ಸ್ಪೋಟಕ ಬ್ಯಾಟ್ಸ್ ಮ್ಯಾನ್ ಗೆ ಮನೆಯಲ್ಲೇ ಮದುವೆ ಮಾಡಿಸಿದ್ದ ಜೇಟ್ಲಿ
ನವದೆಹಲಿ, ಆ 25: ಶನಿವಾರ ವಿಧಿವಶರಾದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಅಂತಿಮ ಸಂಸ್ಕಾರ, ಇಂದು (ಆ 25) ನವದೆಹಲಿಯ ನಿಗಂಬೋಧ್ ಘಾಟ್ ನಲ್ಲಿ ನಡೆಯಲಿದೆ.
ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು
ಕುತೂಹಲಕಾರಿ ಅಂಶವೇನಂದರೆ, ಬಿಸಿಸಿಐ ಉಪಾಧ್ಯಕ್ಷ ಮತ್ತು ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಜೇಟ್ಲಿ, ಭಾರತೀಯ ಕ್ರಿಕೆಟ್ ಕಂಡ ಸ್ಪೋಟಕ ಆರಂಭಿಕ ಆಟಗಾರರೊಬ್ಬರಿಗೆ ತಮ್ಮ ನಿವಾಸದಲ್ಲೇ ಮದುವೆ ಮಾಡಿಸಿದ್ದರು.
Recommended Video
2004ರಲ್ಲಿ ಜೇಟ್ಲಿ, ವಿರೇಂದ್ರ ಸೆಹ್ವಾಗ್ ಅವರ ಮದುವೆಯನ್ನು ತಮ್ಮ ನಿವಾಸದಲ್ಲೇ ನಡೆಸಿದ್ದರು. ಆರತಿಯೊಂದಿಗೆ ಸೆಹ್ವಾಗ್ ಅವರ ವಿವಾಹ ಜೇಟ್ಲಿ ಅಧಿಕೃತ ಬಂಗಲೆ, 9 ಅಶೋಕ ರಸ್ತೆಯಲ್ಲಿ ನಡೆದಿತ್ತು. ಸೆಹ್ವಾಗ್ ಮದುವೆಯನ್ನು ತಮ್ಮ ಮನೆಯಲ್ಲೇ ನಡೆಸಬೇಕೆಂದು ಸೆಹ್ವಾಗ್ ತಂದೆಗೆ ಜೇಟ್ಲಿ ಸೂಚಿಸಿದ್ದರಿಂದ ಅವರ ಮದುವೆ ಅಲ್ಲಿ ನಡೆಯಿತು.

ಸೆಹ್ವಾಗ್ ಅವರ ಮದುವೆಗೆ ತನ್ನ ಬಂಗಲೆಯನ್ನು ಸಜ್ಜುಗೊಳಿಸಿ, ಅತಿಥಿಗಳಿಗಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದರೂ, ಜೇಟ್ಲಿ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ಮದುವೆಗೆ ಹಾಜರಾಗಿರಲಿಲ್ಲ.
ಕ್ರೀಡಾಲೋಕದ, ಬಾಲಿವುಡ್ ಮತ್ತು ರಾಜಕೀಯ ವಲಯದ ಅನೇಕ ಗಣ್ಯರು ಮದುವೆಗೆ ಹಾಜರಾಗಿದ್ದರು. ಬಿಗಿ ಭದ್ರತೆಯಿಂದಾಗಿ ಅತಿಥಿಗಳು ಸ್ಥಳಕ್ಕೆ ಪ್ರವೇಶಿಸಲು ತಮ್ಮ ಆಮಂತ್ರಣ ಪತ್ರವನ್ನು ತರುವುದನ್ನು ಕಡ್ಡಾಯ ಮಾಡಲಾಗಿತ್ತು.
ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ ಭಾರತೀಯ ಕ್ರೀಡಾ ಲೋಕ
"ವೈಯಕ್ತಿಕವಾಗಿ ಜೇಟ್ಲಿ ಅವರೊಂದಿಗೆ ನನ್ನದು ಬಹಳ ಸುಂದರವಾದ ಸಂಬಂಧ. ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅವರ ಪ್ರೀತಿಪಾತ್ರರ ಜೊತೆ ಇವೆ. ಓಂ ಶಾಂತಿ "ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications