ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನ ಇಂದು ಹಾರಾಟ

|
Google Oneindia Kannada News

ಇಟಾ ನಗರ, ಏಪ್ರಿಲ್ 12: ಭಾರತದ ಮೊಟ್ಟಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನವು ಇಂದಿನಿಂದ ಹಾರಾಟವನ್ನು ಪ್ರಾರಂಭಿಸಲಿದೆ. ಅರುಣಾಚಲ ಪ್ರದೇಶದ ದೂರದ ಪಟ್ಟಣಗಳಿಗೆ ವಿಮಾನ ಸಂಪರ್ಕವನ್ನು ಒದಗಿಸಲಿದೆ.

ಭಾರತೀಯ ವಾಯುಯಾನದ ಇತಿಹಾಸದಲ್ಲಿ ಇದು ಮಹತ್ವದ ದಿನವಾಗಿದ್ದು, ಈ ವಿಮಾನ ಸಂಪರ್ಕ ಆರಂಭದಿಂದಾಗಿ ದೇಶದ ಉಳಿದ ಭಾಗಗಳೊಂದಿಗೆ ಈಶಾನ್ಯ ಪ್ರದೇಶದ ವಾಯು ಸಂಪರ್ಕವು ಇನ್ನಷ್ಟು ಅಧಿಕವಾಗಲಿದೆ.

ಅರುಣಾಚಲ ಪ್ರದೇಶದಲ್ಲಿ ಹೆಚ್‌ಎಎಲ್‌ನ ಪ್ರಯಾಣಿಕ ವಿಮಾನ ಹಾರಾಟಅರುಣಾಚಲ ಪ್ರದೇಶದಲ್ಲಿ ಹೆಚ್‌ಎಎಲ್‌ನ ಪ್ರಯಾಣಿಕ ವಿಮಾನ ಹಾರಾಟ

ಅರುಣಾಚಲ ಪ್ರದೇಶದ ಐದು ದೂರದ ಪಟ್ಟಣಗಳನ್ನು ಅಸ್ಸಾಂನ ದಿಬ್ರುಗಢಕ್ಕೆ ಸಂಪರ್ಕಿಸುವ ಮೊದಲ "ಮೇಡ್ ಇನ್ ಇಂಡಿಯಾ" 17-ಆಸನಗಳ ಡೋರ್ನಿಯರ್ ವಿಮಾನ ಇದಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ ವಾಯು ಸಂಪರ್ಕವನ್ನು ಉತ್ತೇಜಿಸಲು ಈ ಕ್ರಮವನ್ನು ಕೈಗೊಂಡಿದೆ.

First Ever Made In India Commercial Aircraft To Start Flying On April 12

ಈಶಾನ್ಯ ರಾಜ್ಯಗಳಲ್ಲಿ ವಾಯು ಸಂಪರ್ಕ ಉತ್ತೇಜಿಸಲು ಹಾಗೂ ಅಗತ್ಯವಿದ್ದಲ್ಲಿ, ವಾಯು ಸಂಪರ್ಕಕ್ಕಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಈಶಾನ್ಯ ಪ್ರದೇಶದಲ್ಲಿ ವಾಯು ಸಂಪರ್ಕ ಮತ್ತು ವಾಯುಯಾನ ಮೂಲಸೌಕರ್ಯವನ್ನು ಒದಗಿಸುವ ಯೋಜನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ಮಾಡಿದೆ. ಈ ಯೋಜನೆಯ ಭಾಗವಾಗಿ, ಇಂದು ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ಹಾರಾಟ ನಡೆಸಲಿದೆ.

