳ ಮೇಲಿನ ಪ್ರೀತಿ ಹಾಗೂ ಸಂಕಷ್ಟದ ಸಮಯದಲ್ಲಿ ತೋರಬೇಕಾದ ಮಾನವೀಯ ಮೌಲ್ಯಗಳಿಗೆ ಒಂದು ಅದ್ಭುತ ಉದಾಹರಣೆಯಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+