ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ನಿಧನ

Jani Chacko Passed Away: ಪದ್ಮಭೂಷಣ ಪುರಸ್ಕೃತ ಪಾಪ್ ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೋ ಉತ್ತುಪ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಾನಿ ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಟಿವಿ ನೋಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದಿದ್ದು, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Famous singer Usha Uthup s husband passed away

ಜಾನಿ ಚಾಕೋ ಅವರು ಉಷಾ ಉತ್ತುಪ್ ಅವರ ಎರಡನೇ ಪತಿ ಆಗಿದ್ದು, ಟೀ ಪ್ಲಾಂಟೇಶನ್‌ ನೋಡಿಕೊಳ್ಳುತ್ತಿದ್ದರು. 1970ರಲ್ಲಿ ಐಕಾನ್ ಟ್ರಿನ್ಕಸ್‌ನಲ್ಲಿ ಇವರಿಬ್ಬರು ಮೊದಲು ಭೇಟಿ ಆಗಿದ್ದು, ಇವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಇನ್ನು ಜಾನಿ ಚಾಕೋ ಅವರ ಅಂತ್ಯಕ್ರಿಯೆ ಜುಲೈ 9ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

ಉಷಾ ಅವರ ಮೊದಲ ಪತಿ ಹೆಸರು ರಾಮು. ಅವರು ಮದುವೆಯಾದ ಕೆಲವೇ ವರ್ಷಗಳಲ್ಲಿ ನಿಧನರಾಗಿದ್ದರು. ನಂತರ, ಉಷಾ ಅವರು ಜಾನಿಯವರನ್ನು ಮದುವೆ ಆಗಿದ್ದರು. ಜಾನಿಯವರು ಕೇರಳದ ಕೊಟ್ಟಾಯಂ ಮೂಲದವರಾಗಿದ್ದು, ಪಶ್ಚಿಮ ಬಂಗಾಳದಲ್ಲಿ ನೆಲಸಿದ್ದವರು. ಅಂದಹಾಗೆ, ಉಷಾ ಅವರು ಹುಟ್ಟಿದ್ದು ಮುಂಬೈನಲ್ಲಿ ನೆಲೆಸಿದ್ದ ತಮಿಳು ಐಯ್ಯರ್ ಕುಟುಂಬವೊಂದರಲ್ಲಿ. ಅವರ ತಂದೆಯ ಹೆಸರು, ವೈದ್ಯನಾಥ್ ಸೋಮೇಶ್ವರ ಸ್ವಾಮಿ ಅಯ್ಯರ್.

ಬಾಲ್ಯದಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತವನ್ನು ಕರಗತ ಮಾಡಿಕೊಂಡಿದ್ದ ಉಷಾ ಅವರು ಮುಂದೆ ಪಾಪ್ ಸಂಗೀತವನ್ನು ತಮ್ಮ ಹವ್ಯಾಸವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಭಾರತೀಯ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತದ ಫ್ಯೂಷನ್ ಮಾದರಿಯಲ್ಲಿ ಅವರು ಹಾಡುತ್ತಿರುವುದೇ ಅವರ ವಿಶೇಷತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+