ದೇವೇಗೌಡರ ಕನಸು ನನಸು, ಮೇಟ್ರೋದಲ್ಲಿ ಪ್ರಯಾಣ!

ಬೆಂಗಳೂರು, ಆಗಸ್ಟ್ 04: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹಲವು ವರ್ಷಗಳ ಕನಸು ಇಂದು ನನಸಾಗಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಎಚ್. ಡಿ. ದೇವೇಗೌಡರು ಭಾನುವಾರ ದೆಹಲಿ ಮೆಟ್ರೋದಲ್ಲಿ ಸಂಚಾರವನ್ನು ನಡೆಸಿದರು. "ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಸಂಚಾರ ನಡೆಸಬೇಕು ಎಂಬುದು ನನ್ನ ಕನಸಾಗಿತ್ತು. ಅದು ಇಂದು ಪೂರ್ಣವಾಯಿತು" ಎಂದು ದೇವೇಗೌಡರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Former PM HD Deve Gowda Fulfilled Dream By Travel By Delhi Metro

ದೇವೇಗೌಡರು ಲೋಕ ಕಲ್ಯಾಣ್ ಮಾರ್ಗ ನಿಲ್ದಾಣದಿಂದ ಮೆಟ್ರೋದಲ್ಲಿ ಸಂಚಾರ ನಡೆಸಿದರು. ದೆಹಲಿ ಮೆಟ್ರೋದ ಅಧಿಕಾರಿಗಳು, ಮೂಲ ಸೌಕರ್ಯ ವಿಭಾಗದ ನಿರ್ದೇಶಕ ಮನೋಜ್ ಸಿಂಘಲ್ ಮತ್ತು ಇತರ ಸಿಬ್ಬಂದಿ ದೇವೇಗೌಡರ ಜೊತೆ ಪ್ರಯಾಣಿಸಿದರು.

ಎಚ್‌. ಡಿ. ದೇವೇಗೌಡರ ಜೊತೆ ಪುತ್ರಿ ಅನಸೂಯ ಮಂಜುನಾಥ್ ಸಹ ಪ್ರಯಾಣಿಸಿದರು. ಮೆಟ್ರೋ ಪ್ರಯಾಣದ ಬಳಿಕ ದೇವೇಗೌಡರು ದೆಹಲಿ ಮೆಟ್ರೋದ ಅಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಟ್ವೀಟ್ ಮಾಡಿದ್ದಾರೆ.

ಯೋಜನೆಗೆ ಚಾಲನೆ: ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಟ್ವೀಟ್‌ನಲ್ಲಿ, "ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು, ಅದು ಇಂದು ನೆರವೇರಿತು. ನಾನು 1996ರಲ್ಲಿ ಪ್ರಧಾನ ಮಂತ್ರಿಯಾಗಿದ್ದಾಗ ನನ್ನ ಸಂಪುಟ ಮತ್ತು ಹೊರಗಿನ ಪ್ರತಿರೋಧದ ನಡುವೆಯೂ ಯೋಜನೆಗೆ ಆರ್ಥಿಕ ಸಹಕಾರ ನೀಡಿದ್ದೆ. ಆಗ ನನಗೆ ಇಂತಹ ನಿರ್ಧಾರ ಕೈಗೊಳ್ಳಲು ಧೈರ್ಯ ನೀಡಿದ್ದಕ್ಕೆ ದೇವರಿಗೆ ಋಣಿಯಾಗಿದ್ದೇನೆ, ಇದರಿಂದ ಜನರಿಗೆ ಸಹಾಯವಾಗಿದೆ" ಎಂದು ಹೇಳಿದ್ದಾರೆ.

ಮೆಟ್ರೋದಲ್ಲಿ ಸಂಚಾರ ನಡೆಸಿದ ಬಳಿಕ ಎಎನ್‌ಐ ಜೊತೆ ಮಾತನಾಡಿದ ದೇವೇಗೌಡರು, "ಇಂದು ನಾನು ದೆಹಲಿ ಮೆಟ್ರೋದಲ್ಲಿ ಸಂಚಾರ ನಡೆಸಿದೆ. ನನ್ನ ಸಹೋದರ, ಸಹೋದರಿಯರಿಗೆ ಸೇವೆ ಹೇಗೆ ಲಭ್ಯವಾಗುತ್ತಿದೆ ಎಂಬುದನ್ನು ತಿಳಿದೆ. ನನ್ನ ಜೊತೆ ಪ್ರಯಾಣ ಮಾಡಿದ್ದಕ್ಕೆ ಅಧಿಕಾರಿ, ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದರು.

ದೇವೇಗೌಡರು 1996ರ ಜೂನ್‌ 1 ರಿಂದ 1997ರ ಮಾರ್ಚ್ 24ರ ತನಕ ದೇಶದ ಪ್ರಧಾನಿಯಾಗಿದ್ದರು. ಆಗ ದೆಹಲಿಯ ಲೆಫ್ಟಿನೆಂಟ್ ಗೌರ್ನರ್, ದೆಹಲಿ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ನೆರವಿನಲ್ಲಿ ದೆಹಲಿ ಮೆಟ್ರೋ ಯೋಜನೆಗೆ ಚಾಲನೆ ನೀಡಿದ್ದರು. ಈಗ ದೆಹಲಿ ಮೆಟ್ರೋದಲ್ಲಿ ಪ್ರತಿದಿನ ಸುಮಾರು 65 ಲಕ್ಷ ಜನರು ಸಂಚಾರ ನಡೆಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೆರವಿನಿಂದ ದೆಹಲಿ ಮೆಟ್ರೋ ಮಾರ್ಗವು ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ ಮೆಟ್ರೋ ಯೋಜನೆಯ ಮೊದಲ ಹಂತ ಸುಮಾರು 53 ಕಿ. ಮೀ. ಮಾರ್ಗವನ್ನು ಒಳಗೊಂಡಿತ್ತು. ಆಗ ಡಿಪಿಆರ್ ತಯಾರು ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ದೆಹಲಿಯ ಮುಖ್ಯ ಕಾರ್ಯದರ್ಶಿಗಳು ಯೋಜನೆ ಬೆಂಬಲಿಸಿದ್ದರು. ಕೇಂದ್ರ ಸರ್ಕಾರ ಆಗ ಯೋಜನೆಗೆ ಒಪ್ಪಿಗೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+