ಮೋದಿ ಭಾಷಣಕ್ಕೆ ಕೇಂದ್ರದಿಂದ ಸರ್ವಿಸ್ ಟ್ಯಾಕ್ಸ್!

ಅಹಮದಾಬಾದ್, ಫೆ 20: ದೇಶಾದ್ಯಂತ ಸುತ್ತಿ ಸಾರ್ವಜನಿಕ ಸಭೆ ನಡೆಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಷಣಕ್ಕೆ ಕೇಂದ್ರ ಸರಕಾರ ಸೇವಾ ತೆರಿಗೆ (service tax) ಹಾಕಲು ಮುಂದಾಗಿದೆಯೇ? ನರೇಂದ್ರ ಮೋದಿ ಪ್ರಕಾರ ಹೌದು.

ನಾನು ದೇಶದ ಮೂಲೆ ಮೂಲೆ ಸುತ್ತಿ ನಡೆಸುತ್ತಿರುವ ಭಾಷಣಕ್ಕೆ ವಿತ್ತ ಸಚಿವಾಲಯ ಸೇವಾ ತೆರಿಗೆ ವಿಧಿಸಿ ದೇಶದ ಆದಾಯ ಹೆಚ್ಚಿಸಲು ಸಚಿವ ಪಿ ಚಿದಂಬರಂ ಮುಂದಾಗಿದ್ದಾರೆಂದು ಮೋದಿ ಹೇಳಿದ್ದಾರೆ.

Finance Minister working hard to boost the country's revenue by imposing service tax on Modi speech

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, ನನ್ನ ಭಾಷಣದಿಂದ ದೇಶದ ಆದಾಯ ಹೆಚ್ಚುವುದಾದರೆ ಇನ್ನೂ ಹೆಚ್ಚು ಭಾಷಣವನ್ನು ಮಾಡಿ ದೇಶದ ಆದಾಯ ಹೆಚ್ಚಿಸಲು ಶ್ರಮಿಸುತ್ತೇನೆಂದು ಚಿದಂಬರಂಗೆ ಮೋದಿ ಟಾಂಗ್ ನೀಡಿದ್ದಾರೆ.

ದೇಶದ ಆದಾಯ ಹೆಚ್ಚಿಸಲು ನಾನು ಅವಿರತವಾಗಿ ಶ್ರಮಿಸುತ್ತಿದ್ದೇನೆಂದು ಚಿದಂಬರಂ ಹೇಳಿದ್ದಾರೆ. ಅವರ ಪರಿಶ್ರಮ ಏನೆಂದು ನನಗೆ ಒಂದು ದಿನದ ಕೆಳಗೆ ಅರಿವಾಗಿದೆ. ದೇಶದ ಆದಾಯ ಹೆಚ್ಚಿಸಲು ನನ್ನ ಭಾಷಣದ ಮೇಲೆ ಸೇವಾ ತೆರಿಗೆ ವಿಧಿಸಲು ಅವರು ಇಲಾಖೆಗೆ ಆದೇಶ ನೀಡಿದ್ದಾರೆಂದು ಮೋದಿ ಟೀಕಿಸಿದ್ದಾರೆ.

ಏನಿದು ಸೇವಾ ತೆರಿಗೆ ವಿವಾದ? ನರೇಂದ್ರ ಮೋದಿ ಭಾಷಣಕ್ಕೆ ಕೆಲವೊಂದು ಕಡೆ ಬಿಜೆಪಿ ಪಾಲ್ಗೊಳ್ಳುವವರಿಂದ ಶುಲ್ಕ ಸಂಗ್ರಹಿಸುತ್ತಿದೆ. ಈ ಶುಲ್ಕಕ್ಕೆ ಸೇವಾ ತೆರಿಗೆ ನೀಡುವಂತೆ ಅಬಕಾರಿ ಇಲಾಖೆ ಬಿಜೆಪಿಗೆ ನೋಟೀಸ್ ಜಾರಿ ಮಾಡಿತ್ತು.

ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೇ, ಇಲಾಖೆ ಬಿಜೆಪಿಗೆ ನೀಡಿದ್ದ ನೋಟೀಸ್ ಅನ್ನು ತುರ್ತಾಗಿ ಹಿಂದಕ್ಕೆ ಪಡೆದು ಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+