ಚಿತ್ರ ಸಂಪುಟ: ಸುದ್ದಿಯಾದರೂ ಸದ್ದು ಮಾಡದ ಸುದ್ದಿಗಳು
ದಿನ ನಿತ್ಯದ ಸುದ್ದಿಗಳ ಪ್ರವಾಹಕ್ಕೆ ಬೊಗಸೆಯೊಡ್ಡುವ ಆಸಕ್ತರಿಗೆ ಸಿಗುವುದು ಗಟ್ಟಿ ಸುದ್ದಿಗಳಷ್ಟೇ. ಓದುಗರ ಕೈಗೆ ಸಿಗದೇ ದೂರ ಹೋಗಿರುವ ಅಂಥ ಕೆಲವಾರು ಉತ್ತಮ ಸುದ್ದಿಗಳನ್ನು ಹೆಕ್ಕಿ ತಂದು ನಿಮ್ಮ ಮುಂದಿಟ್ಟಿದ್ದೇವೆ.
ಹಲವಾರು ಸುದ್ದಿಗಳ ಆರ್ಭಟದಲ್ಲಿ ಕೆಲವು ಮನಮೋಹಕ ಸುದ್ದಿಗಳು, ಫೋಟೋಗಳು ಓದುಗರ ಗಮನಕ್ಕೆ ಬರದಿರುವ ಸಾಧ್ಯತೆಗಳೇ ಹೆಚ್ಚು.
ಇಂಥ ಸುದ್ದಿಗಳನ್ನು ಸೂಕ್ತ ಫೋಟೋಗಳೊಂದಿಗೆ ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುವ ನಮ್ಮ ಪ್ರಯತ್ನ ಎಂದಿಗೂ ಮುಂದುವರಿಯಲಿದೆ. ನಮ್ಮ ಓದುಗರಿಗೆ ಕಳೆದು ಹೋದ ಸುದ್ದಿಗಳ ಕನಿಷ್ಠ ಒನ್ ಲೈನ್ ಸುದ್ದಿಯನ್ನಾದರೂ ತಲುಪಿಸಬೇಕೆಂಬ ಉದ್ದೇಶ ನಮ್ಮದು.
ಹಾಗಾಗಿಯೇ, ಶುಕ್ರವಾರ ನಡೆದ ನಾನಾ ಸುದ್ದಿಗಳ ನಡುವೆ ಸದ್ದಿಲ್ಲದೆ ಕರಗಿ ಹೋದ ಕೆಲ ಸುದ್ದಿಗಳ ಝಲಕ್ ಇಲ್ಲಿ ನೀಡಲಾಗಿದೆ. ಇವುಗಳಲ್ಲಿ, ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಅವರ ಮದುವೆಯ ಆರತಕ್ಷಣೆ ಸಮಾರಂಭದ ಆರತಕ್ಷತೆಯ ಫೋಟೋಗಳು, ಕರಾಚಿಯಲ್ಲಿ ಮೇಲಿಂದ ಮೇಲೆ ನಡೆದ ಬಾಂಬ್ ಸ್ಫೋಟಗಳಿಂದಾಗಿ ಶಾಂತವಾಗಿ ನಮಾಜ್ ಅನ್ನೂ ಸಲ್ಲಿಸಲಾಗದ ಅಲ್ಲಿನ ಜನರ ಆತಂಕ, ದೂರದ ಅಮೆರಿಕದ ಉದ್ಯಾನವನದಲ್ಲಿ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ತಮ್ಮ ಮೊಮ್ಮಕ್ಕಳೊಂದಿಗೆ ಜಾಲಿಯಾಗಿ ಸುತ್ತಾಡಿದ ಟ್ರಂಪ್ ಅವರ ಫೋಟೋ ಪ್ರಮುಖವಾದವು.

ಮಕ್ಕಳೊಂದಿಗೆ ಜೀವನ
ಇಟಲಿಯ ವಾನ್ ಬ್ರೆಮೊದಲ್ಲಿರುವ ಕಾರ್ನೆಲೇ ವನ್ಯ ಜೀವಿ ಸಂರಕ್ಷಣಾ ತಾಣದಲ್ಲಿ ತನ್ನ ಮಕ್ಕಳೊಂದಿಗೆ ನೀರಿನಲ್ಲಿರುವ ನೀರಾನೆ ಛಾಯಾಗ್ರಾಹಕನ ಕಣ್ಣ್ಮನ, ಕ್ಯಾಮೆರಾವನ್ನೂ ಸೆಳೆದಿದ್ದು ಹೀಗೆ.

ಅದ್ಧೂರಿ ಆರತಕ್ಷತೆ
ಇತ್ತೀಚೆಗೆ ಮದುವೆಯಾದ ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಹಾಗೂ ರುಕ್ಮಿಣಿ ಅವರ ಮದುವೆಯ ಆರತಕ್ಷತೆ ಮುಂಬೈನಲ್ಲಿ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಆಗ ನವ ದಂಪತಿಗಳು ಕಂಗೊಳಿಸಿದ್ದು ಹೀಗೆ.

