Muslim abaya dress ban: ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಅಬಯಾ ಉಡುಗೆ ನಿಷೇಧಿಸಿದ ಫ್ರಾನ್ಸ್...!
ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಅಬಯಾ ಉಡುಗೆಯನ್ನು ಫ್ರಾನ್ಸ್ ನಿಷೇಧಿಸಲು ಮುಂದಾಗಿದೆ. ರಾಜ್ಯ ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹೊಂದಿದ ಬಟ್ಟೆಯನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡಲು ಫ್ರಾನ್ಸ್ ನಿರ್ಧರಸಿದೆ.
ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಸಡಿಲವಾದ, ಪೂರ್ಣ-ಉದ್ದದ ನಿಲುವಂಗಿಯನ್ನು ಧರಿಸುವುದನ್ನು ಫ್ರಾನ್ಸ್ ನಿಷೇಧಿಸುತ್ತದೆ ಎಂದು ಅಲ್ಲಿನ ಶಿಕ್ಷಣ ಸಚಿವರು ಹೇಳಿದ್ದಾರೆ.

ಅಬಯಾ ಉಡುಪು ಫ್ರಾನ್ಸ್ ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನನ್ನು ಉಲ್ಲಂಘಿಸಿದೆ ಎಂದು ವಾದಿಸಿದ ಅವರು, ಇನ್ನು ಮುಂದೆ ಶಾಲೆಗಳಲ್ಲಿ ಅಬಯಾ ಧರಿಸಲು ಅವಕಾಶವಿರುವುದಿಲ್ಲ. ಸೆಪ್ಟೆಂಬರ್ ನಾಲ್ಕರಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವುದಕ್ಕೂ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ತರುವುದಾಗಿ ಹೇಳಿದ್ದಾರೆ.
ಫ್ರೆಂಚ್ ಶಾಲೆಗಳಲ್ಲಿ ಅಬಯಾಗಳನ್ನು ಧರಿಸುವ ಕುರಿತು ಹಲವು ತಿಂಗಳಿನಿಂದ ಚರ್ಚೆ ನಡೆದಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವದನ್ನು ಧೀರ್ಘಕಾಲದಿಂದ ಫ್ರೆಂಚ್ ಶಾಲೆಗಳಲ್ಲಿ ನಿಷೇಧಿಸಲಾಗಿದೆ. ಬಲಪಂಥೀಯರು ಅಬಯಾ ನಿಷೇಧಕ್ಕೆ ಒತ್ತಾಯಿಸಿದರೆ, ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಿದ್ದಾರೆ.
ವಿದ್ಯಾರ್ಥಿಗಳು ತರಗತಿಯಲ್ಲಿ ಧರ್ಮವನ್ನು ಗುರುತಿಸುವ ಬಟ್ಟೆಗಳನ್ನು ಹಾಕಬಾರದು. ಈ ವಿಚಾರವಾಗಿ ಶಿಕ್ಷಕರು ಮತ್ತು ಪೋಷಕರ ನಡುವೆ ಶಾಲೆಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ ಅವರ ಉಡುಪುಗಳಿಂದಾಗಿ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು. ಈ ಹಿನ್ನೆಲೆ 2004ರ ಮಾರ್ಚ್‌ನಲ್ಲಿ ಕಾನೂನು ಶಾಲೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಸಂಬಂಧಿತ ಚಿಹ್ನೆಗಳನ್ನು ತೋರ್ಪಡಿಸುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿತು.

ಶಾಲೆಗಳಲ್ಲಿ ಇನ್ನು ಮುಂದೆ ಅಬಯಾವನ್ನು ಧರಿಸಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಗೇಬ್ರಿಯಲ್ ಅಟಲ್ ಟಿವಿ ಚಾನೆಲ್ ಟಿಎಫ್ 1 ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಯಾವುದೇ ವಿದ್ಯಾರ್ಥಿ ತರಗತಿಗೆ ಕಾಲಿಟ್ಟಾಗ ಅವರ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು, ಶಾಲೆಗಳಲ್ಲಿ ಎಲ್ಲಾ ಮಕ್ಕಳು ಒಂದೇ ಒಂದೇ ರೀತಿಯ ಸಮವಸ್ಸತ್ರವನ್ನು ಅದೇ ಉದ್ದೇಶಗಳಿಗೆ ಮಾಡಲಾಗಿದೆ ಎಂದು ಹೇಳಿದರು.












Click it and Unblock the Notifications