Chandrayaan-3: ಚಂದ್ರನ ಮೇಲೆ ಇಳಿಯಲು ಭಾರತಕ್ಕೆ 177 ಕಿಮೀ ಬಾಕಿ!

ಎಲ್ಲವೂ ಇಸ್ರೋ ಅಂದುಕೊಂಡ ರೀತಿಯೇ ನಡೆಯುತ್ತಿದೆ, ಭಾರತದ ಮಹತ್ವದ ಮಿಷನ್ ಇನ್ನೇನು ತನ್ನ ಗುರಿ ತಲುಪಲು ಕೊನೇ ಹಂತಕ್ಕೆ ಬಂದಿದೆ. 'ಚಂದ್ರಯಾನ-3' ಕಕ್ಷೆಯನ್ನ ಮತ್ತೊಂದು ಹಂತಕ್ಕೆ ಏರಿಸುವ ಪ್ರಕ್ರಿಯೆ ಸಕ್ಸಸ್ ಆಗಿದ್ದು, ಈಗ ಚಂದ್ರನ ಮೇಲ್ಮೈಯಿಂದ ನಮ್ಮ ಭಾರತದ ನೌಕೆ ಕೇವಲ 177 ಕಿಲೋ ಮೀಟರ್ ಎತ್ತರದಲ್ಲಿ ಹಾರಾಡುತ್ತಿದೆ.

ಈಗಾಗಲೇ ಹಲವಾರು ಬಾರಿ ಕಕ್ಷೆ ಎತ್ತರಿಸುವ ಕಾರ್ಯದಲ್ಲಿ ಇಸ್ರೋ ಯಶಸ್ಸು ಕಂಡಿದ್ದು ಈಗ ಮತ್ತೊಮ್ಮೆ ಸಕ್ಸಸ್ ಆಗಿದೆ. ಆಗಸ್ಟ್ 23ರ ಅಂತಿಮ ಹೋರಾಟಕ್ಕೆ ಸಿದ್ಧತೆ ನಡೆಸಿರುವ ಭಾರತೀಯರ ಹೆಮ್ಮೆ ಇಸ್ರೋ ಸಂಸ್ಥೆ ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನು ಆಗಸ್ಟ್ 16ಕ್ಕೆ ಇಸ್ರೋ ಇನ್ನೊಂದು ಸುತ್ತಿನ ಕಾರ್ಯಾಚರಣೆ ನಡೆಸಲಿದೆ. ಆಗ ನೌಕೆ ಚಂದ್ರನ ಮೇಲ್ಮೈ ಮೇಲೆ ಅತಿ ಹತ್ತಿರದಲ್ಲೇ ಹಾರಾಟ ನಡೆಸಲಿದೆ. ಇದಾದ ಬಳಿಕ ಅಂತಿಮ ಹಂತದ ಕ್ಷಣಕ್ಕೆ ಕೌಂಟ್‌ಡೌನ್ ಶುರುವಾಗಲಿದ್ದು ಆಗಸ್ಟ್ 23ರಂದು ಶತಕೋಟಿ ಭಾರತೀಯರು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಡುತ್ತದೆ.

chandrayaan-3-to-reach-moon-surface

ರಷ್ಯಾ ನೌಕೆ ಜೊತೆ ಭಾರತದ ಪೈಪೋಟಿ?

