'ನನ್ನ ಮೇಲೆ ಎರಗಿ ಬಂದ', ಸಿನಿಮಾ ನಿರ್ದೇಶಕಿಯೊಬ್ಬರ #ಮಿಟೂ ಅನುಭವ

ನವದೆಹಲಿ, ಅಕ್ಟೋಬರ್ 11: ಚಿತ್ರೋದ್ಯಮ, ಸುದ್ದಿ ಮಾಧ್ಯಮ, ಕ್ರೀಡಾ ಕ್ಷೇತ್ರಗಳಲ್ಲಿ ಖ್ಯಾತ ನಾಮರ ಕಾಮ ಚೇಷ್ಟೆಗಳನ್ನು ಬಯಗೆಳೆದ ಬಳಿಕ ಇದೀಗ #ಮಿಟೂ ಅಭಿಯಾನ ಸಾಹಿತ್ಯ ಕ್ಷೇತ್ರಕ್ಕೂ ತನ ಬಾಹು ವಿಸ್ತರಿಸಿದೆ.

ಲೇಖಕ, ಸಮಾಜವಾದಿ, ಸೆಲೆಬ್ರಿಟಿ ಸಲಹೆಗಾರ ಎಂದು ಖ್ಯಾತರಾಗಿರುವ ಸುಹೇಲ್‌ ಸೇಠ್ ಅವರು ಈಗ #ಮಿಟೂ ಅಭಿಯಾನಕ್ಕೆ ಆಹುತಿಯಾಗಿದ್ದಾರೆ.

ಚಿತ್ರ ನಿರ್ದೇಶಕಿ ಒಬ್ಬರು ಸುಹೇಲ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, 'ಆತ ನನ್ನ ಮೇಲೆ ಎರಗಿ ಬಂದ' ಎಂದು ದೂರಿದ್ದಾರೆ.

ಸುಹೇಲ್‌ ಸೇಠ್ ಅವರೊಂದಿಗೆ ವಾಟ್ಸಾಪ್‌ನಲ್ಲಿ ಮಾಡಿರುವ ಸಂಭಾಷಣೆಯ ಸ್ಕ್ರೀನ್‌ ಶಾಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಚಿತ್ರ ನಿರ್ದೇಶಕಿ ನಟಾಶಾ ರಾಥೋಡ್‌ ಎಂಬುವರು 'ಆ ಕೆಟ್ಟ ನೆನಪು ನನ್ನನ್ನು ಹೂತುಹಾಕುತ್ತಿದೆ' ಎಂದು ಅಂದಿನ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.

 Film director accused Susheel Seth for sexual harassment

ದೆಹಲಿಯ ಜನ್‌ಪತ್‌ಗೆ ಐಸ್‌ಕ್ರೀಮ್‌ ತಿನ್ನಲು ಹೋಗೋಣ ಎಂದು ಸೇಠ್ ನನ್ನನ್ನು ಕರೆದರು, ಆದರೆ ಅವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಅವರು ನನ್ನ ಮೇಲೆ ಎರಗಿ ಬಂದರು ಎಂದು ನಟಾಶಾ ಬರೆದುಕೊಂಡಿದ್ದಾರೆ.

ನನ್ನನ್ನು ಬಲವಂತವಾಗಿ ಚುಂಬಿಸಿ, ನಾಲಗೆಯನ್ನು ನನ್ನ ಬಾಯಿಯ ಒಳಗೆ ತೂರಿಸಿದ. ನನ್ನ ಕುರ್ತಾದ ಒಳಗೆ ಕೈ ಹಾಕಿ, ಸ್ತನಗಳನ್ನು ಮರ್ದಿಸಿದ' ಎಂದು ಅಂದು ನಡೆದ ಘಟನೆಯನ್ನು ವಿವರವಾಗಿ ನಟಾಶಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದಿದ್ದಾರೆ.

ನನ್ನ ಪ್ರತಿರೋಧದ ಹೊರತಾಗಿಯೂ ಸೇಠ್ ಹೀಗೆಲ್ಲ ಮಾಡಿದ ಎಂದು ನಟಾಶಾ ಬರೆದುಕೊಂಡಿದ್ದಾರೆ. ಕೊನೆಗೆ 'ಅಂದು ನನ್ನ ಮೇಲೆ ಅತ್ಯಾಚಾರ ಮಾಡದೇ ಇದ್ದುದಕ್ಕೆ ಧನ್ಯವಾದ, ಡ್ರೈವರ್‌ ಅನ್ನು ಕಳುಹಿಸಿ ನನ್ನ ಮನೆಗೆ ಡ್ರಾಪ್‌ ಮಾಡಿಸಿದ್ದಕ್ಕೆ' ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ.

ಈ ಆರೋಪದ ಬಗ್ಗೆ ಟ್ವಿಟ್ಟರ್‌ನಲ್ಲೇ ಸ್ಪಷ್ಟನೆ ಕೊಡುತ್ತೇನೆ ಎಂದು ಹೇಳಿದ್ದ ಸೇಠ್ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+