ಎರಡು ಪ್ರಮುಖ ಬೆಳವಣಿಗೆಗಳು

ನಾಗರಿಕ ವಿಮಾನಯಾನ ಸಚಿವಾಲಯದ ಯೋಜನೆಯ ಭಾಗವಾಗಿ ಇಂದು ಎರಡು ಪ್ರಮುಖ ಎರಡು ಬೆಳವಣಿಗೆಗಳು ನಡೆಯಲಿದೆ. ಮೊದಲನೆಯದಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಮೊದಲ ಮೇಡ್ ಇನ್ ಇಂಡಿಯಾ ವಿಮಾನ ಡೋರ್ನಿಯರ್ ಡೊ-228 ಅಸ್ಸಾಂನ ದಿಬ್ರುಗಢ್‌ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ಪಟ್ಟಣಕ್ಕೆ ಹಾರಾಟ ನಡೆಸಲಿದೆ. ಹಾಗೆಯೇ ಅಸ್ಸಾಂನ ಲಿಲಾಬರಿಯಲ್ಲಿ ಈಶಾನ್ಯ ಪ್ರದೇಶಕ್ಕಾಗಿ ಮೊದಲ ಎಫ್‌ಟಿಒ (ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್) ಉದ್ಘಾಟನೆ ಇಂದೇ ಆಗಲಿದೆ.

ಎರಡೂ ಕಾರ್ಯಕ್ರಮಗಳಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಪೇಮಾ ಖಂಡು ಸಹ ಭಾಗವಹಿಸಲಿದ್ದಾರೆ.

ವಿಮಾನದ ಬಗ್ಗೆ ತಿಳಿಯಿರಿ..

ಎಸಿ ಕ್ಯಾಬಿನ್ ಹೊಂದಿರುವ 17 ಆಸನಗಳ ಒತ್ತಡರಹಿತ ಡೋರ್ನಿಯರ್ 228 ಹಗಲು ಮತ್ತು ರಾತ್ರಿ ಕಾರ್ಯಾಚರಣೆಗೆ ಸಮರ್ಥವಾಗಿದೆ. ಲಘು ಸಾರಿಗೆ ವಿಮಾನವು ಈಶಾನ್ಯ ರಾಜ್ಯಗಳಲ್ಲಿ ಪ್ರಾದೇಶಿಕ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಈ ಎರಡು ವಿಮಾನಗಳನ್ನು ಕಳೆದ ಗುರುವಾರ ಅಲಯನ್ಸ್ ಏರ್‌ಗೆ ಹಸ್ತಾಂತರಿಸಲಾಯಿತು. ಒಂದನ್ನು ಅಲಯನ್ಸ್ ಏರ್‌ನ ಹೊಸ ಕೇಂದ್ರವಾದ ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಚೀನಾ ಮತ್ತು ಮ್ಯಾನ್ಮಾರ್ ಗಡಿಗಳಿಗೆ ಸಮೀಪವಿರುವ ಕೆಲವು ಪ್ರದೇಶಗಳು ಸೇರಿದಂತೆ ಪೂರ್ವ ಅರುಣಾಚಲ ಪ್ರದೇಶದ ದೂರದ ಸ್ಥಳಗಳಿಗೆ ವಾಯು ಸಂಪರ್ಕವನ್ನು ನೀಡಲು ಈ ವಿಮಾನಗಳನ್ನು ಬಳಸಲಾಗುತ್ತದೆ.

ಅಲಯನ್ಸ್ ಏರ್ ಆರಂಭದಲ್ಲಿ ದಿಬ್ರುಗಢ್‌ನಿಂದ ಪಾಸಿಘಾಟ್‌ಗೆ ಹಾರಲಿದೆ. ಮತ್ತು ಮುಂದಿನ 15 ರಿಂದ 20 ದಿನಗಳಲ್ಲಿ, ಇದು ತೇಜು ಮತ್ತು ನಂತರ ಅರುಣಾಚಲ ಪ್ರದೇಶದ ಎರಡೂ ಪಟ್ಟಣಗಳಾದ ಝಿರೋಗೆ ಹಾರಲಿದೆ. ಇದೆಲ್ಲವೂ ಮೊದಲ ಹಂತದಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಇದು ವಿಜಯನಗರ, ಮೆಚುಕಾ, ಅಲಾಂಗ್ ಮತ್ತು ಇತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
First Ever "Made In India" Commercial Aircraft To Start Flying On April 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X