Job: ಕೆಲಸ ಸರಿಯಿಲ್ಲ ಎಂದು ಉದ್ಯೋಗಿನ ಕೆಲಸ ತೆಗೆದು ಹಾಕಿದ ಕಂಪನಿ; ಕೇಸ್ ಮಾಡಿ 19 ಲಕ್ಷ ಗೆದ್ದ ಮಹಿಳೆ!

Job: ಇತ್ತೀಚಿನ ದಿನಗಳಲ್ಲಿ ಕೆಲಸದಿಂದ ತೆಗೆದು ಹಾಕುವುದು ಮಾಮೂಲಾಗಿ ಬಿಟ್ಟಿದೆ. ಮೊದಲೆಲ್ಲಾ ಒಮ್ಮೆ ಕೆಲಸಕ್ಕೆ ಸೇರಿದರೆ ನಿವೃತ್ತಿಯಾಗುವವರೆಗೆ ಅದೇ ಕೆಲಸ. ಇಲ್ಲಾ ಒಳ್ಳೆಯ ಕೆಲಸ ಸಿಕ್ಕಿತು ಎಂದಾದಾಗ ನಾವೇ ಕೆಲಸ ಬಿಡಬೇಕು. ಆದ್ರೆ ಈಗ ಹಾಗಲ್ಲ, ಎಲ್ಲಾ ಕಡೆ ಕಾಂಪಿಟೇಶನ್‌. ಅಲ್ಲದೆ ಈ ಎಐ ಯುಗದಲ್ಲಿ ಮೆಷಿನ್‌ಗಳು ಟೆಕ್ನಾಲಜಿಗಳು ಜನರ ಕೆಲಸವನ್ನೇ ನುಂಗಿ ಬಿಡುತ್ತಿವೆ. ಎಲ್ಲಾ ಕಂಪನಿಗಳಲ್ಲೂ ಲೇ ಆಫ್‌ ಕಾಮನ್‌ ಆಗಿ ಬಿಟ್ಟಿದೆ. ಬೆಳಗ್ಗೆ ಕೆಲಸಕ್ಕೆ ಹೋದವರು ಸಂಜೆ ಕೆಲಸ ಇಲ್ಲ ಎಂದು ವಾಪಸ್‌ ಆಗುವ ಸ್ಥಿತಿ ಬಂದಿದೆ.

ಇನ್ನು ಕಾರ್ಪೊರೇಟ್ ಜಗತ್ತಿನಲ್ಲಿ, ಪ್ರೊಬೇಷನರಿ ಪೀರಿಯೆಡ್‌ನಲ್ಲಿ ಜನರನ್ನು ದುಡಿಸಿಕೊಳ್ಳುವುದು ಸಾಮಾನ್ಯ. ಈ ಪಿರಿಯೇಡ್‌ನಲ್ಲಿ ಅವರು ಹೇಗೆ ಕೆಲಸ ಮಾಡ್ತಾರೆ ಅನ್ನೋದನ್ನ ನೋಡಲಾಗ್ತದೆ. ಈ ಮೂಲಕ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಉದ್ಯೋಗಿಗೂ ಸಹಾಯವಾಗುತ್ತದೆ. ಆದ್ರೆ, ಈಗೀಗ ಪ್ರೊಬೇಷನರಿ ಪಿರೀಯೆಡ್‌ನಲ್ಲಿ ಉದ್ಯೋಗಿಯನ್ನು ಸರಿಯಾಗಿ ದುಡಿಸಿಕೊಂಡು ನಂತರ ನಿಮ್ಮ ಕೆಲಸ ಇಷ್ಟ ಆಗಿಲ್ಲ ಎಂದು ಕೆಲಸದಿಂದ ತೆಗೆದು ಹಾಕುವುದಕ್ಕೆ ಬಳಸಿ ಕೊಳ್ಳಲಾಗ್ತಿದೆ. ಆದ್ರೆ ಇದೀಗ ಇಂಥದ್ದೇ ಘಟನೆ ಬಾರೀ ಚರ್ಚೆಗೆ ಕಾರಣವಾಗಿದೆ.

