ಫೇಸ್‌ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್‌ನಿಂದ ಬಂದ ಯುವತಿ

ಲಕ್ನೋ, ಜನವರಿ. 29: ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ಹೇಳುತ್ತಾರೆ ಇದಕ್ಕೆ ಇತ್ತಿಚಿನ ಉದಾಹರಣೆಯಾಗಿ ಸ್ವೀಡನ್ ಯುವತಿಯೋಬ್ಬರು ಭಾರತೀಯ ಯುವಕನ ಮೇಲಿನ ಪ್ರೀತಿಯಿಂದ ಉತ್ತರ ಪ್ರದೇಶಕ್ಕೆ ಬಂದಿರುವ ಘಟನೆ ನಡೆದಿದೆ.

ಸ್ವೀಡನ್‌ ಯುವತಿ ಕ್ರಿಸ್ಟನ್ ಲೀಬರ್ಟ್ ಎಂಬುವವರು ಉತ್ತರ ಪ್ರದೇಶದ ಇಟಾಹ್‌ನ ಸ್ಥಳೀಯ ನಿವಾಸಿ ಪವನ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದಾರೆ. ಊರಿನ ಜನರು ಇಬ್ಬರ ಪ್ರೀತಿ ನೋಡಿ ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಕ್ರಿಸ್ಟನ್ ಲೀಬರ್ಟ್ ಅವರು ಇಟಾಹ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಫೇಸ್‌ಬುಕ್‌ನಲ್ಲಿ ಭೇಟಿಯಾದ ಯುವಕ ಪವನ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Facebook love: Swedish woman Marry Uttar Pradesh Man

ಎಎನ್‌ಐ ಹಂಚಿಕೊಂಡಿರುವ ಮದುವೆಯ ವಿಡಿಯೋದಲ್ಲಿ ಯುವತಿ ಕ್ರಿಸ್ಟನ್ ಲೀಬರ್ಟ್, ಭಾರತೀಯ ಸಂಪ್ರದಾಯದ ಮದುವೆಯ ಉಡುಗೆಯಲ್ಲಿ ಯುವಕ ಪವನ್ ಕುಮಾರ್ ಅವರಿಗೆ ಹೂಮಾಲೆ ಧರಿಸುತ್ತಿರುವುದು ಕಾಣಬಹುದು.

ಕ್ರಿಸ್ಟನ್ ಲೀಬರ್ಟ್ 2012ರಲ್ಲಿ ಪವನ್ ಕುಮಾರ್ ಅವರನ್ನು ಫೇಸ್ ಬುಕ್ ನಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಉಮಟಾಗಿ ಅದು ಪ್ರೀತಿಗೆ ತಿರುಗಿತ್ತು. ಡೆಹ್ರಾಡೂನ್‌ನಲ್ಲಿ ಬಿ.ಟೆಕ್ ಮುಗಿಸಿರುವ ಪವನ್ ಕುಮಾರ್, ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು, ಇಬ್ಬರ ಮದುವೆಗೆ ಅವರ ಮನೆಯವರು ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಮಕ್ಕಳ ಸಂತೋಷದಲ್ಲಿ ನಮ್ಮ ಸಂತೋಷ ಅಡಗಿದೆ ಎಂದು ವರನ ತಂದೆ ಗೀತಮ್ ಸಿಂಗ್ ಹೇಳಿದ್ದು, "ಈ ಮದುವೆಗೆ ನಾವು ಸಂಪೂರ್ಣವಾಗಿ ಒಪ್ಪಿದ್ದೇವೆ" ಎಂದು ಹೇಳಿದ್ದಾರೆ.

Facebook love: Swedish woman Marry Uttar Pradesh Man

ಇತ್ತ, ಇಂತಹದ್ದೇ ಒಂದು ಪ್ರೇಮ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಪಾಕಿಸ್ತಾನದಿಂದ ಅಪ್ರಾಪ್ತ ಬಾಲಕಿಯನ್ನು ಕರೆತಂದಿದ್ದ ಪ್ರಕರಣ ವರದಿಯಾಗಿತ್ತು. ಪಾಕಿಸ್ತಾನದ ಅಪ್ರಾಪ್ತ ಬಾಲಕಿಯನ್ನು ನಕಲಿ ಗುರುತಿನ ಆಧಾರದಲ್ಲಿ ಕರೆತಂದು ಬೆಂಗಳೂರಿನಲ್ಲಿ ಅಕ್ರಮವಾಗಿ ಉಳಿಸಿಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಎಂಬ 26 ವರ್ಷದ ವ್ಯಕ್ತಿ , ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಲುಡೋ ಮೂಲಕ ಪಾಕಿಸ್ತಾನದ ಹೈದರಾಬಾದ್‌ನ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+