ಅಸ್ಸಾಂ: ಸೇನಾಪಡೆಯಿಂದ ಐವರು ಉಗ್ರರ ಹತ್ಯೆ

ಗೌಹಾತಿ, ಆ, 20 : ಪೊಲೀಸರು ಮತ್ತು ಸೇನಾ ತಂಡಗಳು ಬುಧವಾರ ನಸುಕಿನ ಜಾವ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರು ಬೋಡೋ ಉಗ್ರರು ಹತ್ಯೆಯಾಗಿದ್ದಾರೆ. ಎನ್‌ಕೌಂಟರ್‌ ನಡೆಸಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

military

ಅಸ್ಸಾಂನ ಚಿರಂಗ್‌ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ನಸುಕಿನ 4.45ರ ವೇಳೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರರು ಹತರಾಗಿದ್ದಾರೆ. ರುನಿಖಾಟ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಯ್‌ಮಾಟಿ ಅರಣ್ಯಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರ ಮತ್ತು ಸೇನಾ ತಂಡಗಳ ಮೇಲೆ ಮರೆಯಲ್ಲಿ ಅಡಗಿಕೊಂಡಿದ್ದ ಬೋಡೋ ಉಗ್ರರು ಏಕಾಏಕಿ ದಾಳಿ ಶುರುಹಚ್ಚಿಕೊಂಡಿದ್ದಾರೆ. ಪ್ರತಿ ದಾಳಿ ನಡೆಸಿದಾಗ ಐವರು ಉಗ್ರರು ಹತರಾಗಿದ್ದಾರೆ ಎಂದು ಐಜಿಪಿ ಎಲ್‌.ಆರ್‌. ಬಿಷ್ಣೋಯ್‌ ವಿವರ ನೀಡಿದರು.(ಯೋಧರು ಉಗ್ರಗಾಮಿಗಳ ಗುಂಡಿಗೆ ಬಲಿ)

ಉಗ್ರರ ಬಳಿಯಿದ್ದ ಎ.ಕೆ.ಸರಣಿಯ ರೈಫ‌ಲ್‌ಗ‌ಳು, ಐದು ಪಿಸ್ತೂಲ್‌ಗ‌ಳು, ಆರು ನಿಯತಕಾಲಿಕೆಗಳು, ಐದು ಗ್ರೆನೇಡ್‌ಗಳು ಮತ್ತು ಒಂದು ಲಕ್ಷ ರೂಪಾಯಿ ನಗದು ಹಾಗೂ ಕೆಲವೊಂದು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಷ್ಣೋಯ್‌ ಮಾಹಿತಿ ನೀಡಿದರು. ಮೃತಪಟ್ಟ ಬೋಡೋ ಉಗ್ರರ ಗುರುತು ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+