ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ‘ಹ್ಯಾಟ್ರಿಕ್’ ಗ್ಯಾರಂಟಿ? ಪ್ರಧಾನಿ ಮೋದಿ ಸರ್ಕಾರಕ್ಕೆ ಮತ್ತೆ ಬಹುಮತ?

ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗಾಗಿ, 2024 ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ಹೀಗಾಗಿ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಶುರು ಮಾಡಿವೆ. ಎಲ್ಲಾ ರೀತಿಯಲ್ಲಿ ತಯಾರಿ ನಡೆಯುತ್ತಿರುವ ಸಮಯದಲ್ಲೇ, ಚುನಾವಣಾ ಸಮೀಕ್ಷೆಗಳು 2024 ರ ಲೋಕಸಭೆ ಚುನಾವಣೆ ಬಗ್ಗೆ ಏನು ಭವಿಷ್ಯ ನುಡಿದಿವೆ? ಕೇಂದ್ರದಲ್ಲಿ ಗೆಲುವು ಯಾವ ಪಕ್ಷಕ್ಕೆ?

2024ರ ಲೋಕಸಭೆ ಚುನಾವಣೆ ತಕ್ಷಣ ಅಂದರೆ ಈಗಲೇ ನಡೆದರೆ ಈಗಿನ ಪರಿಸ್ಥಿತಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಲಿದೆ? ಯಾರಿಗೆ ಎಷ್ಟು ಸೀಟ್ ಸಿಗಬಹುದು? ಎಂಬೆಲ್ಲ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅದರಲ್ಲೂ ಈ ಬಾರಿಯ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮಾಡು, ಇಲ್ಲವೇ ಮಡಿ ಹೋರಾಟ. ಒಂದು ಕಡೆ ದೇಶದಲ್ಲಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ಗೆ ಈಗ 10 ವರ್ಷ ಮುಗಿದಿದೆ. ಹಾಗೇ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಇದೆ. ಹೀಗಾಗಿ ತಿಕ್ಕಾಟ ಬಲು ಜೋರಾಗಿರುವ ಸಮಯದಲ್ಲೇ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಹಾಗಾದರೆ ಸಮೀಕ್ಷೆಗಳು ಹೇಳೋದು ಏನು?

Explore What Lok Sabha Election Survey Says

2024ರ ಲೋಕಸಭೆ ಗೆಲುವು ಯಾರಿಗೆ?

ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಗೆಲ್ಲಲು ಕೆಲವು ತಿಂಗಳ ಹಿಂದಷ್ಟೇ, ವಿರೋಧ ಪಕ್ಷಗಳ ನಾಯಕರು ಒಗ್ಗೂಡಿ ಹೊಸ ಒಕ್ಕೂಟ ರಚಿಸಿದ್ದರು. 'ಇಂಡಿಯಾ' ಎಂದು, ಹೊಸ ಒಕ್ಕೂಟಕ್ಕೆ ಹೆಸರು ಕೂಡ ಇಟ್ಟಿದ್ದಾರೆ. ಹೀಗಾಗಿ ಈ ಬಾರಿ ಲೋಕಸಭೆ ಚುನಾವಣೆ, ಜಿದ್ದಾ ಜಿದ್ದಿಯಿಂದ ಕೂಡಿರಲಿದೆ ಎನ್ನಲಾಗಿತ್ತು. ಆದ್ರೆ ಈಗ ಹೊರಬಿದ್ದಿರುವ ಸಮೀಕ್ಷೆ ಎಲ್ಲ ಕುತೂಹಲಕ್ಕೆ ಉತ್ತರ ನೀಡುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯಲಿರುವ ಲೋಕಸಭೆ ಕುರುಕ್ಷೇತ್ರದ ಅಖಾಡದಲ್ಲಿ ಗೆಲ್ಲೋದು ಯಾರು ಗೊತ್ತೆ?

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿಗೆ ಜಯ?

