ಡಿ.10ರಿಂದ ಬಸ್, ರೈಲು ಟಿಕೆಟ್ ಖರೀದಿಗೂ ಹಳೆ 500, 1000 ನಡೆಯಲ್ಲ!

ಬೆಂಗಳೂರು, ಡಿಸೆಂಬರ್ 8: ರೈಲ್ವೆ ಟಿಕೆಟ್ ಕೌಂಟರ್ ಗಳಲ್ಲಿ, ಸರಕಾರಿ ಸಾರಿಗೆ ಟಿಕೆಟ್ ಕೌಂಟರ್ ಗಳಲ್ಲಿ, ರೈಲ್ವೆಯಲ್ಲಿ ಊಟ-ತಿಂಡಿಗಳಿಗೆ, ಮೆಟ್ರೋ ರೈಲುಗಳಲ್ಲಿ ಡಿಸೆಂಬರ್ 10ರಿಂದ ಹಳೆ 500, 1000ದ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಡಿಸೆಂಬರ್ 7ರಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ.

ಈ ಎಲ್ಲ ಕಡೆಯೂ ಡಿಸೆಂಬರ್ 15ರವರೆಗೂ ಹಳೇ ನೋಟುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ ಸರಕಾರಿ ಆಸ್ಪತ್ರೆ, ಔಷಧಿ ಮಳಿಗೆಗಳು, ಗ್ರಾಹಕ ಸಹಕಾರ ಮಳಿಗೆಗಳು, ಸರಕಾರ ನಡೆಸುವ ಹಾಲಿನ ಮಾರಾಟ ಮಳಿಗೆ, ಶವಾಗಾರ ಹಾಗೂ ಸ್ಮಶಾನಗಳಲ್ಲಿ ಡಿಸೆಂಬರ್ 15ರವರೆಗೆ ಹಳೇ ನೋಟುಗಳನ್ನು ಸ್ವೀಕರಿಸುತ್ತಾರೆ.[ನೋಟ್ ನಿಷೇಧ ಎಫೆಕ್ಟ್ : ಮನೆ ಕೊಳ್ಳುವವರಿಗೆ ಆಮಿಷ]

From Dec. 10, old 500, 1,000 cannot be used to bus, rail tickets

ಇದರ ಜತೆಗೆ ಅಡುಗೆ ಅನಿಲ ಸಿಲಿಂಡರ್, ಪುರಾತತ್ವ ಇಲಾಖೆಯ ಜವಾಬ್ದಾರಿಯಲ್ಲಿರುವ ಸ್ಮಾರಕಗಳ ಟಿಕೆಟ್ ಗಳಿಗೆ, ಸರಕಾರಕ್ಕೆ ಪಾವತಿಸಬೇಕಾದ ಯಾವುದೇ ಶುಲ್ಕ, ಮೊತ್ತ, ತೆರಿಗೆ ಹಾಗೂ ದಂಡ, ಅಗತ್ಯ ಪೂರೈಕೆಗೆ ಕೊಡಬೇಕಾದ ಶುಲ್ಕ, ಸರಕಾರಿ ಮಳಿಗೆಗಳಲ್ಲಿ ಖರೀದಿಸುವ ಬೀಜಗಳು, ಸರಕಾರಿ ಶಾಲೆಗಳಿಗೆ ಕಟ್ಟುವ ಎರಡು ಸಾವಿರದೊಳಗಿನ ಶುಲ್ಕ,[ಪುತ್ತೂರಿನಲ್ಲಿ ಸಿಕ್ಕಿದ್ದು ದಾಖಲೆ ಇಲ್ಲದ 19 ಲಕ್ಷ, ಮೂವರು ಆರೋಪಿಗಳು]

ಸರಕಾರಿ ಕಾಲೇಜುಗಳಿಗೆ ಕಟ್ಟಬೇಕಾದ ಶುಲ್ಕ ಮತ್ತು ಐನೂರು ರುಪಾಯಿವರೆಗೆ ಮೊಬೈಲ್ ಪ್ರೀಪೇಡ್ ಟಾಪ್ ಅಪ್ ಗೆ ಹಳೆ ನೋಟುಗಳನ್ನು ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+