ಇನ್ನು ಒಂದ್ಕಡೆ ಭಾರತ ತನ್ನ ಚಂದ್ರನ ನೌಕೆಯನ್ನ ಆಗಸಕ್ಕೆ ಬಿಟ್ಟು ರೋವರ್ ಲ್ಯಾಂಡ್ ಮಾಡಲು ತಯಾರಿ ನಡೆಸಿದೆ. ಇತ್ತ ರಷ್ಯಾ ಕೂಡ ಅದೇ ಕೆಲಸಕ್ಕೆ ಮುಂದಾಗಿದ್ದು, ರಷ್ಯಾ ನಿರ್ಮಿತ ನೌಕೆ ಭಾರತದ ನೌಕೆಗಿಂತ ವೇಗವಾಗಿ ಚಂದ್ರನ ಮೇಲೆ ತಲುಪುವ ನಿರೀಕ್ಷೆ ಇದೆ. ಆದರೆ ಅತಿ ಕಡಿಮೆ ವೆಚ್ಚದಲ್ಲಿ ಈ ಸಾಧನೆ ಮಾಡಿದ ಕೀರ್ತಿ ಮಾತ್ರ ಭಾರತ & ಭಾರತದ ವಿಜ್ಞಾನಿಗಳಿಗೆ ಸಲ್ಲುತ್ತದೆ. ರಷ್ಯಾ ಜೊತೆಗಿನ ಪೈಪೋಟಿಯನ್ನು ಕ್ರೀಡಾ ಸ್ಫೂರ್ತಿಯಿಂದಲೇ ಸ್ವೀಕರಿಸಿರುವ ಭಾರತ, ಈಗಾಗಲೇ ರಷ್ಯಾ ನೌಕೆಗೆ ಶುಭಾಶಯ ಕೋರಿ ಗಮನ ಸೆಳೆದಿತ್ತು.

ಎರಡೆರಡು ರೋವರ್ ಚಂದ್ರನ ಮೇಲೆ

ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ 'ಚಂದ್ರಯಾನ-3' ಲಾಂಚ್ ಆಗಿತ್ತು. ಬಳಿಕ ಭೂ ಕಕ್ಷೆಯಿಂದ ಒಂದೊಂದೇ ಹಂತದಲ್ಲಿ ಚಂದ್ರಯಾನ-3 ನೌಕೆ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿತ್ತು. ಈಗ ಚಂದ್ರನ ಸಮೀಪ ಇಸ್ರೋ ನೌಕೆ ಸಾಗುತ್ತಿದ್ದಂತೆ ಕಕ್ಷೆ ಬದಲಿಸುವ ಕಾರ್ಯ ಅದ್ಧೂರಿಯಾಗಿ ನಡೆಯುತ್ತಿದೆ. ಇಸ್ರೋ 'ಚಂದ್ರಯಾನ-3' ನೌಕೆ ಇನ್ನಷ್ಟು ಹತ್ತಿರವಾಗಿದೆ. ಶತಕೋಟಿ ಭಾರತೀಯ ಹೃದಯಗಳ ಕನಸು ನನಸಾಗುವ ಸಮಯ ಬಂದುಬಿಟ್ಟಿದೆ. ಈ ಮೂಲಕ ಜಗತ್ತು ಒಟ್ಟಿಗೆ ಎರಡೆರಡು ರೋವರ್ ಚಂದ್ರನ ಮೈಮೇಲೆ ಇಳಿಯುವುದನ್ನ ನೋಡಬಹುದಾಗಿದೆ.

chandrayaan-3-to-reach-moon-surface

ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ.

ಬಾಹ್ಯಾಕಾಶ ಜಗತ್ತಿನಲ್ಲಿ ಭಾರತ ನಡೆದು ಬಂದಿದ್ದೇ ಒಂದು ರೋಚಕ ಕಹಾನಿ. ರಷ್ಯಾ & ಅಮೆರಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಿಂಗ್ ಆಗಿ ಮೆರೆದಿದ್ದವು. ಆದ್ರೆ ಈಗ ಭಾರತ ಕೂಡ ಆ ಸ್ಥಾನಕ್ಕೆ ಪೈಪೋಟಿ ನೀಡುತ್ತಿದೆ. ಅದ್ರಲ್ಲು ಅಮೆರಿಕದ ನಾಸಾ ಸಂಸ್ಥೆಗೆ ಇಸ್ರೋ ಕೆಪಾಸಿಟಿ ಏನೆಂದು ಅರ್ಥವಾಗುತ್ತಿದೆ. ನಾಸಾ ಮಾತ್ರವಲ್ಲದೆ ಜಗತ್ತಿನ ಬಹುತೇಕ ಎಲ್ಲ ದೇಶಕ್ಕೂ ಈ ವಿಚಾರದಲ್ಲಿ ಭಾರತದ ಗತ್ತು ಗೊತ್ತಾಗಿದೆ. ತನ್ನ ಸಾಮಾರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೇ ತೋರಿಸಲು ಭಾರತ ಇನ್ನೂ 8 ದಿನ ಕಾಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+