Job

ಪ್ರೊಬೆಷನರಿ ಪೀರಿಯೆಡ್‌ನಲ್ಲಿ ಕೆಲಸ ಕಳೆದುಕೊಂಡ ಮಹಿಳೆ

ಇಲ್ಲಿ ಮಹಿಳೆಯೊಬ್ರು ಪ್ರೊಬೆಷನರಿ ಆಗಿ ಕೆಲಸ ಮಾಡ್ತಾ ಇದ್ರು. ತಾನು ಸಂಪೂರ್ಣ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿದ್ದೇನೆ ಎನ್ನುವುದು ಆ ಮಹಿಳೆಯ ವಾದ. ತನ್ನ ಕೆಲಸದಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ತನಗೆ ವಹಿಸಿದ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲೂ ತಪ್ಪಾಗದಂತೆ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಮಹಿಳೆಗೆ ಯಾವತ್ತೂ ನಿಮ್ಮ ಕೆಲಸ ಸರಿಯಿಲ್ಲ, ತಪ್ಪಾಗುತ್ತಿದೆ ಎನ್ನುವ ಮಾತನ್ನು ಯಾರೂ ಹೇಳಿರಲಿಲ್ಲ. ಆದ್ರೆ ಒಂದು ದಿನ ಇದ್ದಕ್ಕಿದ್ದ ಹಾಗೆ ಮಹಿಳೆಯ ಕೆಲಸ ಸರಿಯಿಲ್ಲ, ಅವರಿಂದ ಕಂಪನಿಗೆ ಯಾವುದೇ ಲಾಭ ಇಲ್ಲ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಒಂದು ಸಣ್ಣ ಸೂಚನೆಯನ್ನೂ ನೀಡದೆ ಕೆಲಸದಿಂದ ತೆಗೆದುಹಾಕಿರುವುದು ಮಹಿಳೆಗೆ ತಡೆದುಕೊಳ್ಳುವುದು ಸಾಧ್ಯ ಆಗಲಿಲ್ಲ. ಅವಳು ಕಂಪನಿಯ ನಿರ್ಧಾರವನ್ನು ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದಾಳೆ. ಕೆಲಸದಿಂದ ತೆಗೆಯುವ ಮೊದಲು ಸರಿಯಾದ ಕಾರಣವನ್ನು ಹೇಳಿ ಎಂದು ಕೇಳಿದ್ದಾಳೆ.

ಕೆಲಸದಿಂದ ತೆಗೆದು ಹಾಕಿದ ಕಂಪನಿ

ವರದಿಯ ಪ್ರಕಾರ, ಆ ಮಹಿಳೆ ಏಪ್ರಿಲ್ 2025ರಲ್ಲಿ ಎಂಎನ್‌ಸಿಯಲ್ಲಿ ಆಡಿಟ್ ಮ್ಯಾನೇಜರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕಂಪನಿಯು ಅವರನ್ನು ಆರು ತಿಂಗಳವರೆಗೆ ಪ್ರೊಬೇಷನರಿಯಾಗಿ ಕೆಲಸ ಮಾಡುವಂತೆ ಹೇಳಿತ್ತು. ಈ ಅವಧಿಯಲ್ಲಿ, ಅವರ ಕೆಲಸದ ಬಗ್ಗೆ ಒಂದು ಸಣ್ಣ ದೂರು ಕೂಡಾ ಬಂದಿರಲಿಲ್ಲ. ಆದ್ರೆ ಪ್ರೊಬೇಷನರಿ ಪಿರಿಯೇಡ್‌ ಮುಗಿತಾ ಇದ್ದ ಹಾಗೆ ಕಂಪನಿಯು ಇದ್ದಕ್ಕಿದ್ದಂತೆ ಅವರ ಕಾರ್ಯಕ್ಷಮತೆ ನಿರೀಕ್ಷಿಸಿದ ಹಾಗೆ ಇಲ್ಲ ಎಂದು ಹೇಳಿದೆ. ಇಷ್ಟು ಹೇಳಿ ಅವರನ್ನು ಕೆಲಸದಿಂದ ತೆಗೆಯಲಾಯಿತು.

