ಅಸ್ಸಾಂನಲ್ಲಿ ಉಪ್ಪಿಗೆ ಬರ ಎಂಬ ಸುದ್ದಿ ಶುದ್ಧ ಸುಳ್ಳು
ನವದೆಹಲಿ, ಏಪ್ರಿಲ್ 19: ಕೊರೊನಾವೈರಸ್ ಸೋಂಕು ಹರಡುವ ವೇಗಕ್ಕೆ ತಕ್ಕಂತೆ ಸುಳ್ಳು ಸುದ್ದಿ ಹಬ್ಬಿಸಿ, ಜನರಲ್ಲಿಆತಂಕ ಮೂಡಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಸ್ಸಾಂನಲ್ಲಿ ಉಪ್ಪು ದಾಸ್ತಾನು ಕಡಿಮೆಯಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದು, ಕೆಲಕಾಲದಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆದರೆ, ಉಪ್ಪು ಕೊರತೆ ಉಂಟಾಗಿಲ್ಲ ಎಂದು ಅಸ್ಸಾಂ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಉಪ್ಪು ದಾಸ್ತಾನು ಕಡಿಮೆಯಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂಬ ಸಂದೇಶವನ್ನು ಯಾರೋ ದುಷ್ಕರ್ಮಿಗಳು ಹಬ್ಬಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು ಯಾರೂ ಈ ರೀತಿ ಸುಳ್ಳು ಸುದ್ದಿ ನಂಬಿ ಮೋಸ ಹೋಗಬೇಡಿ ಎಂದು ಅಸ್ಸಾಂ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಅಸ್ಸಾಂನಲ್ಲಿ ಉಪ್ಪು ಸೇರಿದಂತೆ ಎಲ್ಲಾ ದಿನಸಿ ವಸ್ತುಗಳ ದಾಸ್ತಾನು ಅಗತ್ಯಕ್ಕಿಂತ ಹೆಚ್ಚಾಗಿದೆ. ಈ ರೀತಿ ಸುಳ್ಳು ಸುದ್ದಿ ನಂಬಿ ಯಾರೂ ಕೂಡಾ ಗಾಬರಿಯಾಗಬೇಕಿಲ್ಲ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ PIB Fact Check(@PIBFactCheck) ಅಧಿಕೃತ ಖಾತೆಯಲ್ಲಿ ಕೊರೊನಾವೈರಸ್ ಕುರಿತಂತೆ ಅಗತ್ಯ ಮಾಹಿತಿ, ಸುಳ್ಳು ಸುದ್ದಿಗಳ ಬಗ್ಗೆ ತಿಳಿಸಲಾಗುತ್ತದೆ. ಯಾವುದೇ ಸುದ್ದಿಯ ಸತ್ಯಾಸತ್ಯತೆಯನ್ನು ಒಮ್ಮೆ ಪರಿಶೀಲಿಸಿ ನಂತರ ಹಂಚಿಕೊಳ್ಳಿ, ಸಮೂಹ ಸನ್ನಿಗೆ ಒಳಗಾಗಿ ತಪ್ಪು ಸಂದೇಶವನ್ನು ಹರಡಬೇಡಿ ಎಂದು ಸರ್ಕಾರವು ನಾಗರೀಕರಲ್ಲಿ ಮನವಿ ಮಾಡಿದೆ.












Click it and Unblock the Notifications