ಕೊರೊನಾ ಸೋಂಕಿನ ಎಚ್ಚರಿಕೆ ಕೊಡುತ್ತಿವೆ ಈ ಏಳು ಹೊಸ ಲಕ್ಷಣಗಳು...
ನವದೆಹಲಿ,
ಫೆಬ್ರುವರಿ 11: ಮೂಲತಃ ಉಸಿರಾಟಕ್ಕೆ ಸಮಸ್ಯೆ ತಂದೊಡ್ಡುವ ಕೊರೊನಾ ಸೋಂಕಿನ ಕೆಲವು ಪ್ರಮುಖ ಲಕ್ಷಣಗಳ ಕುರಿತು ಜನರಿಗೆ ತಿಳಿದಿದೆ. ಆದರೆ ಕೊರೊನಾ ಸೋಂಕಿನ ಕುರಿತು ಆಳ ಅಧ್ಯಯನ ನಡೆಸಿರುವ ಕೆಲವು ತಜ್ಞರು ಸೋಂಕಿನ ಇನ್ನಷ್ಟು ಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ಈ
ಮಾರಕ ಕಾಯಿಲೆಯನ್ನು ಸೂಚಿಸುವ ಇನ್ನಿತರೆ ಲಕ್ಷಣಗಳನ್ನು ನಮೂದಿಸಿದ್ದು, ಈ ಸೂಚನೆಗಳಿಂದ ಶೀಘ್ರವೇ ಪರೀಕ್ಷೆಗೆ ಒಳಪಟ್ಟರೆ ವ್ಯಾಪಕವಾಗಿ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ. ವಾರಿಂಗ್ಟನ್, ಚೆಷೈರ್, ಬ್ರಿಟನ್ ಈ ಹೊಸ ಏಳು ಕೊರೊನಾ ಸೋಂಕಿನ ಲಕ್ಷಣಗಳನ್ನು ಪಟ್ಟಿ ಮಾಡಿವೆ. ಅವುಗಳು ಇಂತಿವೆ... id='are-slot-2' class='oiad oi-axt oiadv'>
ಸೋಂಕಿನ ಏಳು ಹೊಸ ಲಕ್ಷಣಗಳು
- ಗಂಟಲು ಕೆರೆತ- ಗಂಟಲು ನೋವಿನೊಂದಿಗೆ ತೀವ್ರ ಗಟಲು ಕೆರೆತ ಕೊರೊನಾ ಸೋಂಕಿನ ಲಕ್ಷಣವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
- ಸ್ನಾಯು ಹಾಗೂ ಸಂಧಿನೋವು ಮೂಳೆಗಳ ವಿಪರೀತ ನೋವು ಹಾಗೂ ಸಂಧಿಗಳ ಸೆಳೆತ ಕೊರೊನಾ ಸೋಂಕಿನ ಲಕ್ಷಣಗಳಲ್ಲಿ ಒಂದು ಎಂದು ತಜ್ಞರು ಪಟ್ಟಿ ಮಾಡಿದ್ದಾರೆ.
- ಬೇಧಿ ಹಾಗೂ ಕಣ್ಣುರಿಯೂತ ಕೂಡ ಸೋಂಕಿನ ಲಕ್ಷಣ ಎನ್ನಲಾಗುತ್ತಿದೆ.
- ವಿಪರೀತ ತಲೆ ನೋವು ಸೋಂಕನ್ನು ಸೂಚಿಸುತ್ತಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
- ಚರ್ಮದಲ್ಲಿ ತುರಿಕೆ ಹಾಗೂ ಬೆರಳು, ಕಾಲ್ಬೆರಳುಗಳ ಬಣ್ಣದಲ್ಲಿ ಬದಲಾವಣೆ ಕಂಡುಬರುವುದು ಕೂಡ ಸೋಂಕಿನ ಸೂಚನೆ ಎಂದು ತಿಳಿದುಬಂದಿದೆ.

ಸೋಂಕಿನ ಸಾಮಾನ್ಯ ಲಕ್ಷಣಗಳು ಯಾವುವು?
ಜ್ವರ, ಒಣಕೆಮ್ಮು, ಸುಸ್ತು ಹಾಗೂ ಉಸಿರಾಟದಲ್ಲಿ ತೊಂದರೆ, ಶೀತ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣ ಎಂದು ಗುರುತಿಸಲಾಗಿತ್ತು. ಇದೀಗ ಈ ಲಕ್ಷಣಗಳೊಂದಿಗೆ ಸೋಂಕಿನ ಹೊಸ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ.

ಗಂಭೀರ ಲಕ್ಷಣಗಳಿವು
* ಉಸಿರಾಟದಲ್ಲಿ ಏರುಪೇರು ಅಥವಾ ಉಸಿರಾಡಲು ಅಸಾಧ್ಯವೆನಿಸುವುದು
* ಎದೆ ನೋವು
* ಮಾತು ಹಾಗೂ ಚಲನೆ ನಿಲ್ಲುವುದು

ಎಚ್ಚರಿಕೆ ನೀಡಿದ ತಜ್ಞರು
ವಾರಿಂಗ್ಟನ್ ಆರೋಗ್ಯಾಧಿಕಾರಿ ತಾರಾ ರಾಜ್ ಈ ಕುರಿತು ಮಾಹಿತಿ ನೀಡಿದ್ದು, "ಕೊರೊನಾ ವೈರಸ್ ದೃಢಪಟ್ಟ ವ್ಯಕ್ತಿಗಳಲ್ಲಿ ಈ ಹೊಸ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಈ ಲಕ್ಷಣಗಳನ್ನೂ ನಿರ್ಲಕ್ಷಿಸುವಂತಿಲ್ಲ. ಇಂಥ ಸೂಚನೆಗಳು ದೊರೆಯುತ್ತಿದ್ದಂತೆ ಚಿಕಿತ್ಸೆ ದೊರೆಯುವುದು ಸೂಕ್ತ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications