ಅಮೆರಿಕ, ಬ್ರೆಜಿಲ್ ಹಿಂದಿಕ್ಕಿದ ಭಾರತ: ಹೆಚ್ಚು ಕೇಸ್, ಹೆಚ್ಚು ಸಾವು ಭಾರತದಲ್ಲೇ!

ದೆಹಲಿ, ಆಗಸ್ಟ್ 03: ಭಾರತದಲ್ಲಿ ಕೊರೊನಾ ವೈರಸ್ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೆ ಇದೆ. ಜಗತ್ತಿನಲ್ಲಿ ಅತಿ ಹೆಚ್ಚುಕೊರೊನಾ ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಇದೀಗ, ಅಮೆರಿಕ ಮತ್ತು ಬ್ರೆಜಿಲ್ ದೇಶಗಳನ್ನು ಹಿಂದಿಕ್ಕಿದೆ.

Recommended Video

      ಗೃಹ ಮಂತ್ರಿಗೆ ಕೊರೋನ, ಯಾರನ್ನು ಬಿಡದ ಕೋರೋನ.!! | Oneindia Kannada

      ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಅಮೆರಿಕ ಮತ್ತು ಬ್ರೆಜಿಲ್ ದೇಶಗಳನ್ನು ಹಿಂದಿಕ್ಕಿದೆ. ಭಾನುವಾರದ ವರದಿ ಬಳಿಕ ಕೊರೊನಾ ಪಟ್ಟಿಯಲ್ಲಿ ಈ ಬದಲಾವಣೆಯಾಗಿದೆ.

      ಭಾರತಕ್ಕಿಂತ ಅಮೆರಿಕ ಮತ್ತು ಬ್ರೆಜಿಲ್ ದೇಶಗಳು ಭಾರಿ ಮುಂದಿದೆ. ಪ್ರತಿದಿನದ ಪ್ರಕರಣಗಳಲ್ಲೂ ಭಾರಿ ವ್ಯತ್ಯಾಸವಿತ್ತು. ಆದರೂ, ಭಾನುವಾರ ಈ ಎರಡು ದೇಶಕ್ಕಿಂತ ಹೆಚ್ಚು ಕೇಸ್ ಭಾರತದಲ್ಲಿ ಪತ್ತೆಯಾಗಿದೆ. ಯಾವ ದೇಶದಲ್ಲಿ ಎಷ್ಟು ಕೇಸ್? ಮುಂದೆ ಓದಿ...

      ಭಾರತದಲ್ಲಿ ಭಾನುವಾರ ಎಷ್ಟು ಕೇಸ್?

      ಭಾರತದಲ್ಲಿ ಭಾನುವಾರ ಎಷ್ಟು ಕೇಸ್?

      ಆಗಸ್ಟ್ 2 ರಂದು ಭಾರತದಲ್ಲಿ 52,972 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 18 ಲಕ್ಷ ದಾಟಿದೆ. ಕಳೆದ 24 ಗಂಟೆಯಲ್ಲಿ 771 ಜನರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

      ಅಮೆರಿಕ ಹಿಂದಿಕ್ಕಿದ ಭಾರತ!

      ಅಮೆರಿಕ ಹಿಂದಿಕ್ಕಿದ ಭಾರತ!

      ಭಾನುವಾರ ಅಮೆರಿಕದಲ್ಲಿ 49,038 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ ಭಾನುವಾರ ಭಾರತಕ್ಕಿಂತ ಯುಎಸ್‌ನಲ್ಲಿ ಕಡಿಮೆ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲೂ ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚು. ಭಾನುವಾರ ಇಂಡಿಯಾದಲ್ಲಿ 771 ಸಾವು ವರದಿಯಾಗಿದ್ದರೆ, ಬ್ರೆಜಿಲ್‌ನಲ್ಲಿ 467 ಜನರು ಪ್ರಾಣ ಕಳೆದುಕೊಂಡಿದ್ದಾರೆ.

      ಬ್ರೆಜಿಲ್‌ಗಿಂತೂ ಭಾರತದಲ್ಲಿ ಹೆಚ್ಚು ಸಾವು

      ಬ್ರೆಜಿಲ್‌ಗಿಂತೂ ಭಾರತದಲ್ಲಿ ಹೆಚ್ಚು ಸಾವು

      ಅಮೆರಿಕ ನಂತರ ಹೆಚ್ಚು ಕೊವಿಡ್ ಕೇಸ್ ಹೊಂದಿರುವ ಬ್ರೆಜಿಲ್ ದೇಶಕ್ಕಿಂತ ಭಾರತದಲ್ಲಿ ಭಾನುವಾರ ಹೆಚ್ಚು ಸೋಂಕಿತರು ವರದಿಯಾಗಿದ್ದಾರೆ. ಆಗಸ್ಟ್ 2ರಂದು ಬ್ರೆಜಿಲ್‌ನಲ್ಲಿ 24,081 ಪ್ರಕರಣ ಮಾತ್ರ ದಾಖಲಾಗಿದೆ. 514 ಮಂದಿ ಕೊವಿಡ್‌ಗೆ ಬಲಿಯಾಗಿದ್ದಾರೆ.

      ವಿಶ್ವದ ಕೊರೊನಾ ಹಾಟ್‌ಸ್ಪಾಟ್ ಭಾರತ

      ವಿಶ್ವದ ಕೊರೊನಾ ಹಾಟ್‌ಸ್ಪಾಟ್ ಭಾರತ

      ಒಟ್ಟಾರೆ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿದೆ. ಆದರೆ, ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ತಲುಪಿದೆ. ನೂತನ ಕೇಸ್‌ ಮಾತ್ರವಲ್ಲ, ಹೊಸ ಸಾವಿನ ಪಟ್ಟಿಯಲ್ಲೂ ಭಾರತ ಮೇಲಕ್ಕೆ ಏರಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+