3ನೇ ಮಹಾಯುದ್ಧ ಫಿಕ್ಸ್?: ‘ಗುರೂ ತಾಕತ್ ಇದ್ರೆ ಮುಟ್ಟು ನೋಡೋಣ’!
ಭೂಮಿ ಮೇಲೆ ಮೊದಲು ಹುಟ್ಟಿದ್ದು ಮನುಷ್ಯನಾ? ಉತ್ತರ ಸಿಂಪಲ್, ಇಲ್ಲ. ಆದ್ರೆ ಈಗ ಭೂಮಿ ನಾಶ ಮಾಡಲು ಮನುಷ್ಯನೇ ರಣಕಹಳೆ ಮೊಳಗಿಸಿದ್ದಾನೆ. ಒಂದು ದೇಶ ಕಂಡರೆ ಮತ್ತೊಂದು ದೇಶಕ್ಕೆ ದ್ವೇಷ, ಒಬ್ಬರು ಬೆಳೆದರೆ ಇನ್ನೊಂದು ರಾಷ್ಟ್ರಕ್ಕೆ ಅಸೂಯೆ. ಎಲ್ಲಾ ತೊಳಲಾಟಗಳ ನಡುವೆ ಈಗಾಗಲೇ ಪ್ರಪಂಚದಲ್ಲಿ 2 ಭೀಕರ ಯುದ್ಧ ನಡೆಯುತ್ತಿವೆ. ಹೀಗೆ ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಪುಟಾಣಿ ದೇಶವೊಂದು ಅಮೆರಿಕ ವಿರುದ್ಧ ಈಗ ಯುದ್ಧಕ್ಕೆ ಮುಂದಾಗಿದೆ!
ಅಮೆರಿಕ ಅಂದರೆ ಸೂಪರ್ ಪವರ್, ಆ ಪವರ್, ಈ ಪವರ್.. ಅನ್ನೋ ಮಾತು ಆಗಾಗ ಕೇಳಿಬರುತ್ತವೆ. ಆದರೆ ಇಂತಹ ಸೂಪರ್ ಪವರ್ ದೇಶಕ್ಕೆ ಪವರ್ ಫುಲ್ ಆವಾಜ್ ಹಾಕಿದೆ ಇಲ್ಲೊಂದು ಪುಟಾಣಿ ದೇಶ. ಮೊದಲಿಂದ ಅಮೆರಿಕದ ಶತ್ರು ಅಂತಾನೇ ಗುರುತಿಸಿಕೊಂಡು ಬಂದಿರುವ ಉತ್ತರ ಕೊರಿಯಾ ಈಗ ಅಮೆರಿಕ ವಿರುದ್ಧ ಯುದ್ಧಕ್ಕೆ ರಣಕಹಳೆ ಮೊಳಗಿಸುವ ಎಚ್ಚರಿಕೆ ರವಾನಿಸಿದೆ. ಹಾಗಾದ್ರೆ ದಿಢೀರ್ ಹೀಗೆ ಉತ್ತರ ಕೊರಿಯಾ ರೊಚ್ಚಿಗೆದ್ದಿದ್ದು ಏಕೆ? ಅಮೆರಿಕ ಏನಾದರೂ ಕಿತಾಪತಿ ಮಾಡಿದೆಯಾ?