ಹೌದು 'ಜನ್‌ಮತ್ ಪೋಲ್ಸ್' ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಬಿಜೆಪಿ ಪಕ್ಷವೇ ಸ್ವತಂತ್ರವಾಗಿ ಸರ್ಕಾರ ರಚಿಸುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿ 300 ರಿಂದ 303 ಸ್ಥಾನಗಳ ಗೆದ್ದು ಸರ್ಕಾರ ರಚಿಸಲಿದೆ ಎನ್ನಲಾಗಿದೆ. ಹಾಗೇ ಕಾಂಗ್ರೆಸ್ ಪಕ್ಷ ಕೇವಲ 57 ರಿಂದ 60 ಸ್ಥಾನ ಗೆಲ್ಲಬಹುದು ಎಂದು 'ಜನ್‌ಮತ್ ಪೋಲ್ಸ್' ಸಮೀಕ್ಷೆ ವರದಿ ಹೇಳುತ್ತಿದೆ. ಈ ಮೂಲಕವಾಗಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಏರುವುದು ಪಕ್ಕಾ ಎನ್ನಲಾಗಿದೆ. ಹಾಗೇ ಹ್ಯಾಟ್ರಿಕ್ ಸಾಧನೆ ಮಾಡಲು ಪ್ರಧಾನಿ ಮೋದಿ ಪಡೆ ಇದೀಗ ಮುನ್ನುಗ್ಗುತ್ತಿದೆ.

ಮೋದಿ ಸರ್ಕಾರಕ್ಕೆ 10 ವರ್ಷದ ಸಂಭ್ರಮ

2014ರಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ಅವರ ಸರ್ಕಾರ 10 ವರ್ಷ ಪೂರೈಸಿ, ಮತ್ತೊಂದು ದಶಕಕ್ಕೆ ಕಾಲಿಡುತ್ತಿದೆ. ಹೀಗಾಗಿ 2024 ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 'ಎನ್‌ಡಿಎ' ಒಕ್ಕೂಟ ಗೆಲುವಿಗೆ ತಂತ್ರ ರೂಪಿಸುತ್ತಿದ್ದರೂ ಮತ್ತೊಂದು ಕಡೆ ವಿರೋಧ ಪಕ್ಷಗಳು ಇಂಡಿಯಾ ಒಕ್ಕೂಟ ರಚಿಸಿವೆ. ಹೀಗಾಗಿ ಈ ಬಾರಿ 2 ಕಡೆ ಜಿದ್ದಾಜಿದ್ದಿ ಜೋರಾದ ಸಮಯದಲ್ಲೇ, 2024ರ ಲೋಕಸಭೆ ಚುನಾವಣಾ ಸಮೀಕ್ಷೆ ಸಂಚಲನ ಸೃಷ್ಟಿಸಿದೆ. ಈಗ ಹೊರಬಿದ್ದಿರುವ ಸಮೀಕ್ಷೆಗಳು ಬಿಜೆಪಿಗೆ ಗೆಲುವು ಪಕ್ಕಾ ಅಂತಿವೆ.

Explore What Lok Sabha Election Survey Says

ಒಟ್ನಲ್ಲಿ ಸಮೀಕ್ಷೆಗಳು ಹೀಗೆ ಹೇಳುತ್ತಿವೆ ಆದ್ರೆ ಪಕ್ಕಾ ಫಲಿತಾಂಶ ಹೇಗಿರಲಿದೆ ಅನ್ನೋದು ಈಗ ಕುತೂಹಲ ಕೆರಳಿಸಿದೆ. ಇನ್ನೇನು ಕೆಲವೇ ದಿನದಲ್ಲಿ ಚುನಾವಣೆ ನಡೆಯಲಿದ್ದು, ಗ್ಯಾರಂಟಿ ರಿಸಲ್ಟ್ ಆಗಲೇ ಹೊರಬೀಳಲಿದೆ. ಆದರೆ ಸಮೀಕ್ಷೆಗಳ ವರದಿ ಮಾತ್ರ ಬಿಜೆಪಿ ಪರವಾಗಿಯೇ ಇದ್ದು ಭಾರಿ ಕೂತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+