• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೇಟ್ಲಿ ಕೊನೆಯ ಬಾರಿ ಮೋದಿ, ಶಾನ್ನು ಬಾಯಿತುಂಬ ಹೊಗಳಿದ್ದು ಹೀಗೆ!

|
   ಮೋದಿ ಮತ್ತು ಅಮಿತ್ ಶಾ ರನ್ನು ಕೊನೆಯ ಬಾರಿ ಹೊಗಳಿದ್ದ ಅರುಣ್ ಜೇಟ್ಲಿ..? | Arun Jaitley

   ನವದೆಹಲಿ, ಆ 24: ಮಾಜಿ ಹಣಕಾಸು ಸಚಿವ, ಹಿರಿಯ ಬಿಜೆಪಿ ಮುಖಂಡ ಅರುಣ್ ಜೇಟ್ಲಿ (66) ಶನಿವಾರ ನಿಧನ ಹೊಂದಿದ್ದಾರೆ. ಅವರು ಕಿಡ್ನಿ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

   ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು

   ಅನಾರೋಗ್ಯದ ಕಾರಣದಿಂದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದ ಅರುಣ್ ಜೇಟ್ಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆದ ಮೋದಿ ಸರಕಾರದ ನಿರ್ಧಾರವನ್ನು ಮನಃತುಂಬ ಹೊಗಳಿದ್ದರು.

   ಎನ್ದಿಎ ಸರಕಾರದ ''ಕ್ರಾಂತಿಕಾರಿ ನಿರ್ಧಾರ" ಎಂದು ಆರ್ಟಿಕಲ್ 370ರದ್ದತಿಯನ್ನು ಹೊಗಳಿದ್ದ ಅರುಣ್ ಜೇಟ್ಲಿ, ಇದರಿಂದ, ಕಾಶ್ಮೀರದ ಜನತೆಗಾಗುವ ಲಾಭವೇನು ಎನ್ನುವುದನ್ನೂ ವಿವರಿಸಿದ್ದರು.

   Breaking News ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ

   "ಆರ್ಟಿಕಲ್ 370ಕ್ಕೆ ಸಂಬಂಧ ಪಟ್ಟಂತೆ ಸರ್ಕಾರದ ನಿರ್ಧಾರವು ರಾಷ್ಟ್ರೀಯ ಏಕೀಕರಣದ ವಿಚಾರದಲ್ಲಿನ ಒಂದು ಮಹತ್ವದ ನಿರ್ಧಾರವಾಗಿದೆ" ಎಂದು ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದರು. ಅವರ ಕೆಲವೊಂದು ಟ್ವೀಟ್ ಹೀಗಿದೆ:

   ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನನ್ನ ನಮನಗಳು

   ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನನ್ನ ನಮನಗಳು

   "ಹಿಂದಿನ ಪ್ರಮಾದವನ್ನು ಸರಿಪಡಿಸಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ನನ್ನ ನಮನಗಳು. ಕಾಶ್ಮೀರದ ನಿರ್ಧಾರದಿಂದ, ಮೋದಿ ಮತ್ತು ಅಮಿತ್ ಶಾ ಅವರು ಇತಿಹಾಸದಲ್ಲಿ ಸ್ಥಾನ ಗಳಿಸಿದ್ದಾರೆ. ಅವರು ಇಂದು ತೋರಿಸಿರುವ ಸ್ಪಷ್ಟತೆ ಮತ್ತು ಧೃಡತೆ ‘ಮೋದಿ ಹೈ ತೋಹ್ ಮುಮ್ಕಿನ್ ಹೈ' ಎನ್ನುವ ಮಾತನ್ನು ಸಾಬೀತು ಪಡಿಸಿದೆ.