'ವೈಟ್ ಹೌಸ್' ಫೋಟೋ ಕ್ಲಿಕ್ ಕ್ಲಿಕ್?
ನಿಮಗೆ ಗೊತ್ತಿರುವಂತೆ ನವೆಂಬರ್ 21 ರಂದು ಉತ್ತರ ಕೊರಿಯಾ ತನ್ನ ಮೊದಲ ಉಪಗ್ರಹ ಉಡಾವಣೆ ಮಾಡಿದೆ. ಆದರೆ ಹೀಗೆ ಉತ್ತರ ಕೊರಿಯಾ ತನ್ನ ಮೊಟ್ಟ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಮಾಡಿರುವುದು ಅಮೆರಿಕ ನಿದ್ದೆಗೆಡಿಸಿದೆ.
ಇದು ಸಾಲದು ಎಂಬಂತೆ, ಆಗಾಗ ಉತ್ತರ ಕೊರಿಯಾ 'ತೋಳ ಬಂತು ತೋಳ' ಕಥೆ ಹೇಳುತ್ತಲೇ ಬಂದಿದೆ. ಹೀಗಾಗಿ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ತಿಕ್ಕಾಟ ಜೊರಾಗಿದೆ. ಕೆಲವು ದಿನ ಹಿಂದಷ್ಟೇ ಅಮೆರಿಕದ 'ವೈಟ್ ಹೌಸ್' ಫೋಟೋ ಸೆರೆ ಹಿಡಿದಿದೆ ನಮ್ಮ ಉಪಗ್ರಹ ಅಂತಾ ಹೇಳಿತ್ತು ಉತ್ತರ ಕೊರಿಯಾ. ಹೀಗಿದ್ದಾಗಲೇ ತನ್ನ ವರಸೆ ಬದಲಿಸಿದೆ ಸರ್ವಾಧಿಕಾರಿ ನಾಡು!
'ಗುರೂ ತಾಕತ್ ಇದ್ರೆ ಮುಟ್ಟು ನೋಡೋಣ'
ಹೌದು, ತನ್ನ ಶತ್ರು ದೇಶ ಉತ್ತರ ಕೊರಿಯಾ ಹೀಗೆಲ್ಲಾ ಆವಾಜ್ ಹಾಕುವಾಗ ಅಮೆರಿಕದ ಸರ್ಕಾರ ಸುಮ್ಮನೆ ಕೂರಲು ಆಗುತ್ತಾ? ಇಲ್ಲ, ಈ ಕಾರಣಕ್ಕೆ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿತ್ತು ಅಮೆರಿಕ. ಹೀಗಾಗಿ ಉತ್ತರ ಕೊರಿಯಾಗೆ ತನ್ನ ಉಪಗ್ರಹಕ್ಕೆ ಆಪತ್ತು ಉಂಟಾಗುವ ಭಯ ಕಾಡುತ್ತಿದೆ.

ಇದೇ ಕಾರಣಕ್ಕೆ ಈಗ ಖಡಕ್ ಎಚ್ಚರಿಕೆ ನೀಡಿರುವ ಉತ್ತರ ಕೊರಿಯಾ, ಅಕಸ್ಮಾತ್ ಉತ್ತರ ಕೊರಿಯಾದ ಉಪಗ್ರಹನ ಅಮೆರಿಕ ಟಚ್ ಮಾಡಿದ್ರೆ ಆ ಕ್ಷಣವೇ ಯುದ್ಧ ಸಾರುತ್ತೇವೆ ಅಂತಿದೆ. ಹೀಗೆ ಅಮೆರಿಕ ವಿರುದ್ಧ ಉ.ಕೊರಿಯಾ ರಣಕಹಳೆ ಮೊಳಗಿಸಿದೆ.
ತಂಟೆಗೆ ಬಂದರೆ ಸರಿ ಇರಲ್ಲ!
ಇದೀಗ ಉತ್ತರ ಕೊರಿಯಾ ರಕ್ಷಣಾ ಸಚಿವ ನೀಡಿರುವ ಎಚ್ಚರಿಕೆಯ ಮಾತಿನಂತೆ, ಅಮೆರಿಕ ಅಕಸ್ಮಾತ್ ಉತ್ತರ ಕೊರಿಯಾ ಉಪಗ್ರಹದ ಮೇಲೆ ದಾಳಿ ಮಾಡಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದಿದೆ. ಈ ಹಿನ್ನೆಲೆ ತಮ್ಮ ಉಪಗ್ರಹ ಮುಟ್ಟಿದರೆ, ಯುದ್ಧ ಗ್ಯಾರಂಟಿ ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ ಉತ್ತರ ಕೊರಿಯಾ. ಮೊದಲೇ ಹಳಸಿದ ಹಪ್ಪಳ ಆಗಿದ್ದ ಅಮೆರಿಕ & ಉತ್ತರ ಕೊರಿಯಾ ಸಂಬಂಧ ಈಗ ಸೀದು ಹೋದಂತಾಗಿದೆ.












Click it and Unblock the Notifications