Korba-Visakhapatnam Express: ಬೆಂಕಿಗೆ ಧಗಧಗಿಸಿ ರೈಲು ಬೋಗಿಗಳು-ಎಲ್ಲಿ?
Korba-Visakhapatnam Express: ನಿಂತಿದ್ದ ರೈಲಿನ ಬೋಗಿಗಳು ಬೆಂಕಿಗೆ ಧಗಧಗಿಸಿದ ಘಟನೆ ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಇಂದು (ಆಗಸ್ಟ್ 04) ನಡೆದಿದೆ.
ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ನಿಂತಿದ್ದ ಕೊರ್ಬಾ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ರೈಲಿನ ಮೂರು ಹವಾನಿಯಂತ್ರಿತ ಬೋಗಿಗಳು ಧಗಧಗಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ನಿಂತ ರೈಲಾಗಿದ್ದು, ಈ ವೇಳೆ ಪ್ರಯಾಣಿಕರೆಲ್ಲ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ರೈಲು ಬೆಳಗ್ಗೆ 6:30ಕ್ಕೆ ಛತ್ತೀಸ್‌ಗಢದ ಕೊರ್ಬಾದಿಂದ ವಿಶಾಖಪಟ್ಟಣಂ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 4ಕ್ಕೆ ಬಂದು ನಿಂತಿದ್ದು, ಬಳಿಕ ತಿರುಪತಿಗೆ ಹೋಗಬೇಕಿತ್ತು. ಇನ್ನು ಕೋಚ್ ಡಿಪೋಗೆ ನಿರ್ವಹಣೆಗಾಗಿ ಹೋಗಬೇಕಾಗಿತ್ತು. ಆದ್ದರಿಂದ ರೈಲಿಗೆ ಬೀಗ ಹಾಕಲಾಗಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳಿ ತಿಳಿಸಿದರು.
ಬೆಳಗ್ಗೆ 9:30ರ ವೇಳೆಗೆ ಈ ರೈಲು ಬೋಗಿಗಳಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಈ ಕುರಿತು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಬಿ7 ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಿ6 ಹಾಗೂ ಎಂ1 ಬೋಗಿಗಳು ಭಾಗಶಃ ಹಾನಿಗೊಳಗಾಗಿವೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ 4 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.
ಇನ್ನು ಈ ಬೋಗಿಗಳಲ್ಲಿ ಯಾರು ಇಲ್ಲದೆ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಫಕೀರಪ್ಪ ತಿಳಿಸಿದ್ದು, ಈ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಹಾನಿಗೊಳಗಾದ ಬೋಗಿಗಳನ್ನು ಹೊರತುಪಡಿಸಿ, ನಿರ್ವಹಣೆಗಾಗಿ ರೈಲನ್ನು ಡಿಪೋಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದರು.
ಈ ರೈಲು ಮಾರ್ಗ ಯೋಜನೆ ಪ್ರಸ್ತಾಪಿಸಿಲ್ಲ ಏಕೆ?: ಈ ಹಿಂದೆ ಎಲ್ಲ ಬಜೆಟ್‌ಗಳಲ್ಲಿ ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗಿ ಬೆರಳೆಣಿಕೆಯಷ್ಟು ಅಂಶಗಳಾದರೂ ಇರುತ್ತಿದ್ದವು. ಆದರೆ, ಈ ಬಾರಿಯದ್ದು ಕನ್ನಡಿಗರ ಪಾಲಿಗೆ ಕರಾಳ ಬಜೆಟ್ ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಚಿವ ಹೆಚ್.ಆಂಜನೇಯ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಕಾರಣಕ್ಕೆ ಅಸೂಯೆಗೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳ ಸ್ಥಗಿತಕ್ಕೆ ಮುಂದಾಗಿದೆ. ದ್ವೇಷದ ರಾಜಕಾರಣಕ್ಕೆ ಬಜೆಟ್ ಅನ್ನು ಬಳಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭಾ ಚುನಾವಣೆ ಮುನ್ನ ನಿರ್ಮಲಾ ಸೀತರಾಮನ್ ಮಂಡಿಸಿದ್ದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂಪಾಯಿ ಬಿಡುಗಡೆಗೆ ಯಾವುದೇ ರೀತಿ ಆಶಾಭಾವನೆ ಮೂಡಿಸದಿರುವುದು ವಂಚನೆ ನಡೆ ಆಗಿದೆ. ದಾವಣಗೆರೆ-ತುಮಕೂರು ರೈಲು ಮಾರ್ಗ, ಕೈಗಾರಿಕೆಗಳ ಸ್ಥಾಪನೆ, ಭದ್ರಾ ಮೇಲ್ದಂಡೆ ಯೋಜನೆ ಹೀಗೆ ಅನೇಕ ಯೋಜನೆಗಳಿಗೆ ಈ ಬಜೆಟ್ ಉತ್ತರ ಕೊಡಲಿದೆ ಎಂಬ ನಿರೀಕ್ಷೆ ಹುಸಿ ಆಗಿದೆ ಎಂದರು.
ಒಟ್ಟಾರೆ ರಾಜ್ಯದ ಪಾಲಿಗೆ ಸಣ್ಣ ಬೆಳಕು ಕೂಡ ಆಗದ ಈ ಬಜೆಟ್ ಕತ್ತಲಿಗೆ ದೂಡಿದೆ. ಚುನಾವಣೆ ಸಂದರ್ಭ ಚಂದ್ರಲೋಕವನ್ನೇ ತರುತ್ತೇವೆ ಎಂದು ಹೇಳುವ ಬಿಜೆಪಿ ನಾಯಕರ ಮಾತು ಜನರನ್ನು ಮೋಸದ ಜಾಲಕ್ಕೆ ತಳ್ಳುವ ಕುತಂತ್ರವಾಗಿದೆ. ಬಿಜೆಪಿಯ ಈ ದ್ವೇಷದ ನಡೆಗೆ ಕನ್ನಡಿಗರು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.












Click it and Unblock the Notifications