ಶ್ರೀಮಂತ ವ್ಯಕ್ತಿ ಪಟ್ಟಿಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡ ಮುಕೇಶ್ ಅಂಬಾನಿ

Recommended Video

      Forbes India rich list : Mukesh Ambani again richest man in india | Oneindia Kannada

      ನವದೆಹಲಿ, ಅಕ್ಟೋಬರ್ 06: ಫೋಬ್ಸ್ ನಿಯತ ಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ 10ನೇ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುರೆದಿದ್ದಾರೆ.

      ಅಂಬಾನಿ ಒಟ್ಟು 2.5 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಕಳೆದ ಇದೇ ಫೋಬ್ಸ್ ಪಟ್ಟಿಯಲ್ಲಿ ದೇಶದ 5ನೇ ಶ್ರೀಮಂತ ವ್ಯಕ್ತಿಯಾಗಿದ್ದ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರು 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

      ಈ ವರ್ಷ ನಮ್ಮ ದೇಶದಲ್ಲಿ ಆರ್ಥಿಕ ಕುಸಿತವಿದ್ದರೂ ಸಹ 100 ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ ಶೇಕಡಾ 26ರಷ್ಟು ಏರಿಕೆಯಾಗಿದ್ದು, ವಿಪ್ರೊದ ಅಜೀಂ ಪ್ರೇಮ್ ಜಿ ಅವರ 1.21 ಲಕ್ಷ ಕೋಟಿ ಸಂಪತ್ತಿನ ಒಡೆಯನಾಗಿ ಎರಡನೇ ಸ್ಥಾನದಲ್ಲಿದ್ದಾರೆ.

      ಪ್ರಧಾನ ಮಂತ್ರಿಯವರ ಆರ್ಥಿಕ ಪ್ರಯೋಗಗಳನ್ನು ಭಾರತದ ಕೋಟಿದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಕೇಶ್ ಅಂಬಾನಿಯವರು ಏಷ್ಯಾ ಖಂಡದಲ್ಲಿ ಟಾಪ್ 5 ಶ್ರೀಮಂತರ ಪೈಕಿ ಒಬ್ಬರಾಗಿದ್ದಾರೆ.

      ದೇಶದ ಟಾಪ್ 5 ಶ್ರಿಮಂತ ವ್ಯಕ್ತಿಗಳು

      1. ಮುಕೇಶ್ ಅಂಬಾನಿ

      1. ಮುಕೇಶ್ ಅಂಬಾನಿ

      ಫೋಬ್ಸ್ ನಿಯತ ಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ 10ನೇ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುರೆದಿದ್ದಾರೆ.

      2. ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್ ಜಿ

      2. ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್ ಜಿ

      ಕಳೆದ ಇದೇ ಫೋಬ್ಸ್ ಪಟ್ಟಿಯಲ್ಲಿ ದೇಶದ 5ನೇ ಶ್ರೀಮಂತ ವ್ಯಕ್ತಿಯಾಗಿದ್ದ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರು 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪ್ರೇಮ್ ಜಿ ಅವರ 1.21 ಲಕ್ಷ ಕೋಟಿ ಸಂಪತ್ತಿನ ಒಡೆಯನಾಗಿ ಎರಡನೇ ಸ್ಥಾನದಲ್ಲಿದ್ದಾರೆ.

      3. ಹಿಂದುಜಾ ಸಹೋದರರು

      3. ಹಿಂದುಜಾ ಸಹೋದರರು

      ಅಶೋಕ್ ಲೇಲ್ಯಾಂಡ್ ನ ಹಿಂದುಜಾ ಸಹೋದರರಾದ ಜಿ.ಪಿ. ಹಿಂದುಜಾ ಹಾಗೂ ಅಶೋಕ್ ಹಿಂದುಜಾ ಒಟ್ಟು 1.15 ಲಕ್ಷ ಕೋಟಿ ಆಸ್ತಿ ಮೌಲ್ಯವನ್ನು ಹೊಂದಿ 3ನೇ ಸ್ಥಾನದಲ್ಲಿದ್ದಾರೆ.

       4. ಲಕ್ಷ್ಮೀ ಮಿತ್ತಲ್

      4. ಲಕ್ಷ್ಮೀ ಮಿತ್ತಲ್

      ಭಾರತದ ಪ್ರಮುಖ ಉದ್ಯಮಿ ಲಕ್ಷ್ಮೀ ಮಿತ್ತಲ್ $16.5 ಬಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

       5. ಪಲ್ಲೊಂಜಿ ಮಿಸ್ತ್ರಿ

      5. ಪಲ್ಲೊಂಜಿ ಮಿಸ್ತ್ರಿ

      ಪಲ್ಲೊಂಜಿ ಮಿಸ್ತ್ರಿ ಅವರು $16 ಬಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಅವರು ದೇಶದ ಶ್ರೀಮಂತರ ಪಟ್ಟಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+