ಭಾರತದಲ್ಲೂ ಪಡೆಯಿರಿ ಫಾರಿನ್ ವೇತನ
ಮುಂಬೈ, ಡಿ. 3 : ಸಾಮಾಜಿಕ ಜಾಲತಾಣ ಫೇಸ್‌ಬುಕ್ ಭಾರತದ ವಿದ್ಯಾರ್ಥಿಗಳಿಗೆ ನೀಡಿರುವ ಆಫರ್ ಕೇಳಿದರೆ ಒಂದು ಕ್ಷಣ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಲೇಬೇಕು. ಮೂರು ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವ ಫೇಸ್ ಬುಕ್ ವಾರ್ಷಿಕ ಬರೋಬ್ಬರಿ 1.42 ಕೋಟಿ ರೂ. ನೀಡುವುದಾಗಿ ಹೇಳಿದೆ.
ಕ್ಯಾಂಪಸ್ ಮೂಲಕ ಮುಂಬೈ ಮತ್ತು ಖರಗ್‌ಪುರದ ಐಐಟಿ ವಿದ್ಯಾರ್ಥಿಗಳನ್ನು ಸೆಲೆಕ್ಷನ್ ಮಾಡಿಕೊಂಡಿರುವ ಫೇಸ್ ಬುಕ್ ನೀಡಿರುವ ವಾರ್ಷಿಕ ವೇತನದ ಲೆಕ್ಕ ಎಲ್ಲರನ್ನು ಬೆಚ್ಚಿ ಬೀಳಿಸಿರುವುದು ಸತ್ಯ.[ಐಐಟಿ ವಿದ್ಯಾರ್ಥಿಗೆ 91 ಲಕ್ಷ ರು ಸಂಬಳ!]

ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರಿಗೆ ಈ ಭಾಗ್ಯ ಒದಗಿ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿಗೆ ಗೂಗಲ್ 65 ಲಕ್ಷ ರೂ. ಮೂಲ ವೇತನ ನೀಡಲಿದೆ. ಅಲ್ಲದೇ ಇನ್ನಿತರ ಸೌಲಭ್ಯಗಳು ದೊರೆಯಲಿವೆ.
ಒಟ್ಟಿನಲ್ಲಿ ಐಐಟಿ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿ ನಿರತರಿಗೆ ಅತಿ ಹೆಚ್ಚಿನ ಬೇಡಿಕೆ ಬಂದಿದೆ. ಅಲ್ಲದೇ ಅಷ್ಟೇ ಪ್ರಮಾಣದ ವೇತನವನ್ನು ನೀಡಲಾಗುತ್ತಿದೆ. ಇದು ಕೇವಲ ಗೂಗಲ್ ಅಥವಾ ಫೇಸ ಬುಕ್ ಗೆ ಸೀಮಿತವಾಗಿಲ್ಲ.[ಐಐಟಿ ಪ್ರವೇಶಿಸಿದ ಬಿಹಾರದ ಸಾಧಕರು]
ಅಮೆಜಾನ್, ಸ್ಯಾಮ್ ಸಂಗ್, ಯಾಹೂ ಜಪಾನ್ ಸೇರಿದಂತೆ ಮುಂದಾದ ಇ ಕಾಮರ್ಸ್ ಕಂಪನಿಗಳು ಅತಿ ಹೆಚ್ಚಿನ ವೇತನ ಆಫರ್ ಮಾಡುತ್ತಿವೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆನ್ ಲೈನ್ ಸಂಸ್ಥೆಗಳು ಹೊಸ ಕ್ರಾಂತಿಗೆ ನಾಂದಿ ಹಾಡುವ ಲಕ್ಷಣಗಳು ದಟ್ಟವಾಗುತ್ತಿವೆ.












Click it and Unblock the Notifications