   ಒಂದು ಐತಿಹಾಸಿಕ ತಪ್ಪನ್ನು ಇಂದು ರದ್ದುಗೊಳಿಸಲಾಗಿದೆ

   ಒಂದು ಐತಿಹಾಸಿಕ ತಪ್ಪನ್ನು ಇಂದು ರದ್ದುಗೊಳಿಸಲಾಗಿದೆ

   "ಒಂದು ಐತಿಹಾಸಿಕ ತಪ್ಪನ್ನು ಇಂದು ರದ್ದುಗೊಳಿಸಲಾಗಿದೆ. ಆರ್ಟಿಕಲ್ 35ಎ ಭಾರತದ ಸಂವಿಧಾನದ 368ನೇ ವಿಧಿ ಅನ್ವಯ ಯಾವುದೇ ಪೂರ್ವ ನಿಯಮವನ್ನು ಅನುಸರಿಸದೇ ಹಿಂಬಾಗಿಲಿನ ಮೂಲಕ ಜಾರಿಗೆ ಬಂದಿತ್ತು. ಅದು ಹೋಗಲೇ ಬೇಕಾಗಿತ್ತು, ಹೋಗಿದೆ" - ಜೇಟ್ಲಿ.

   ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದ ಜೇಟ್ಲಿ ಎಂಬ ಟ್ರಬಲ್ ಶೂಟರ್

   ಹೆಚ್ಚಿನ ಉದ್ಯೋಗಗಳು ಮತ್ತು ಹೆಚ್ಚಿನ ಆದಾಯ ಹರಿದು ಬರಲಿದೆ

   ಹೆಚ್ಚಿನ ಉದ್ಯೋಗಗಳು ಮತ್ತು ಹೆಚ್ಚಿನ ಆದಾಯ ಹರಿದು ಬರಲಿದೆ

   "ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ನಿರ್ಧಾರವು ಆ ಭಾಗದ ಜನರಿಗೆ ಹೆಚ್ಚು ಸಹಾಯವನ್ನು ಮಾಡಲಿದೆ. ಇದರಿಂದ, ಹೆಚ್ಚಿನ ಹೂಡಿಕೆ, ಹೆಚ್ಚಿನ ಉದ್ಯಮ, ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು, ಹೆಚ್ಚಿನ ಉದ್ಯೋಗಗಳು ಮತ್ತು ಹೆಚ್ಚಿನ ಆದಾಯ ಹರಿದು ಬರಲಿದೆ" ಎಂದು ಜೇಟ್ಲಿ ಟ್ವೀಟ್ ಮಾಡಿದ್ದರು.

   ಸೆಂಟಿಮೆಂಟ್ ವರ್ಸಸ್ ಬೆನಿಫಿಟ್

   ಸೆಂಟಿಮೆಂಟ್ ವರ್ಸಸ್ ಬೆನಿಫಿಟ್

   "ಆರ್ಟಿಕಲ್ 370 ಮತ್ತು ಆರ್ಟಿಕಲ್ 35ಎ ರದ್ದತಿ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಅಲ್ಲಿನ ಸ್ಥಳೀಯ ನಾಯಕರಿಗೆ, ‘ಸೆಂಟಿಮೆಂಟ್ ವರ್ಸಸ್ ಬೆನಿಫಿಟ್' ಎಂಬ ನಕಲಿ ಸಮಸ್ಯೆಯ ಮೂಲಕ, ಅಲ್ಲಿನ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ" - ಜೇಟ್ಲಿ.

   ಜಮ್ಮು ಕಾಶ್ಮೀರ ಏಕೀಕರಣ

   ಜಮ್ಮು ಕಾಶ್ಮೀರ ಏಕೀಕರಣ

   "ಭಾರತದೊಂದಿಗೆ ಜಮ್ಮು ಕಾಶ್ಮೀರ ಏಕೀಕರಣ ಅಕ್ಟೋಬರ್ 1947ರಲ್ಲಿ ನಡೆಯಿತು. ಆರ್ಟಿಕಲ್ 370, 1952ರಲ್ಲಿ ಜಾರಿಗೆ ಬಂದಿತು, ಆರ್ಟಿಕಲ್ 35ಎ 1954ರಲ್ಲಿ ಬಂದಿತು, ತಾತ್ಕಾಲಿಕ ನಿಬಂಧನೆಯನ್ನು ಶಾಶ್ವತವೆಂದು ಪರಿಗಣಿಸಲಾಗುವುದಿಲ್ಲ" - ಜೇಟ್ಲಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Former Finance Minister Arun Jaitley Hearful Appreciation To PM Modi And Union Home MInister Amit Shah On Article 370, 35A.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more