ಸುಮ್ಮನಿರುವ ಬದಲು ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಕೆಲಸ ಹೋಯಿತು ಎಂದು ಮಹಿಳೆ ಸುಮ್ಮನೆ ಕೂರಲಿಲ್ಲ. ಕಂಪನಿಯ ವಿರುದ್ಧ ಕೋರ್ಟ್‌ಗೆ ಹೋಗಿದ್ದಾರೆ. ವಿಚಾರಣೆಯ ಸಮಯದಲ್ಲಿ, ಪ್ರೊಬೇಶನ್ರಿ ಪಿರೀಯೆಡ್‌ನಲ್ಲಿ ಪಾಸ್‌ ಆಗಲು ಉದ್ಯೋಗಿಗಳು ಶೇಕಡಾ 80 ರಷ್ಟು ಅಂಕಗಳು ಮತ್ತು ಕನಿಷ್ಠ 3 ರ ಗುಣಮಟ್ಟದ ರೇಟಿಂಗ್ ತೆಗೆದುಕೊಳ್ಳಲೇ ಬೇಕು. ಆದ್ರೆ, ಈ ಮಹಿಳೆ ಕೇವಲ ಶೇಕಡಾ 71 ರಷ್ಟು ಅಂಕ ಮತ್ತು 2.4 ರೇಟಿಂಗ್ ಪಡೆದಿದ್ದಾರೆ. ಹಾಗಾಗಿಯೇ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಂಪನಿ ವಾದಿಸಿದೆ.ಮೊದಲಿಗೆ ಕಂಪನಿ ಹೇಳುತ್ತಿರುವುದು ಸರಿಯಾಗಿಯೇ ಇದೆ ಅನ್ನಿಸಿತು. ಆದ್ರೆ ವಿಚಾರಣೆ ಮುಂದುವರಿತಾ ಇದ್ದ ಹಾಗೆ ಎಲ್ಲವೂ ಬದಲಾಯಿತು.

ತನಿಖೆಯಲ್ಲಿ ಬಯಲಾಯಿತು ಕಂಪನಿಯ ಬಣ್ಣ

ಮಹಿಳೆ ಉದ್ಯೋಗವನ್ನು ಪ್ರಾರಂಭಿಸಿದಾಗ ಈ ರೇಟಿಂಗ್ ವ್ಯವಸ್ಥೆಯ ಬಗ್ಗೆ ಅವರಿಗೆ ತಿಳಿಸಲಾಗಿುದನ್ನು ವಿಚಾರಣೆ ವೇಳೆ ಕಂಪನಿ ಒಪ್ಪಿಕೊಂಡಿತು. ಇದರರ್ಥ ಯಾವ ನಿಯಮದ ಪ್ರಕಾರ ಕೆಲಸದಿಂದ ತೆಗೆಯಲಾಗಿದೆ ಅಂಥ ಒಂದು ನಿಯಮ ಇದೆ ಎನ್ನುವುದು ಆ ಮಹಿಳೆಗೆ ಗೊತ್ತೇ ಇರಲಿಲ್ಲ. ಇದಲ್ಲದೆ, ಕಂಪನಿಯು ನಿಗದಿತ ಕಾರ್ಯಕ್ಷಮತೆಯ ವಿಮರ್ಶೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲಿಲ್ಲ ಎನ್ನುವುದು ಕೂಡಾ ತನಿಖೆಯ ವೇಳೆ ಗೊತ್ತಾಗಿದೆ.

