ಗಣೇಶ ಹಬ್ಬ: ಬೆಂಗಳೂರಿನಿಂದ ಇಲ್ಲಿಗೆ ವಿಶೇಷ ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ ಹೀಗಿದೆ

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ ಪ್ರಯಾಣಿಕರ ಸಂಚಾರ ಹೆಚ್ಚಿರುತ್ತದೆ. ಈ ಕಾರಣದಿಂದ ರೈಲುಗಳಲ್ಲಿ, ನಿಲ್ದಾಣಗಳಲ್ಲಿ ಹೆಚ್ಚುವರಿ ದಟ್ಟಣೆ ನಿವಾರಣೆಗೆ, ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನೈಋತ್ಯ ರೈಲ್ವೆಯು ಕೆಎಸ್‌ಆರ್ ಬೆಂಗಳೂರಿನಿಂದ ಹಬ್ಬದ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲಿದೆ. ಈ ರೈಲುಗಳು ಎಲ್ಲಿಗೆ ಸಂಚಾರ, ದಿನಾಂಕ, ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಕೆ ಎಸ್ ಆರ್ ಬೆಂಗಳೂರು-ತಿರುನೆಲ್ವೇಲಿ ಜಂಕ್ಷನ್ ಹಾಗೂ ಬೆಂಗಳೂರು ಕಂಟೋನ್ಮೆಂಟ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿವೆ. ಈ ರೈಲುಗಳು ಸೆಪ್ಟೆಂಬರ್ 11 ಮತ್ತು 12ರಂದು ತಲಾ ಒಂದು ಟ್ರಿಪ್‌ನಂತೆ ಎರಡೂ ದಿಕ್ಕುಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ganesh Festival Special Trains

ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ಸಮಯ

* ಕೆಎಸ್‌ಆರ್ ಬೆಂಗಳೂರು-ತಿರುನೆಲ್ವೇಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06527) ನಾಳೆ ಶುಕ್ರವಾರ 2026 ಸೆಪ್ಟಂಬರ್ 11ರಂದು ಒಂದು ಟ್ರಿಪ್ ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ರಾತ್ರಿ 11:35 ಗಂಟೆಗೆ ಹೊರಡಲಿದೆ. ಶನಿವಾರ ತಿರುನೆಲ್ವೇಲಿ ಜಂಕ್ಷನ್‌ಗೆ ಮಧ್ಯಾಹ್ನ 01:15 ಗಂಟೆಗೆ ತಲುಪಲಿದೆ.

* ಮರಳಿ ಅದೇ ದಿಕ್ಕಿನಲ್ಲಿ ತಿರುನೆಲ್ವೇಲಿ-ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06528) ಶನಿವಾರ 2026 ಸೆಪ್ಟೆಂಬರ್ 12ರಂದು ಒಂದು ಟ್ರಿಪ್ ಸಂಚಾರ ಸೇವೆ ಒದಗಿಸಲಿದೆ. ತಿರುನೆಲ್ವೇಲಿ ಜಂಕ್ಷನ್ ಅನ್ನು ಮಧ್ಯಾಹ್ನ 3:45 ಗಂಟೆಗೆ ಬಿಡಲಿದೆ. ಮಾರನೇ ದಿನ ಭಾನುವಾರ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬೆಳಗಿನ ಜಾವ 03:30 ಗಂಟೆಗೆ ಆಗಮಿಸಲಿದೆ. ಈ ರೈಲು ಎರಡು ಭಾಗದ ಪ್ರಯಾಣಿಕರಿಗೆ ಹೆಚ್ಚುವರಿ ಸಾರಿಗೆ ಸೇವೆ ನೀಡಲಿದೆ.

ಮಾರ್ಗ ಮತ್ತು ರೈಲು ನಿಲುಗಡೆ ವಿವರ

ಗಣೇಶ ಹಬ್ಬದ ವಿಶೇಷ ರೈಲು ಎರಡು ದಿಕ್ಕಿನ ಸೇವೆಯಲ್ಲಿ ನಿಗದಿತ ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುದುನಗರ, ಸತ್ತೂರು ಮತ್ತು ಕೋವಿಲ್ಪಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಒಟ್ಟು 20 ಬೋಗಿಗಳ ರೈಲು

ಈ ವಿಶೇಷ ರೈಲುಗಳು ಒಟ್ಟು 20 ಕೋಚ್‌ಗಳನ್ನು ಹೊಂದಿವೆ. ಅದರಲ್ಲಿ 01 ಎಸಿ 2-ಟೈರ್ ಕೋಚ್, 03 ಎಸಿ 3-ಟೈರ್ ಕೋಚ್‌, 10 ಸ್ಲೀಪರ್ ಕ್ಲಾಸ್ ಕೋಚ್‌, 04 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ ಹಾಗೂ 02 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರುತ್ತವೆ. ಹೆಚ್ಚಿನ ಮಾಹಿತಿಗೆ

ಪ್ರಯಾಣಿಕರು ರೈಲಿನ ವೇಳಾಪಟ್ಟಿ ಹಾಗೂ ಆಸನಗಳ ಲಭ್ಯತೆಯನ್ನು NTES/IRCTC ಅಪ್ಲಿಕೇಶನ್ ಮೂಲಕ ಪರಿಶೀಲಿಸುವಂತೆ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+