ಕೇರಳದಲ್ಲಿ ಪುನರ್ವಸತಿಗೆ ಕೋಟ್ಯಾಂತರ ರೂಪಾಯಿ ನೀಡಿದ ಬಿಜೆಪಿ ಸರಕಾರಗಳು
ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಹೆಚ್ಚಿನ ರಾಜ್ಯಗಳು, ಕೇರಳದ ಪ್ರವಾಹ ಸಂತ್ರಸ್ತರು ಮತ್ತು ಪುನರ್ವಸತಿಗಾಗಿ, ಕೋಟ್ಯಾಂತರ ರೂಪಾಯಿಯ ಪರಿಹಾರದ ಮೊತ್ತವನ್ನು ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಟ್ಟಿದೆ.
ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ 19,512 ಕೋಟಿ ರೂಪಾಯಿ ನಷ್ಟವಾಗಿದ್ದು, ಎಲ್ಲರೂ ಉದಾರದಿಂದ ರಾಜ್ಯದ ಈ ಕಷ್ಟದ ಸಮಯದಲ್ಲಿ ಸಹಾಯ ಮಾಡಬೇಕೆಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದರು. ತುರ್ತು ಅವಶ್ಯಕತೆಗಾಗಿ ನೂರು ಕೋಟಿ ರೂಪಾಯಿ ನಂತರ ಐನೂರು ಕೋಟಿ ರೂಪಾಯಿ ಪರಿಹಾರವನ್ನು ಕೇಂದ್ರ ಸರಕಾರ ನೀಡಿತ್ತು.
ಇದಲ್ಲದೇ, ಮೃತಪಟ್ಟ ಕುಟುಂಬಗಳಿಗೆ ಎರಡು ಲಕ್ಷ ಮತ್ತು ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿ ಪರಿಹಾರದ ಮೊತ್ತವನ್ನು ಪ್ರಧಾನಿ ಘೋಷಿಸಿದ್ದರು. ಮಾನವೀಯತೆಗೆ ಬೆಲೆಕೊಡದೇ, ಕೇರಳದ ಇಂತಹ ಸಂಕಷ್ಟದ ವೇಳೆಯೂ ದೇಣಿಗೆ ನೀಡದೇ ಬಿಜೆಪಿ ರಾಜಕೀಯ ಮಾಡುತ್ತಿದೆ ಎನ್ನುವ ಸುಳ್ಳು ಸಂದೇಶಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಇದುವರೆಗೆ, ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಿಜೆಪಿ ಮತ್ತು ಇತರ ರಾಜ್ಯಗಳಿಂದ ಬಂದ , ಪರಿಹಾರದ ಮೊತ್ತ ಈ ರೀತಿಯಿದೆ:
| ಮಹಾರಾಷ್ಟ್ರ | 20 ಕೋಟಿ |
| ಉತ್ತರಪ್ರದೇಶ | 15 ಕೋಟಿ |
| ಗುಜರಾತ್ | 10 ಕೋಟಿ |
| ಹರ್ಯಾಣ | 10 ಕೋಟಿ |
| ಛತ್ತೀಸಗಢ | 3 ಕೋಟಿ |
| ಬಿಹಾರ | 10 ಕೋಟಿ |
| ಮಧ್ಯಪ್ರದೇಶ | 10 ಕೋಟಿ |
| ರಾಜಸ್ಥಾನ | 10 ಕೋಟಿ |
| ಉತ್ತರಾಖಂಡ | 5 ಕೋಟಿ |
| ಜಾರ್ಖಂಡ | 5 ಕೋಟಿ |
| ಮಣಿಪುರ | 2 ಕೋಟಿ |
| ಹಿಮಾಚಲ ಪ್ರದೇಶ | 5 ಕೋಟಿ |
| ತೆಲಂಗಾಣ | 25 ಕೋಟಿ |
| ಕರ್ನಾಟಕ | 10 ಕೋಟಿ |
| ದೆಹಲಿ | 10 ಕೋಟಿ |
| ಒರಿಸ್ಸಾ | 10 ಕೋಟಿ |
| ತಮಿಳುನಾಡು | 10 ಕೋಟಿ |
| ಆಂಧ್ರಪ್ರದೇಶ | 10 ಕೋಟಿ |
| ಪುದುಚೇರಿ | 1 ಕೋಟಿ |
| ಪಂಜಾಬ್ | 10 ಕೋಟಿ |












Click it and Unblock the Notifications