Breaking: ಜುನೋಸ್ ಪಿಜ್ಜಾ ರೆಸ್ಟೊರೆಂಟ್‌ನಲ್ಲಿ ಬೆಂಕಿ, 1 ಸಾವು, 9 ಮಂದಿಗೆ ಗಾಯ

ಮುಂಬೈ, ಡಿಸೆಂಬರ್ 17: ಮುಂಬೈನ ಘಾಟ್‌ಕೋಪರ್ ಪ್ರದೇಶದ ಪರಾಖ್ ಆಸ್ಪತ್ರೆ ಬಳಿಯ ಜುನೋಸ್ ಪಿಜ್ಜಾ ರೆಸ್ಟೊರೆಂಟ್‌ನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಪೊಲೀಸರು ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಮುಂಬೈ ಅಗ್ನಿಶಾಮಕ ದಳದ ಪ್ರಕಾರ, ಮಧ್ಯಾಹ್ನದ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಯಿತು.

ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಪರಾಖ್ ಆಸ್ಪತ್ರೆ ಬಳಿಯ ವಿಶ್ವಾಸ ಕಟ್ಟಡದ ನೆಲ ಮಹಡಿಯಲ್ಲಿರುವ ಜುನೋಸ್ ಪಿಜ್ಜಾ ಹೋಟೆಲ್‌ನ ಎಲೆಕ್ಟ್ರಿಕ್ ಮೀಟರ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Fire breaks out near Parakh Hospital in Mumbais Ghatkopar, one dead, nine injured

ಮುಂಬೈ ಪಾಲಿಕೆ ಅಧಿಕಾರಿಗಳು ಹೇಳುವುದೇನು?:

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿಗಳ ಪ್ರಕಾರ, ಬೆಂಕಿಯಲ್ಲಿ ನಾಲ್ವರು ಪೊಲೀಸರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದು, ಅವರನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬನನ್ನು ಖುರ್ಷಿ ದೇಧಿಯಾ (46) ಎಂದು ಗುರುತಿಸಲಾಗಿದೆ ಎಂದು ಘೋಷಿಸಲಾಗಿದೆ. ಇದೇ ವೇಳೆ "ಗಾಯಗೊಂಡವರಲ್ಲಿ ತನಿಯಾ ಕಾಂಬಳೆ (18) ಎಂದು ಗುರುತಿಸಲಾದ ವ್ಯಕ್ತಿಯು ಬೆಂಕಿಯಲ್ಲಿ 18% ರಿಂದ 20% ಸುಟ್ಟುಹೋದ್ದಾರೆ. ಇದೇ ಘಟನೆಯಲ್ಲಿ ಗಾಯಗೊಂಡ 30 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ" ಎಂದು ರಾಜವಾಡಿಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+