Budget 2024: ನಿರ್ಮಲಾ ಸೀತಾರಾಮನ್ ಡಿಜಿಟಲ್ ಬಜೆಟ್: ಕೆಂಪು ಚೀಲದಲ್ಲಿ ಟ್ಯಾಬ್ಲೆಟ್
ಕೇಂದ್ರ ಸಚಿವೆ ನಿರ್ಮಲಾ ಸೀತಾರಮನ್ ಅವರು ಇಂದು ಪೂರ್ಣಾವಧಿಯ ಕೇಂದ್ರ ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ. ಈ ವೇಳೆ ಸಂಪ್ರದಾಯಕ ಕಗಾದದ ಬಜೆಟ್ ಪ್ರತಿಗಳಿಗೆ ಈಗಾಗಲೇ ಗುಡ್ ಬೈ ಹೇಳಲಾಗಿದ್ದು, ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿದಂತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಜಿಟಲ್ ಟ್ಯಾಬ್ಲೆಟ್ ಅನ್ನು ಹೊತ್ತುಕೊಂಡು ಸಂಸತ್ತಿಗೆ ತೆರಳುತ್ತಿದ್ದರೆ, ಕ್ಯಾಮೆರಾ ಕಣ್ಣುಗಳು ಅವರ ಕೈಯಲ್ಲಿ ಹಿಡಿದಿದ್ದ ಡಿಜಿಟಲ್ ಟ್ಯಾಬ್ಲೆಟ್ ಮೇಲೆ ಕೇಂದ್ರಿ ಕೃತವಾಗಿದ್ದವು. ಮೆಜೆಂಟಾ ಬಾರ್ಡರ್‌ನೊಂದಿಗೆ ಬಿಳಿ ರೇಷ್ಮೆ ಸೀರೆಯನ್ನು ಧರಿಸಿ, ರಷ್ಟ್ರಪತಿಯನ್ನು ಭೇಟಿ ಮಾಡಿ ಲೋಕಸಭೆ ಆಗಮಿಸಿದರು.

ಫೋಟೋ ಪೋಸ್
ವಿತ್ತ ಸಚಿವಾಲಯಕ್ಕೆ ಹೋಗುವಾಗ ಸಂಪ್ರದಾಯದಂತೆ 'ಬ್ರೀಫ್ ಕೇಸ್' ಫೋಟೋಗೆ ಪೋಸ್ ನೀಡಿದರು. ಟ್ಯಾಬ್ಲೆಟ್ ಅನ್ನು ಬ್ರೀಫ್ಕೇಸ್ ಬದಲಿಗೆ ಕೆಂಪು ಚೀಲದೊಳಗೆ ಇರಿಸಲಾಗಿತ್ತು. ಅದರ ಮೇಲೆ ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನವನ್ನು ಮುದ್ರಿಸಲಾಗಿತ್ತು.
ಏಳನೇ ಬಾರಿ ಮಂಡನೆ
ಡಿಜಿಟಲ್ ಕ್ರಾಂತಿ ನಡೆಸುವ ಕನಸನ್ನು ಮೋದಿ ಸರ್ಕಾರ ಕಾಣುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. 2024-25ರ ಬಜೆಟ್ ಸೀತಾರಾಮನ್ ಅವರ ಸತತ ಏಳನೇ ಬಜೆಟ್ ಇದಾಗಿದೆ. ಇದು ದಾಖಲೆಯಾಗಿದೆ.

ಬ್ರೀಫ್ಕೇಸ್ ಸಂಸ್ಕೃತಿ ಕೊನೆಗೊಂಡಿದ್ದು ಯಾವಾಗ?
ನರೇಂದ್ರ ಮೋದಿ ಸರ್ಕಾರ ಎರಡನೇ ಬಾರಿಗೆ ಗದ್ದುಗೆಗೆ ಏರಿದಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜುಲೈ 2019 ರಲ್ಲಿ ಕೇಂದ್ರ ಬಜೆಟ್ ಪೇಪರ್‌ಗಳನ್ನು ಬಳಸುವುದನ್ನು ನಿಲ್ಲಿಸಿದರು. ಈ ಮೂಲಕ ಬ್ರೀಫ್‌ಕೇಸ್ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತು. ಇನ್ನು 2021ರಲ್ಲಿ ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ಆವರಿಸಿಕೊಂಡಿದ್ದಾಗಲೂ, ಇವರು ಪೇಪರ್ ರಹಿತ ಬಜೆಟ್ ಮಂಡಿಸಿದರು. ಈ ಸಂಪ್ರದಾಯ ಮಂಗಳವಾರವೂ ಮುಂದುವರಿದಿತ್ತು.
ಅಟಲ್ ಸರ್ಕಾರದಲ್ಲೂ ಸಂಪ್ರದಾಯಕ್ಕೆ ಬ್ರೇಕ್
ಸೀತಾರಾಮನ್‌ಗಿಂತ ಮೊದಲು, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ದೀರ್ಘಕಾಲದ ಸಂಪ್ರದಾಯಕ್ಕೆ ಬ್ರೇಕ್ ಹಾಕಲಾಗಿತ್ತು. ಆಗಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಸಾಂಪ್ರದಾಯಿಕ ಸಮಯವಾದ ಸಂಜೆ 5 ರ ಬದಲಿಗೆ 11 ಗಂಟೆಗೆ ಬಜೆಟ್ ಮಂಡಿಸಿದರು. ಅಂದಿನಿಂದ ಎಲ್ಲ ಸರ್ಕಾರಗಳು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುತ್ತಿವೆ.

ಬಜೆಟ್ ಬ್ರೀಫ್ಕೇಸ್ ಅನ್ನು ಒಯ್ಯುವ ಸಂಪ್ರದಾಯವು ಬ್ರಿಟಿಷ್ ಪರಂಪರೆಯಾಗಿತ್ತು. 'ಬಜೆಟ್' ಪದವು ಫ್ರೆಂಚ್ ಪದ 'ಬೌಗೆಟ್' ನಿಂದ ಹುಟ್ಟಿಕೊಂಡಿದೆ, ಇದರರ್ಥ ಚರ್ಮದ ಬ್ರೀಫ್ಕೇಸ್.












Click it and Unblock the Notifications