ಸಮಾರಂಭಕ್ಕೊಂದು ಕಳೆ
ಬಾಲಿವುಡ್ ನ ಮೇರು ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪತ್ನಿ ಜಯಾ ಬಚ್ಚನ್ ಅವರು, ನೀಲ್ ನಿತಿನ್ ಮುಖೇಶ್ ಹಾಗೂ ರುಕ್ಮಿಣಿ ಅವರ ಆರತಕ್ಷತೆ ಸಮಾರಂಭಕ್ಕೆ ಬಂದು ಶುಭ ಹಾರೈಸಿದರು.

ತತ್ತರಿಸಿದವರ ಮುಷ್ಕರ
ದಕ್ಷಿಣ ಪಾಕಿಸ್ತಾನದ ಸೂಫಿ ಪಂಗಡದ ಪ್ರಾರ್ಥನಾ ಸ್ಥಳದ ಮೇಲೆ ಇತ್ತೀಚೆಗೆ ನಡೆದ ಆತ್ಮಾಹುತಿ ದಾಳಿಯ ವಿರುದ್ಧ ಕರಾಚಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಆ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಎಲ್ಲೆಲ್ಲೂ ಬಿಗಿ ಬೆಂಗಾವಲು
ಪಾಕಿಸ್ತಾನದಲ್ಲಿ ಮೇಲಿಂದ ಮೇಲೆ ಉಂಟಾಗುತ್ತಿರುವ ಬಾಂಬ್ ದಾಳಿಯಿಂದಾಗಿ ಅಲ್ಲಿನ ಜನರಿಗೆ ಶಾಂತಿಯಿಂದ ಪ್ರಾರ್ಥನೆ ಸಲ್ಲಿಸಲೂ ಆಗದಂಥ ಭೀತಿಗೆ ಸಿಲುಕಿದ್ದಾರೆ. ಹಾಗಾಗಿ, ನಮಾಜ್ ನಡೆಯುವ ಸ್ಥಳಗಳಲ್ಲೆಲ್ಲಾ ಭದ್ರತೆಯನ್ನು ನಿಯೋಜಿಸಲಾಗಿದೆ.

ಜನಜೀವನ ಅಸ್ತವ್ಯಸ್ಥ
ಶುಕ್ರವಾರದಲ್ಲಿ ಕ್ಯಾಲಿಫೋರ್ನಿಯಾದ ಸಾಲಿನಾಸ್ ನಲ್ಲಿ ತೂಫಾನು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಜನ ಸಾಮಾನ್ಯರು ತೀವ್ರ ತೊಂದರೆಗೀಡಾಗಿದ್ದಾರೆ. ಸಾಲಿನಾಸ್ ನಲ್ಲಿ ಕೆಲವು ಕಾರುಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಹೀಗೆ.

ನರ್ಮದಾ ತೀರದ ಅತಿಥಿಗಳು
ಜಭಲ್ ಪುರದಲ್ಲಿನ ನರ್ಮದಾ ನದಿ ತೀರಕ್ಕೆ ವಲಸೆ ಬಂದಿರುವ ಸೈಬೀರಿಯಾದ ಹಕ್ಕಿಗಳ ಕಲರವ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಹಾದಿತಪ್ಪಿದ ಯುವಕರ ಅಟ್ಟಹಾಸ
ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಕೆಲ ದಿನಗಳಿಂದ ಮಾಯವಾಗಿದ್ದ ಗಲಭೆ ಮತ್ತೆ ಪ್ರತ್ಯಕ್ಷವಾಗಿತ್ತು. ಇದನ್ನು ಹತ್ತಿಕ್ಕಲು ಪ್ರಯತ್ನಿಸಿದ ಸೇನೆಯ ವಿರುದ್ಧ ಅಲ್ಲಿನ ಗಲಭೆಕೋರರು ಕಲ್ಲುಗಳಿಂದ ದಾಳಿ ನಡೆಸಿದ್ದು ಹೀಗೆ.

ರ್ಯಾಲಿಯಲ್ಲಿ ಆಜಂ ಖಾನ್ ಭಾಷಣ
ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆ ರಾಜ್ಯದ ಆಡಳಿತಾರೂಢ ಪಕ್ಷವಾದ ಸಮಾಜವಾದಿ ಪಕ್ಷದ ಸಚಿವ ಆಜಂ ಖಾನ್, ಅಲಾಹಾಬಾದ್ ನಲ್ಲಿ ನಡೆದ ತಮ್ಮ ಪಕ್ಷದ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

ಮೊಮ್ಮಕ್ಕಳೊಂದಿಗೆ ಟ್ರಂಪ್
ವಾಷಿಂಗ್ಟನ್ ನಲ್ಲಿನ ತಮ್ಮ ಅಧಿಕೃತ ನಿವಾಸ 'ವೈಟ್ ಹೌಸ್'ನ ಉದ್ಯಾನವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮೊಮ್ಮಕ್ಕಳಾದ ಅರಾಬೆಲ್ಲಾ ಕುಶ್ನೆರ್ ಹಾಗೂ ಜೋಸೆಫ್ ಕುಶ್ನೆರ್ ಜತೆ ಅಡ್ಡಾಡಿ ಖುಷಿ ಪಟ್ಟಿದ್ದು ಹೀಗೆ.












Click it and Unblock the Notifications