Fake News: 5 ಹಂತದ ಲಾಕ್ಡೌನ್ ರಿಲೀಸ್ ಮಾರ್ಗಸೂಚಿ?

ನವದೆಹಲಿ, ಮೇ 13: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇದರಲ್ಲಿ ಮುಖ್ಯವಾದದ್ದು, ಲಾಕ್ ಡೌನ್. 21 ದಿನಗಳ ಲಾಕ್ ಡೌನ್ ಸದ್ಯ ದೇಶದಲ್ಲಿ ಜಾರಿಯಲ್ಲಿದ್ದಾಗ ಬಂದ ಸುಳ್ಳು ಸುದ್ದಿ ಮತ್ತೊಮ್ಮೆ ಬೇರೆ ರೀತಿಯಲ್ಲಿ ಹಬ್ಬುತ್ತಿದೆ. ಸದ್ಯ ಮೇ 17ರಂದು ಮೂರನೇ ಹಂತದ ಲಾಕ್ಡೌನ್ ಮುಗಿದು ನಾಲ್ಕನೆ ಹಂತದ ಲಾಕ್ಡೌನ್ ಆರಂಭವಾಗಬೇಕಿದೆ.

ಪ್ರಧಾನಿ ಮೋದಿ ಅವರು ಹೇಳಿದಂತೆ ನಾಲ್ಕನೇ ಹಂತದ ಲಾಕ್ಡೌನ್ ರಿಲೀಸ್ ಮಾರ್ಗಸೂಚಿ ಪ್ರಕಟವಾಗಬೇಕಿದೆ. ಆದರೆ, ಅಷ್ಟರಲ್ಲೇ ದುಷ್ಕರ್ಮಿಗಳು 5 ಹಂತದಲ್ಲಿ ಲಾಕ್ಡೌನ್ ನಿಂದ ಹೊರಬರುವ ರೋಡ್ ಮ್ಯಾಪ್ ಸಿದ್ಧವಿದೆ. ಈ ಮಾರ್ಗ ಸೂಚಿ ಬಳಸಿ ಎಂದು ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ. ಆದರೆ, ಇದೆಲ್ಲವನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ.

ಲಾಕ್ ಡೌನ್ ಹೇಗೆ ನಿಭಾಯಿಸಬೇಕು, ಹಂತ ಹಂತವಾಗಿ ಹೇಗೆ ಜಾರಿಗೊಳಿಸಬೇಕು ಎಂಬ ನಿರ್ದೇಶನವನ್ನು ಕೇಂದ್ರ ಗೃಹ ಸಚಿವಾಲಯ ಮಾತ್ರ ನೀಡಲಿದ್ದು, ರಾಜ್ಯ ಸರ್ಕಾರಗಳು ಕೊಂಚ ಬದಲಾವಣೆ ಮಾಡಿಕೊಳ್ಳಬಹುದು.

ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ

ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ

ನಾಲ್ಕು ಹಂತದ ಲಾಕ್ ಡೌನ್ ಕುರಿತ ವಾಟ್ಸಾಪ್ ಸಂದೇಶ, ಟ್ವೀಟ್, ಫೇಸ್ಬುಕ್ ಪೋಸ್ಟ್ ಬಂದರೆ ತಕ್ಷಣವೇ ಎಚ್ಚರವಾಗಿ, ಏಕೆಂದರೆ, ಲಾಕ್ ಡೌನ್ ಕುರಿತಂತೆ ಯಾವುದೇ ಆದೇಶ ಬಂದರೂ ಪ್ರಧಾನಿ ಮೋದಿ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾತ್ರ ಘೋಷಣೆ ನಿರೀಕ್ಷಿಸಬಹುದು. ಟ್ವಿಟ್ಟರ್ ನಲ್ಲಿ PIB Check ಖಾತೆಯಲ್ಲಿ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.

