ನಮ್ಮೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಐದು ರಾಷ್ಟ್ರಗಳಿವು

ನವದೆಹಲಿ, ಆಗಸ್ಟ್ 14: ಭಾರತವು ಈ ಆಗಸ್ಟ್ 15 ರಂದು 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. ಈ ಬಾರಿ ದೇಶದ ಹಲವೆಡೆ ಪ್ರವಾಹ ಇರುವ ಕಾರಣ ಸರಣ ಸ್ವಾತಂತ್ರ್ಯ ದಿನಾಚರಣೆಗೆ ಕರೆ ನೀಡಲಾಗಿದೆ.

ಆದರೆ ಭಾರತವು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುವ ಆಗಸ್ಟ್ 15ರಂದೇ ವಿಶ್ವದ ಇನ್ನೂ ಐದು ರಾಷ್ಟ್ರಗಳು ಸ್ವಾತಂತ್ರ್ಯ ದಿನಾಚರಣೆ ಮಾಡುತ್ತವೆ.

ಉತ್ತರ ಮತ್ತು ದಕ್ಷಿಣ ಕೊರಿಯಾ, ಕಾಂಗೊ, ಬಹ್ರೇನ್, ಲಿಶ್ಟಿನ್‌ಸ್ಟೈನ್ ದೇಶಗಳೂ ಸಹ ಆಗಸ್ಟ್ 15 ರಂದೇ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತವೆ. ಆದರೆ ಈ ದೇಶಗಳು ಸ್ವಾತಂತ್ರ್ಯಗೊಂಡ ಬಗೆ ನಮ್ಮ ದೇಶಕ್ಕಿಂತಲೂ ಭಿನ್ನ.

Five other countries celebrating Independence day along with India

ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಆಗಸ್ಟ್ 15 ಅನ್ನು ನ್ಯಾಷನಲ್ ಲಿಬರಲ್ ಡೇ ಆಫ್ ಕೊರಿಯಾ ಎಂದು ಆಚರಣೆ ಮಾಡುತ್ತವೆ. ಅಮೆರಿಕ ಮತ್ತು ಸೋವಿಯತ್ ಪಡೆಯುವ ಕೊರಿಯಾದ ಮೇಲೆ ಹಿಡಿತ ಸಾಧಿಸಿದ್ದ ಜಪಾನ್ ಪಡೆಯನ್ನು 1945, ಆಗಸ್ಟ್ 15 ರಂದು ಹೊಡೆದೋಡಿಸಿದ ನೆನಪಿಗಾಗಿ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆ ಆಗಿ ಆಚರಿಸಲಾಗುತ್ತದೆ.

ಬಹ್ರೇನ್ ದೇಶವು ಸಹ ಭಾರತದಂತೆ ಬ್ರಿಟೀಷರ ಆಳ್ವಿಕೆಯಲ್ಲಿತ್ತು. 1971 ರ ಆಗಸ್ಟ್ 15 ರಂದು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ ಬಹ್ರೇನ್ ದೇಶ ಸ್ವಾತಂತ್ರ್ಯವಾಯಿತು.

ವಿಶ್ವದ ಆರನೇ ಅತಿ ಸಣ್ಣ ದೇಶ ಲಿಶ್ಟಿನ್‌ಸ್ಟೈನ್ 1866 ರ ಆಗಸ್ಟ್ 15 ರಂದು ಸ್ವಾತಂತ್ರ್ಯವಾಯಿತು. ಜರ್ಮನ್ ಆಳ್ವಿಕೆಯಲ್ಲಿದ್ದ ಲಿಶ್ಟಿನ್‌ಸ್ಟೈನ್ ದೇಶದ ಜನ ಆಗಲೇ ರಾಜರೊಂದಿಗೆ ಸಂಧಾನ ಮಾತುಕತೆ ಮಾಡಿಕೊಂಡು ಜರ್ಮನ್ ಆಡಳಿತದಿಂದ ಬಿಡುಗಡೆ ಪಡೆದುಕೊಂಡಿದ್ದರು.

ರಿಪಬ್ಲಿಕ್ ಆಫ್ ಕಾಂಗೊ ದೇಶವು 1960 ರ ಆಗಸ್ಟ್ 15 ರಂದು ಸ್ವಾತಂತ್ರ್ಯವಾಯಿತು. ಈ ದಿನವನ್ನು ಅಲ್ಲಿ ರಾಷ್ಟ್ರೀಯ ಕಾಂಗೊಲ್ಸಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಫ್ರಾನ್ಸ್‌ನ ಅಧೀನದಲ್ಲಿ 80 ವರ್ಷ ಇದ್ದ ಕಾಂಗೊವು ಆಗಸ್ಟ್ 15 ರ 1960 ರಂದು ಫ್ರಾನ್ಸ್‌ ಅಧೀನದಿಂದ ಹೊರಗೆ ಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+