ರೊನಾಲ್ಡೊ-ಮೆಸ್ಸಿ, ಕನ್ಯೆಯರಿಗೆ ಯಾರು ಅಚ್ಚು ಮೆಚ್ಚು?

ಬೆಂಗಳೂರು, ಜೂ.15: ಬ್ರೆಜಿಲ್ಲಿನಲ್ಲಿ ವಿಶ್ವಕಪ್ ಫುಟ್ಬಾಲ್ ಕದನದ ಬಿಸಿ ದಿನೇ ದಿನೇ ಏರುತ್ತಿದ್ದಂತೆ ಸ್ಟಾರ್ ಆಟಗಾರರ ಬಗ್ಗೆ ಅಭಿಮಾನಿಗಳ ಕ್ರೇಜ್ ಕೂಡಾ ಹೆಚ್ಚಾಗುತ್ತಿದೆ. ಅದರಲ್ಲೂ ಮಹಿಳಾ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಇತ್ತೀಚೆಗೆ ನಡೆಸಲಾದ ಸಮೀಕ್ಷೆ ಪ್ರಕಾರ ಭಾರತದ ಮಹಿಳೆಯರಿಗೆ ಮೆಸ್ಸಿ ಹಾಗೂ ರೊನಾಲ್ಡೊ ಇಬ್ಬರಲ್ಲಿ ಯಾರು ಇಷ್ಟ ಎಂಬುದು ಈಗ ಬಹಿರಂಗಗೊಂಡಿದೆ.

ಅರ್ಜೆಂಟಿನಾದ ಮೆಸ್ಸಿ ಹಾಗೂ ಪೋರ್ಚುಗಲ್ ನ ರೊನಾಲ್ಡೊ ಇಬ್ಬರ ನಡುವೆ ಫುಟ್ಬಾಲ್ ಕ್ಲಬ್, ದೇಶ, ಹಣ ಗಳಿಕೆ, ಜನಪ್ರಿಯರೆ ವಿಷಯದಲ್ಲಿ ಪೈಪೋಟಿ ನಡೆದೇ ಇದೆ. ಇದರ ಜತೆಗೆ ಯಾರು ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬ ಕುತೂಹಲವನ್ನು ಈ ಸಮೀಕ್ಷೆ ತಣಿಸುತ್ತದೆ. ಶಾದಿ.ಕಾಂ ನಡೆಸಿದ ಸಮೀಕ್ಷೆ ಪ್ರಕಾರ ರೋನಾಲ್ಡೊಗಿಂತ ಲಿಯಾನೆಲ್ ಮೆಸ್ಸಿ ಪರ ಭಾರತೀಯ ಮಹಿಳೆಯರು ವೋಟ್ ಹಾಕಿದ್ದರಂತೆ.[ಫೀಫಾ ವಿಶ್ವಕಪ್ 2014 ಸುದ್ದಿಗಳ ಕಿಕ್]

Messi most popular among Indian women: Survey

ಶಾದಿ,ಕಾಂ ಕೂಡಾ ಸ್ವಲ್ಪ ಜಾಣತನ ಉಪಯೋಗಿಸಿ ಮದುವೆಯಾಗದ ಕನ್ಯೆಯರಿಗೆ ಮಾತ್ರ ವೋಟ್ ಮಾಡಲು ಅವಕಾಶ ನೀಡಿತ್ತು. ಆನ್ ಲೈನ್ ಮತದಾನ ಮುಗಿದು ಫಲಿತಾಂಶ ಹೊರ ಬಂದಿದ್ದು, ಮೆಸ್ಸಿಗೆ ಪರ ಶೇ 59.6 ರಷ್ಟು ಮತ ಬಿದ್ದಿದೆ. ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೋಗೆ ಶೇ 53.4ರಷ್ಟು ಮತ ಬಂದಿವೆ. ಇಂಗ್ಲೆಂಡ್ ಹಾಗೂ ಮ್ಯಾಚೆಂಸ್ಟರ್ ಯುನೈಟೆಡ್ ಹೀರೋ ವೇಯ್ನ್ ರೂನಿ ಶೇ 51.5ರಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಜನಪ್ರಿಯ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಕೆಲ ಮಾಜಿ ಆಟಗಾರರು ಇದ್ದು, ಬ್ರೆಜಿಲ್ಲಿನ ಮಿಡ್ ಫೀಲ್ಡರ್ ರಿಕಾರ್ಡೋ ಕಾಕಾರನ್ನು ಅತ್ಯಂತ ಸ್ಪುರದ್ರೂಪಿ ಫುಟ್ಬಾಲ್ ಆಟಗಾರ ಎಂದು ಶೇ 49.3 ರಷ್ಟು ಯುವತಿಯರು ಕರೆದಿದ್ದಾರೆ. ಈ ಬಾರಿ ವಿಶ್ವಕಪ್ ನ ಭರವಸೆಯ ಅಟಗಾರ ನೇಮಾರ್ ಜ್ಯೂ. ಹಾಗೂ ಸ್ಪೇನಿನ ಫರ್ನಾಂಡೋ ಟೊರೆಸ್ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಹಳೆ ಆಟಗಾರರ ಪೈಕಿ ಇಂಗ್ಲೆಂಡಿನ ಡೇವಿಡ್ ಬೆಕ್ ಹ್ಯಾಮ್ ಗೆ ಶೇ 48.2%, ಇಟಲಿಯ ಮಾಲ್ಡಿನಿಗೆ 31.3%, ಫ್ರಾನ್ಸಿನ ಜಿನದಿನ್ ಜಿದಾನೆ ಇದ್ದಾರೆ. ಫುಟ್ಬಾಲ್ ಜಗತ್ತಿನ ಸೆಲೆಬ್ರಿಟಿ ದಂಪತಿಗಳ ಪೈಕಿ ಡೇವಿಡ್ ಬೆಕ್ ಹ್ಯಾಮ್ ಹಾಗೂ ಮಾಜಿ ಸ್ಪೈಸ್ ಗರ್ಲ್ ವಿಕ್ಟೋರಿಯಾ ಟಾಪ್ ಸ್ಥಾನ ಗಳಿಸಿದ್ದರೆ, ಸ್ಪೇನಿನ ಆಟಗಾರ ಗೆರಾಡ್ ಪಿಕೆ ಹಾಗೂ ಪಾಪ್ ದೇವತೆ ಶಕೀರಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಕ್ರಿಶ್ಚಿಯಾನೋ ರೊನಾಲ್ಡೋ ಹಾಗೂ ಇರಿನಾ ಶಾಂಕ್ ಶೇ 23.5 ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಸುಮಾರು 4000ಕ್ಕೂ ಅಧಿಕ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಈ ಸಮೀಕ್ಷೆಯಲ್ಲಿ ಮತದಾನ ಮಾಡಿದ್ದರು. ವಿವಾಹಿತ ಮಹಿಳೆಯರು ಕುಟುಂಬದಲ್ಲಿ ಕೂತು ನೋಡಲು ಫುಟ್ಬಾಲ್ ವಿಶ್ವಕಪ್ ಗಿಂತ ಐಪಿಎಲ್ ಬೆಸ್ಟ್ ಎಂದಿದ್ದಾರೆ. ಐಪಿಎಲ್ ಗೆ 54.4% ವೋಟ್ ಬಿದ್ದಿದ್ದರೆ, ಫೀಫಾಗೆ 39.5% ಮತ ಸಿಕ್ಕಿದೆ ಎಂದು ಶಾದಿ.ಕಾಮ್ ನ ಸಿಒಒ ಗೌರವ್ ರಕ್ಷಿತ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+