ಲಾಕ್ಡೌನ್ ವಿಸ್ತರಣೆ ಬಗ್ಗೆ ಹಿಂದಿನ ಸುಳ್ಳು ಸುದ್ದಿ

ಲಾಕ್ಡೌನ್ ವಿಸ್ತರಣೆ ಬಗ್ಗೆ ಹಿಂದಿನ ಸುಳ್ಳು ಸುದ್ದಿ

ಈ ಹಿಂದಿನ ಸುಳ್ಳು ಸುದ್ದಿ: ಏಪ್ರಿಲ್ 15 ಹಾಗೂ ಏಪ್ರಿಲ್ 19 ಅವಧಿಯಲ್ಲಿ ಲಾಕ್ ಡೌನ್ ಇರುವುದಿಲ್ಲ. ಏಪ್ರಿಲ್ 20 ರಿಂದ ಮೇ 18ರ ಅವಧಿಯಲ್ಲಿ ಮತ್ತೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕೊರೊನಾವೈರಸ್ ಹರಡುವಿಕೆ ಪ್ರಗತಿ ಶೂನ್ಯ ಮುಟ್ಟುವ ತನಕ ಲಾಕ್ ಡೌನ್ ಅನಿವಾರ್ಯ ಎನ್ನಲಾಗಿತ್ತು. ಮುಂದುವರೆದು ಮೇ19 ರಿಂದ ಮೇ 24ರ ಅವಧಿಯಲ್ಲಿ ಲಾಕ್ ಡೌನ್ ಗೆ ವಿರಾಮ. ಮೇ 25 ರಿಂದ ಜೂನ್ 10ರ ಅವಧಿಗೆ ಕೊನೆಯ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು.

ಲಾಕ್ಡೌನ್ ವಿಸ್ತರಣೆ ಬಗ್ಗೆ ಹೊಸ ಸುಳ್ಳು ಸುದ್ದಿ

ಲಾಕ್ಡೌನ್ ವಿಸ್ತರಣೆ ಬಗ್ಗೆ ಹೊಸ ಸುಳ್ಳು ಸುದ್ದಿ

ಹೊಸ ಸುಳ್ಳು ಸುದ್ದಿ: ಮೇ 18ರಿಂದ ಮೊದಲ ಹಂತದ ಲಾಕ್ಡೌನ್ ಜೂನ್ 8ಕ್ಕೆ ಎರಡನೇ ಹಂತ, 29ನೇ ಜೂನ್ ಮೂರನೆ ಹಂತ, ಜುಲೈ 20ಕ್ಕೆ ನಾಲ್ಕನೇ ಹಂತ ಹಾಗೂ ಆಗಸ್ಟ್ 10ಕ್ಕೆ ಐದನೇ ಹಂತಕ್ಕೆ ಮುಕ್ತಾಯವಾಗಲಿದೆ.


ಮೂರು ವಾರಗಳ ಪರಿಶೀಲನಾ ಪ್ರಕ್ರಿಯೆ ಇರಲಿದ್ದು, ಕೊರೊನಾವೈರಸ್ ಸೋಂಕು ಪ್ರಮಾಣ ಅಧಿಕವಾದರೆ ಈ ಲಾಕ್ಡೌನ್ ಅವಧಿ ವಿಸ್ತರಣೆಯಾಗಲಿದೆ ಎಂಬ ಸುದ್ದಿ ಹಬ್ಬಿದೆ.

ಲಾಕ್ಡೌನ್ ವಿಸ್ತರಣೆ ಸತ್ಯಾಸತ್ಯತೆ

ಲಾಕ್ಡೌನ್ ವಿಸ್ತರಣೆ ಸತ್ಯಾಸತ್ಯತೆ

ಸತ್ಯಾಸತ್ಯತೆ: ಲಾಕ್ಡೌನ್ ವಿಸ್ತರಣೆ ಕುರಿತಂತೆ ಯಾವುದೇ ವಾಟ್ಸಾಪ್ ಸಂದೇಶವನ್ನು ನಂಬಬೇಡಿ. ಮೇ 18ರಂದು ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ರೆಡ್ ಅಲರ್ಟ್ ಘೋಷಿಸಿರುವ ರಾಜ್ಯ, ಜಿಲ್ಲೆಗಳಲ್ಲಿ ಕಂಟೈನ್ಮೆಂಟ್ ವಾರ್ಡ್ ಗಳಲ್ಲಿ ಕಠಿಣ ಲಾಕ್ ಡೌನ್ ಮುಂದುವರೆಯುವುದು ನಿಶ್ಚಿತವಾಗಿದೆ. ಮಿಕ್ಕಂತೆ, ಕೆಲ ರಾಜ್ಯಗಳಲ್ಲಿ ಸ್ವಲ್ಪ ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆಯಿದೆ. ಮೇ 17ಕ್ಕೆ ಮೂರನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದೆ. ನಾಲ್ಕನೇ ಹಂತದ ಲಾಕ್ಡೌನ್ ಬಗ್ಗೆ ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದಿಂದ ಮಾತ್ರ ಮಾರ್ಗಸೂಚಿ ನಿರೀಕ್ಷಿಸಿ. ಮಿಕ್ಕಂತೆ ಹೀಗೆ ಇರಬಹುದು ಎಂದು ಬರುವ ಯಾವ ಸುದ್ದಿಯನ್ನು ನಂಬಬೇಡಿ ಎಂದು ಪಿಐಬಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+