ಯಾವುದೇ ಸಾಕ್ಷಿ ಇಲ್ಲದ ಆರೋಪ

ಮಹಿಳೆ ತನ್ನ ಟಾರ್ಗೆಟ್ ಅನ್ನು ಮಿಸ್‌ ಮಾಡುತ್ತಿದ್ದರು. ಅವರ ಕೆಲಸದಲ್ಲಿ ಫಾರ್ಮ್ಯಾಟಿಂಗ್ ದೋಷಗಳಿವೆ ಎಂದು ಕಂಪನಿಯು ಆರೋಪಿಸಿದೆ. ಆದರೆ ನ್ಯಾಯಮಂಡಳಿ ದಾಖಲೆಗಳನ್ನು ಪರಿಶೀಲಿಸಿದಾಗ, ಈ ಆರೋಪವನ್ನು ಸಾಬೀತುಪಡಿಸುವ ಯಾವ ಪುರಾವೆಗಳೂ ಸಿಕ್ಕಿಲ್ಲ.ಇದಲ್ಲದೆ ಅವರ ಮ್ಯಾನೇಜರ್‌ ಆಡಿಟ್ ಕೆಲಸದ ಗುಣಮಟ್ಟದ ಬಗ್ಗೆ ಯಾವತ್ತೂ ಪ್ರಶ್ನೆ ಮಾಡಲೇ ಇಲ್ಲ. ಹಾಗಾಗಿ ಮಹಿಳೆಯನ್ನು ಕೆಲಸದಿಂದ ತೆಗೆಯುವುದಕ್ಕೆ ನೀಡಿರುವ ಯಾವ ಕಾರಣವೂ ಸಮಂಜಸವಲ್ಲ ಎಂದು ಕೋರ್ಟ್‌ ಹೇಳಿದೆ.

19 ಲಕ್ಷ ಪರಿಹಾರ ನೀಡಲು ಆದೇಶ

ಕಂಪನಿಯು ಮಹಿಳೆಯನ್ನು ಅನ್ಯಾಯವಾಗಿ ನಡೆಸಿಕೊಂಡಿದೆ ಎನ್ನುವ ತೀರ್ಮಾನಕ್ಕೆ ಕೋರ್ಟ್‌ ಬಂದಿದೆ. ಕಂಪನಿಯು ಗರಿಷ್ಠ ಕಾನೂನು ಪರಿಹಾರವಾಗಿ 30,000 ಸಿಂಗಾಪುರ್ ಡಾಲರ್‌ಗಳನ್ನು ಪಾವತಿಸುವಂತೆ ಆದೇಶಿಸಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 19 ರೂಪಾಯಿಗಳಿಗೆ ಸಮಾನವಾಗಿರುತ್ತದೆ. ಮಹಿಳೆ ತಿಂಗಳಿಗೆ 11,500 ಸಿಂಗಾಪುರ್ ಡಾಲರ್‌ಗಳನ್ನು ವೇತನವಾಗಿ ಪಡೆಯುತ್ತಿದ್ದರು. ಯಾವುದೇ ಕಾರಣವಿಲ್ಲದೆ, ಕಾನೂನಿಗೆ ಮೀರಿ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿರುವುದರಿಂದ ಅವರಿಗೆ ಆರ್ಥಿಕ ನಷ್ಟ ಆಗಿದ್ದು ಮಾತ್ರವಲ್ಲ ಮಾನಸಿಕ ತೊಂದರೆಯೂ ಉಂಟಾಗಿದೆ ಎಂದು ಕೋರ್ಟ್‌ ಹೇಳಿದೆ.

ಉದ್ಯೋಗಿಗಳು ಮತ್ತು ಕಂಪನಿ ಇಬ್ಬರಿಗೂ ಪಾಠ

ಈ ಪ್ರಕರಣಯನ್ನು ನೋಡುವುದಾದರೆ ಇಲ್ಲಿ ಒಬ್ಬ ಮಹಿಳೆ ಗೆದ್ದಿರುವುದು ಮಾತ್ರವಲ್ಲ, ಇದು ಕಾರ್ಪೊರೇಟ್ ವಲಯಕ್ಕೆ ನೀಡಿರುವ ದೊಡ್ಡ ಸಂದೇಶ. ಪ್ರೊಬೇಷನರಿ ಪಿರೀಯೆಡ್‌ ಅಂದರೆ ಕಂಪನಿಗಳು ಕಾರಣವಿಲ್ಲದೆ ಉದ್ಯೋಗಿಯನ್ನು ವಜಾಗೊಳಿಸುವುದಲ್ಲ.ಉದ್ಯೋಗಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಹೋದರೆ ಮೊದಲೇ ಸೂಚನೆ ನೀಡಬೇಕು. ಎಲ್ಲಿ ತಪ್ಪಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ ಮುಂದಾಗುವ ಪರಿಣಾಮವನ್ನು ಕಂಪನಿಯೇ ಎದುರಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+