ಫೇಸ್‌ಬುಕ್ ಕಾರ್ಯನಿರ್ವಾಹಕಿ ಅಂಖಿ ದಾಸ್ ವಿಚಾರಣೆ ನಡೆಸಿದ ಸಂಸದೀಯ ಸಮಿತಿ

ನವದೆಹಲಿ, ಅಕ್ಟೋಬರ್ 23: ದ್ವೇಷ ಭಾಷಣಗಳ ನಿರ್ವಹಣೆ ವಿಚಾರದಲ್ಲಿ ಪಕ್ಷಪಾತಿ ಧೋರಣೆ ಅನುಸರಿಸಿದ ಆರೋಪ ಎದುರಿಸುತ್ತಿರುವ ಫೇಸ್‌ಬುಕ್ ಭಾರತದ ಕಾರ್ಯನಿರ್ವಾಹಕಿ ಅಂಖಿ ದಾಸ್ ಅವರನ್ನು ಸಂಸದೀಯ ಸಮಿತಿಯು ಶುಕ್ರವಾರ ಎರಡು ಗಂಟೆ ವಿಚಾರಣೆಗೆ ಒಳಪಡಿಸಿತು.

ಡೇಟಾ ಸಂರಕ್ಷಣೆ ವಿಚಾರದ ಕುರಿತು ಫೇಸ್‌ಬುಕ್‌ನ ನೀತಿ ವಿಭಾಗದ ಮುಖ್ಯಸ್ಥೆಯಾಗಿರುವ ಅಂಖಿ ದಾಸ್ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು ಎನ್ನಲಾಗಿದೆ.

ಜಾಹೀರಾತು, ವ್ಯವಹಾರ ಅಥವಾ ರಾಜಕೀಯ ತಾರ್ಕಿಕ ಉದ್ದೇಶಗಳಿಂದ ನಾಗರಿಕರ ವೈಯಕ್ತಿಕ ದತ್ತಾಂಶಗಳನ್ನು ತಾನು ಬಳಸುವಂತಿಲ್ಲ ಎಂದು ಫೇಸ್‌ಬುಕ್ ತಿಳಿಸಿತ್ತು. ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ತನ್ನ ಆದಾಯದಲ್ಲಿ ಎಷ್ಟು ಪ್ರಮಾಣವನ್ನು ವಿನಿಯೋಗಿಸುತ್ತಿದೆ ಎಂಬುದು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿದ್ದರು.

 Facebook India Executive Ankhi Das Questioned By Parliamentary Panel

ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿದ ಬಳಿಕ, 2019ರ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ ಅಡಿ ದತ್ತಾಂಶ ಸಂರಕ್ಷಣೆ ಮತ್ತು ಖಾಸಗಿತನಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಚರ್ಚಿಸಲು ಹಾಜರಾಗುವಂತೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಅಮೇಜಾನ್‌ಗಳಿಗೆ ಜಂಟಿ ಸಂಸದೀಯ ಸಮಿತಿ ಸೂಚಿಸಿತ್ತು.

ಟ್ವಿಟ್ಟರ್ ಮತ್ತು ಅಮೇಜಾನ್‌ಗಳು ಅಕ್ಟೋಬರ್ 28ರ ಒಳಗೆ ಹಾಜರಾಗಬೇಕಿದೆ. ತನ್ನ ಪರಿಣತರು ವಿದೇಶದಲ್ಲಿದ್ದು, ಕೋವಿಡ್ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಅಮೇಜಾನ್ ತಿಳಿಸಿದೆ. ಅಮೇಜಾನ್‌ನ ನಿರಾಕರಣೆಯು ಸವಲತ್ತಿನ ಉಲ್ಲಂಘನೆಯಾಗಲಿದೆ ಸಂಸತ್ತಿನ ಮೂಲಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+