ಉತ್ತರಪ್ರದೇಶದಲ್ಲಿ ನಡಿಯಿತು ಮತ್ತೊಂದು ಪೈಶಾಚಿಕ ಕೃತ್ಯ!
ಲಕ್ನೋ, ಡಿಸೆಂಬರ್ 6; ಉನ್ನಾವ ರೇಪ್ ಸಂತ್ರಸ್ತೆಯ ಮೇಲೆ ಭಯಾನಕ ದಾಳಿ ನಂತರ, ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಯುವತಿ ಮೇಲೆ, ಯುವಕನೊಬ್ಬ ಗುಂಡಿನ ದಾಳಿ ನಡೆಸಿ, ಪೈಶಾಚಿಕ ಕೃತ್ಯ ಮೆರದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರಕೂಟದ ಬಳಿಯ ಗ್ರಾಮವೊಂದರ ಮದುವೆ ಮನೆಯಲ್ಲಿ ವೇದಿಕೆ ಮೇಲೆ ಯುವತಿಯರಿಬ್ಬರು ಹಿಂದಿ ಹಾಡೊಂದಕ್ಕೆ ಡ್ಯಾನ್ಸ ಮಾಡುತ್ತಿದ್ದಾಗ ಯುವಕನೊಬ್ಬ ಅವರ ಜೊತೆ ವಾಗ್ವಾದ ನಡೆಸಿದ್ದಾನೆ. ನಂತರ ಯುವತಿ ಹಿಂದೆ ತಿರುಗಿ ನೋಡಿದಾಗ ಅವಳ ಮುಖಕ್ಕೆ ಗುಂಡು ಹಾರಿಸಿದ್ದಾನೆ. ಯುವತಿಯನ್ನು 22 ವರ್ಷದ ಹೀನಾ ಎಂದು ಗುರುತಿಸಲಾಗಿದೆ.
ಗುಂಡು ಹಾರಿಸಿದವ ನಾಪತ್ತೆಯಾಗಿದ್ದು, ಪೊಲೀಸರು ಆತನಿಗೆ ಹುಡುಕಾಡುತ್ತಿದ್ದಾರೆ. ಯುವತಿ ಕಾನ್ಪುರದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಡಿಸೆಂಬರ್ 1 ರಂದು ನಡೆದಿರುವುದಾಗಿ ತಿಳಿದು ಬಂದಿದೆ.

ದೂರು ದಾಖಲು
ಮದುವೆ ಮನೆಯಲ್ಲಿ ಯುವತಿಗೆ ಗುಂಡು ಹಾರಿಸಿದವ ತಪ್ಪಿಸಿಕೊಂಡಿದ್ದು, ಗ್ರಾಮದ ಪ್ರಮುಖರೊಬ್ಬರು ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾನ್ಪುರ್ ದ ಹಿರಿಯ ಪೊಲೀಸ್ ಅಧಿಕಾರಿ ಅಖಿಲ್ ಮಿತ್ತಲ್ ಅವರು, ಆರೋಪಿಯನ್ನು ಶೀಘ್ರವೇ ಬಂದಿಸಲಾಗುವುದು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರು ಗುಂಡಿನ ದಾಳಿ ಪ್ರಕರಣಕ್ಕೆ ಇದು ಕೂಡ ಸೇರ್ಪಡೆಯಾಗಿದೆ.












Click it and Unblock the Notifications